ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ಕಂಪನಿಯು ದುಬೈನಲ್ಲಿ ಹೊಸ ವಿಶೇಷ ಡೀಲರ್‌ಶಿಪ್ ಅನ್ನು ಉದ್ಘಾಟಿಸುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಹೊಸ ಅತ್ಯಾಧುನಿಕ ಡೀಲರ್‌ಶಿಪ್ 625 ಚದರ ಅಡಿಗಳಿಂದ ಕೂಡಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಈ ಹೊಸ ಹೀರೋ ಡೀಲರ್‌ಶಿಪ್ ನಲ್ಲಿ ಸೇಲ್ಸ್, ಸರ್ವಿಸ್ ಮತ್ತು ಅಕ್ಸೆಸರೀಸ್ ಗಳು ಲಭ್ಯವಿರುತ್ತದೆ. ಹೀರೋ ಮೋಟೋಕಾರ್ಪ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಸಂಪೂರ್ಣ ಸರಣಿಯನ್ನು ಸಹ ಪ್ರದರ್ಶಿಸುತ್ತದೆ. ಕಾರ್ಯಾಗಾರವು ಎರಡು ಸೇವಾ ವಿಭಾಗವನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ-ದರ್ಜೆಯ ಮಾರಾಟದ ನಂತರದ ಸೇವಾ ಅನುಭವ ಮತ್ತು ಬಿಡಿಭಾಗಗಳನ್ನು ಒದಗಿಸುತ್ತದೆ. ಹೊಸ ದುಬೈ ಡೀಲರ್‌ಶಿಪ್‌ನೊಂದಿಗೆ ಹೀರೋ ಮೋಟೋಕಾರ್ಪ್ಈಗ ಗಲ್ಫ್ ಮಾರುಕಟ್ಟೆಯಲ್ಲಿ 5 ದೇಶಗಳಲ್ಲಿ 10 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಹೀರೋ ಮೋಟೋಕಾರ್ಪ್‌ನ ಗ್ಲೋಬಲ್ ಬ್ಯುಸಿನೆಸ್ ಮುಖ್ಯಸ್ಥರಾದ ಸಂಜಯ್ ಭಾನ್ ಅವರು ಮಾತನಾಡಿ, "ಗಲ್ಫ್ ಪ್ರದೇಶವು ನಮ್ಮ ಅಗ್ರೇಸಿವ್ ಜಾಗತಿಕ ವಿಸ್ತರಣಾ ಯೋಜನೆಗಳ ಪ್ರಮುಖ ಭಾಗವಾಗಿದೆ. ನಮ್ಮ ಉದ್ದೇಶವು ವಿಶ್ವದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಗ್ರಾಹಕರಿಗೆ ತಲುಪಿಸುವುದು ಮತ್ತು ಉತ್ತೇಜನ ನೀಡುವುದು. ನಾವು ನಮ್ಮ ಗ್ರಾಹಕರಿಗೆ ವ್ಯಾಪಕವಾದ ಮಾರಾಟದ ನಂತರದ ಬೆಂಬಲವನ್ನು ಒದಗಿಸುವತ್ತ ಗಮನಹರಿಸುತ್ತಿದ್ದೇವೆ ಮತ್ತು ಈ ಮಾರುಕಟ್ಟೆಯಲ್ಲಿ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಉದ್ಘಾಟನೆಯ ಸಮಯದಲ್ಲಿ, 100 ಹೀರೋ ಮೋಟೋಕಾರ್ಪ್ ಮೋಟಾರ್‌ಸೈಕಲ್‌ಗಳನ್ನು ಎಸ್‌ಎಸ್ ಡೆಲಿವರಿ ಸರ್ವಿಸಸ್ ಎಲ್‌ಎಲ್‌ಸಿಗೆ ಹಸ್ತಾಂತರಿಸಲಾಯಿತು, ಇದು ಪ್ರದೇಶದ ಪ್ರಮುಖ ಆಹಾರ ವಿತರಣಾ ಅಗ್ರಿಗೇಟರ್‌ಗಳಿಗೆ ಆದ್ಯತೆಯ ಪಾಲುದಾರ. ಹೀರೋ ಮೋಟೋಕಾರ್ಪ್ 2018 ರಲ್ಲಿ ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಕಂಪನಿಯ ವಿಶೇಷ ವಿತರಕರಾದ Afriventures FZE ಸಹಯೋಗದೊಂದಿಗೆ. ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಹೊಂದಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಕುವೈತ್, ಕತಾರ್ ಮತ್ತು ಈ ಪ್ರದೇಶದ ಐದು ದೇಶಗಳಲ್ಲಿ ಆರು ಡೀಲರ್‌ಶಿಪ್‌ಗಳು ಮತ್ತು ಸೇವಾ ಕೇಂದ್ರಗಳು ಮತ್ತು ನಾಲ್ಕು ಬಿಡಿ ಭಾಗಗಳ ಔಟ್‌ಲೆಟ್‌ಗಳು ಸೇರಿದಂತೆ 10 ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳ ವೇಗವಾಗಿ ಬೆಳೆಯುತ್ತಿರುವ ನೆಟ್‌ವರ್ಕ್ ಮೂಲಕ ಹೀರೋ ಮೋಟೋಕಾರ್ಪ್ ಈ ಪ್ರದೇಶದಲ್ಲಿ ತನ್ನ ಗ್ರಾಹಕರಿಗೆ ಪೂರೈಸುತ್ತದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಸೌದಿ ಅರೇಬಿಯಾ ಹೀರೋ ಮೋಟೋಕಾರ್ಪ್‌ನ ಈ ಪ್ರದೇಶದಲ್ಲಿನ ಸಮಗ್ರ ಉತ್ಪನ್ನ ಶ್ರೇಣಿಯು ಹೀರೋ ಇಗ್ನಿಟರ್ 125, ಹೀರೋ ಹಂಕ್ 150, ECO 150 ಕಾರ್ಗೋ ಮತ್ತು ECO 150 ಸೇರಿದಂತೆ ಎಂಟ್ರಿ ಲೆವೆಲ್ ನಿಂದ ಪ್ರೀಮಿಯಂ ಮಟ್ಟಗಳವರೆಗಿನ ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಇನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ. ಇದೀಗ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಈ ಹೊಸ ಮಾದರಿಯನ್ನು ಹೀರೋ ಮೋಟೋಕಾರ್ಪ್ ಬಿಡುಗಡೆಗೊಳಿಸಿದೆ,

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಸ್ವದೇಶಿ ಬ್ರಾಂಡ್‌ನ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಆಗಮನದೊಂದಿಗೆ ಮತ್ತಷ್ಟು ನವೀಕರಿಸಲಾಗಿದೆ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಯೋಜನೆಯಲ್ಲಿ ನೀಡಲಾಗಿದೆ. ಹೊಸ ಹೀರೋ ಎಕ್ಸ್‌ಟ್ರೀಮ್ 160 ಆರ್ ಸ್ಟೆಲ್ತ್ ಎಡಿಷನ್ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ (ಸಿಂಗಲ್-ಚಾನೆಲ್ ಎಬಿಎಸ್‌ನೊಂದಿಗೆ ಡಬಲ್ ಡಿಸ್ಕ್) ಆಗಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಹೀರೋ ಕಂಪನಿ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಕುಡ ಹೊಸ ಬಣ್ಣದ ಆಯ್ಕೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಸ್ಕಾರ್ಲೆಟ್ ರೆಡ್ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಈ ಹೀರೋ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಮೂರು ಬಣ್ಣಗಳ ಮಿಶ್ರಣವನ್ನು ಒಳಗೊಂಡಿದೆ. ಆದ್ದರಿಂದ ಸಂಪೂರ್ಣ ಮುಂಭಾಗದ ಪ್ಯಾನೆಲ್, ಫ್ಲೋರ್‌ಬೋರ್ಡ್ ಪ್ಯಾನಲ್ ಮತ್ತು ಫ್ರಂಟ್ ಫೆಂಡರ್‌ನಲ್ಲಿ ಕೆಂಪು ಬಣ್ಣವಿದೆ. ಆದರೆ ಹಿಂದಿನ ವಿಭಾಗವು ಕೆಂಪು, ನೀಲಿ ಮತ್ತು ಬೂದು ಮುಖ್ಯಾಂಶಗಳೊಂದಿಗೆ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತದೆ. ಈ ಹೊಸ ಬಣ್ಣದ ಮೇಸ್ಟ್ರೋ ಎಡ್ಜ್ 110 ಸ್ಕೂಟರ್ ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಇನ್ನು ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.ಹೀರೋ ಮೋಟೋಕಾರ್ಪ್ ಈ ಹೊಸದಾಗಿ ಬಿಡುಗಡೆಗೊಂಡ ಎಕ್ಸ್‌ಪಲ್ಸ್ 200 4ವಿ ಬೈಕ್‍ಗಾಗಿ ಆಕ್ಸೆಸರೀಸ್ ಗಳನ್ನು ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.ಈ ಆಕ್ಸೆಸರೀಸ್ ಪಟ್ಟಿಯಲ್ಲಿ, ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್ ಮತ್ತು ಟೈಲ್ ಬ್ಯಾಗ್ ನಂತಹ ಲಗೇಜ್ ಆಯ್ಕೆಗಳನ್ನು ಆಯ್ಕೆಯ ಎಕ್ಸ್ಟ್ರಾಗಳ ಪಟ್ಟಿಯು ಒಳಗೊಂಡಿದೆ.

ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp

ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಇತರ ಜಾಗತಿಕವಾಗಿ ಯಶಸ್ವಿ ಉತ್ಪನ್ನಗಳಾದ ಎಕ್ಸ್‌ಪಲ್ಸ್ 200 ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. Hunk 160R ಬೈಕ್ ಮತ್ತು ಸ್ಕೂಟರ್‌ಗಳ ಶ್ರೇಣಿಯು ಸದ್ಯದಲ್ಲಿಯೇ ಗಲ್ಫ್ ಪ್ರದೇಶಗಲ್ಲಿ ಲಭ್ಯವಿದೆ. ಒಟ್ಟಿನಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯು ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸುತ್ತಿದೆ.

Most Read Articles

Kannada
English summary
Hero motocorp opens new dealership in dubai find here details
Story first published: Thursday, October 28, 2021, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X