ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ(Hero Xpulse 200 4V) ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನಲ್ಲಿ 4ವಿ ಸೆಟಪ್ ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಡ್ಯುಯಲ್ ಪರ್ಪಸ್ ಅಡ್ವೆಂಚರ್ ಟೂರರ್ ಬೈಕ್ ತನ್ನ ವಿಭಾಗದಲ್ಲಿ ಎಂಟ್ರಿ ಲೆವೆಲ್ ಬೈಕ್ ಆಗಿ ಸ್ಥಾನವನ್ನು ಪಡೆದುಕೊಂಡಿದೆ, ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮೇಲಿನ ವಿಭಾಗದಲ್ಲಿ ಗಣನೀಯವಾಗಿ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ ಇದು ಯಾವುದೇ ನೇರ ಪ್ರತಿಸ್ಪರ್ಧಿ ಹೊಂದಿಲ್ಲ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಈ ಬೈಕಿನಲ್ಲಿ 199.5 ಸಿಸಿ ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟೆಡ್ ನಾಲ್ಕು ವಾಲ್ವ್ ಆಯಿಲ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.8 ಬಿಹೆಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪವರ್‌ಟ್ರೇನ್ ಐದು-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

2ವಿ ಟೆಕ್ ಹೊಂದಿರುವ ಅದೇ ಎಂಜಿನ್ 17.8 ಬಿಎಚ್‌ಪಿ ಮತ್ತು 16.45 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ಹೊಸ ಬೈಕಿನ ನಾಲ್ಕು ವಾಲ್ವ್ ಎಂಜಿನ್ ಪವರ್ ಮತ್ತು ಟಾರ್ಕ್ ತುಸು ಹೆಚ್ಚು ಉತ್ಪಾದಿಸುತ್ತದೆ, ಕಾರ್ಯಕ್ಷಮತೆ ಹೆಚ್ಚಳದ ಜೊತೆಗೆ, ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕ್ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಹೊಸ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಟ್ರಯಲ್ ಬ್ಲೂ, ಬ್ಲಿಟ್ಜ್ ಬ್ಲೂ ಮತ್ತು ರೆಡ್ ರೈಡ್ ಎಂಬ ಮೂರು ಹೊಸ ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನಲ್ಲಿ ಪರಿಷ್ಕೃತ ಸ್ವಿಚ್‌ಗಿಯರ್ ಎಂಜಿನ್ ಕಟ್-ಆಫ್ ಬಟನ್ ಮತ್ತು ಇಂಟಿಗ್ರೇಟೆಡ್ ಸ್ಟಾರ್ಟರ್‌ನೊಂದಿಗೆ ಬರುತ್ತದೆ ಆದರೆ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಬ್ಲೂಟೂತ್‌ನೊಂದಿಗೆ ಎಲ್‌ಸಿಡಿ ಇನ್ಸ್ ಟೂಮೆಂಟ್ ಕ್ಲಸ್ಟರ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಇನ್ನು ಈ ಬೈಕಿನ ಇತರ ಮುಖ್ಯಾಂಶಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಂ, ನಯವಾಗಿ ಕಾಣುವ ಟೈಲ್ ಲ್ಯಾಂಪ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರರೊಂದಿಗೆ ಕೆಲವು ಉತ್ತಮ ಫೀಚರ್ಸ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ 190 ಎಂಎಂ ಸಸ್ಪೆನ್ಷನ್ ಟ್ರಾವೆಲ್ ಮತ್ತು ಹಿಂಭಾಗದಲ್ಲಿ 10-ಸ್ಟೆಪ್ ಪ್ರಿಲೋಡ್-ಅಡ್ಜಸ್ಟಬಲ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಎರಡೂ ಆಫ್-ರೋಡಿಂಗ್ ಹೋಗಲು ಟ್ಯೂನ್ ಮಾಡಲಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಈ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರ ಬ್ಲಾಕ್ ಟೈರ್ ಟೈರ್‌ಗಳು ಮತ್ತು ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಇನ್ನು ಹೀರೋ ಕನೆಕ್ಟ್ ಹಲವಾರು ಕನೆಕ್ಟಿವಿಟಿ ಫೀಚರ್ಸ್ ಗಳನ್ನು ನೀಡುತ್ತದೆ. ಟಾಪ್ಲ್ ಅಲರ್ಟ್ ಫೀಚರ್ ಈಗ ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 ನೊಂದಿಗೆ ಲಭ್ಯವಿದೆ. ಬೈಕಿ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಬೈಕ್ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ವೈಶಿಷ್ಟ್ಯವು ಜೀವ ರಕ್ಷಕವಾಗಬಹುದು. ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಪರಿಸ್ಥಿತಿ ಅಗತ್ಯವಿದ್ದಲ್ಲಿ ವೈದ್ಯಕೀಯ ಸಹಾಯವನ್ನು ಕೋರಬಹುದು. ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ. ಹೀರೋ ಕನೆಕ್ಟ್ ಫೀಚರ್ ಎಕ್ಟ್ರೀಮ್ 160ಆರ್, ಎಕ್ಸ್‌ಪಲ್ಸ್ 200, ಪ್ಲೆಷರ್ ಪ್ಲಸ್ ಮತ್ತು ಪ್ಲೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಲ್ಲಿಯು ಲಭ್ಯವಿದೆ. ಹೀರೋ ಕನೆಕ್ಟ್ ಫೀಚರ್ ಹೆಚ್ಚು ಉಪಯುಕ್ತ ಫೀಚರ್ ಆಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Hero Xpulse 200 4V ಬೈಕ್ ಬಿಡುಗಡೆ

ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನಲ್ಲಿ 21 ಇಂಚಿನ ಮುಂಭಾಗ ಮತ್ತು 18 ಇಂಚಿನ ಹಿಂದಿನ ಚಕ್ರಗಳನ್ನು ಹೊಂದಿವೆ. ಇನ್ನು ಈ ಬೈಕಿನ ಸೀಟ್ 823 ಎಂಎಂ ಎತ್ತರವನ್ನು ಹೊಂದಿದೆ. ಈ ಅಡ್ವೆಂಚರ್ ಟೂರರ್ ಬೈಕ್ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಕರ್ಬ್ ತೂಕವು 157 ಕಿಲೋಗ್ರಾಂಗಳಷ್ಟಿದೆ ಮತ್ತು ಇಂಧನ ಟ್ಯಾಂಕ್ ಸಾಮರ್ಥ್ಯವು 13 ಲೀಟರ್ ಗಳಾಗಿದೆ.

Most Read Articles

Kannada
English summary
Hero motocorp launched xpulse 200 4v in india price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X