ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್‌ನಲ್ಲಿ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಸ್ಕಾರ್ಲೆಟ್ ರೆಡ್ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಮೂರು ಬಣ್ಣಗಳ ಮಿಶ್ರಣವನ್ನು ಒಳಗೊಂಡಿದೆ. ಆದ್ದರಿಂದ ಸಂಪೂರ್ಣ ಮುಂಭಾಗದ ಪ್ಯಾನೆಲ್, ಫ್ಲೋರ್‌ಬೋರ್ಡ್ ಪ್ಯಾನಲ್ ಮತ್ತು ಫ್ರಂಟ್ ಫೆಂಡರ್‌ನಲ್ಲಿ ಕೆಂಪು ಬಣ್ಣವಿದೆ. ಆದರೆ ಹಿಂದಿನ ವಿಭಾಗವು ಕೆಂಪು, ನೀಲಿ ಮತ್ತು ಬೂದು ಮುಖ್ಯಾಂಶಗಳೊಂದಿಗೆ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತದೆ. ಈ ಹೊಸ ಬಣ್ಣದ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ. ಅದೇನೇ ಇದ್ದರೂ, ಈ ಬಣ್ಣವನ್ನು ಹೊರತುಪಡಿಸಿ, ಮೇಸ್ಟ್ರೋ ಎಡ್ಜ್ 110 ಇತರ ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಆರಂಭಿಕ ಬೆಲೆಯು ರೂ.65,900 ಆಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಹೊಸದಾಗಿ ಬಿಡುಗಡೆಗೊಂಡ ಈ ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ, ಈ ಮೆಸ್ಟ್ರೋ ಎಡ್ಜ್ ಸ್ಕೂಟರಿನಲ್ಲಿ ಹೆಚ್ಚು ವರ್ಣರಂಜಿತ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದರಿಂದ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಈ ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.75 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಯುನಿಟ್ ಅನ್ನು ಜೋಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಈ ಹೊಸ ಸ್ಕೂಟರಿನಲ್ಲಿ ಎಕ್ಸ್‌ಸೆನ್ಸ್ ತಂತ್ರಜ್ಞಾನ ಮತ್ತು ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಒಳಗೊಂಡಿರುವುದರಿಂದ ಹೆಚ್ಚಿನ ಮೈಲೇಜ್ ಅನ್ನು ಒದಗಿಸುತ್ತದೆ. ಈ ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಲೈಟ್ ಸ್ಟೋವೇಜ್ ಲೈಟ್ ಹೊಂದಿರುವ ಯುಎಸ್ಬಿ ಪೋರ್ಟ್, ಫ್ಯೂಯಲ್ ಫಿಲ್ಲರ್ ಕ್ಯಾಪ್ ಮತ್ತು ಕಾಂಬಿನೇಶನ್ ಲಾಕ್ ಅನ್ನು ಸಹ ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಇನ್ನು ಈ ಸ್ಕೂಟರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟೇಶನ್ ಕನ್ಸೋಲ್ ಜೊತೆಗೆ ಆನ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ ಸರ್ವಿಸ್ ರಿಮೈಂಡರ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್ ಅನ್ನು ಒಳಗೊಂಡಿದೆ. ಇನ್ನು ಈ ಹೊಸ ಸ್ಕೂಟರಿನಲ್ಲಿ 12 ಇಂಚಿನ ವ್ಹೀಲ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ 10 ಇಂಚಿನ ವ್ಹೀಲ್ ಅನ್ನು ಅಳವಡಿಸಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಇನ್ನು ಈ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿಲ್ಲ. ಇದರಲ್ಲಿ ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಿದೆ. ಈ ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಆಕರ್ಷಕ ವಿನ್ಯಾಸ, ಉತ್ತಮ ಮೈಲೇಜ್ ಮತ್ತು ಅಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ,

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಇದರೊಂದಿಗೆ ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಸ್ಕೂಟರ್ ಬೆಲೆಯು ರೂ.69,500 ಆಗಿದೆ. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಸ್ಕೂಟರ್ ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಹೊಸ ಜುಬಿಲೆಂಟ್ ಹಳದಿ ಬಣ್ಣವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಸ್ಕೂಟರ್ ಹೀರೋಸ್ i3S ತಂತ್ರಜ್ಞಾನ (ಐಡಲ್-ಸ್ಟಾಪ್-ಸ್ಟಾರ್ಟ್ ಸಿಸ್ಟಂ), ಕಾಲ್ ಮತ್ತು SMS ಅಲರ್ಟ್ ನೊಂದಿಗೆ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಮೆಟಲ್ ಫ್ರಂಟ್ ಫೆಂಡರ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಆಯಾಮಗಳಿಗೆ ಸಂಬಂಧಿಸಿದಂತೆ,

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಏಕೆಂದರೆ ಇದು ಒಟ್ಟಾರ 1,769 ಎಂಎಂ ಉದ್ದ, 704 ಎಂಎಂ ಅಗಲ ಮತ್ತು 1,162 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ, ಇನ್ನು 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 106 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಈ ಹೊಸ ಸ್ಕೂಟರ್ 4.8 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Hero Maestro Edge 110 ಸ್ಕೂಟರ್ ಬಿಡುಗಡೆ

ಹೊಸ ಹೀರೋ ಮೆಸ್ಟ್ರೋ ಎಡ್ಜ್ ಸ್ಕೂಟರ್ 112 ಕೆಜಿ ತೂಕವನ್ನು ಹೊಂದಿದೆ. ಈ ಸ್ಕೂಟರ್ 5 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಮೆಸ್ಟ್ರೋ ಎಡ್ಜ್ 110 ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6ಜಿ ಮತ್ತು ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ಈ ಸ್ಕೂಟರ್ ಹೊಸ ಬಣ್ಣದ ಅಯ್ಕೆಯೊಂದಿಗೆ ಈ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Hero motocorp launched maestro edge 110 new colour in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X