ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್, ಮಿಡಲ್ ವೇಟ್ ಸೆಗ್ ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಇದರಿಂದ ಶೀಘ್ರದಲ್ಲೇ ಭಾರತದ ರಸ್ತೆಗಳಲ್ಲಿ ಹೀರೋ ರೇಸಿಂಗ್‌ ಬೈಕ್‌ಗಳನ್ನು ಕಾಣಬಹುದು.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಹಾಗೂ ಅಮೆರಿಕಾದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಕೆಲವು ತಿಂಗಳ ಹಿಂದೆ ಪಾಲುದಾರಿಕೆ ಮಾಡಿಕೊಂಡಿದ್ದವು. ಈ ಕಂಪನಿಗಳ ಪಾಲುದಾರಿಕೆಯ ನಂತರ ಈ ಸೆಗ್ ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಯ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಆದರೆ ಈ ಬಗ್ಗೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಹೀರೋ ಮೋಟೊಕಾರ್ಪ್ ಮಿಡಲ್ ವೇಟ್ ಸೆಗ್ ಮೆಂಟಿನಲ್ಲಿ ಟ್ವಿನ್ ಮಾದರಿಯ ಬೈಕ್ ಬಿಡುಗಡೆಗೊಳಿಸಲು ಚಿಂತನೆ ನಡೆಸುತ್ತಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಆಟೋ ಮೊಬೈಲ್ ಉದ್ಯಮದ ಪರಿಣಿತರು ಹೀರೋ ಮೋಟೊಕಾರ್ಪ್ ಹಾಗೂ ಹಾರ್ಲೆ ಡೇವಿಡ್ಸನ್ ಪಾಲುದಾರಿಕೆಯನ್ನು ಟಿವಿಎಸ್ ಹಾಗೂ ಬಿಎಂಡಬ್ಲ್ಯು ಕಂಪನಿಗಳ ನಡುವಿನ ಪಾಲುದಾರಿಕೆಯಂತೆ ಪರಿಗಣಿಸುತ್ತಾರೆ.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಬಿಎಂಡಬ್ಲ್ಯು ಕಂಪನಿಯ ಜಿ 310 ಆರ್ ಬೈಕಿನ ಎಂಜಿನ್ ತಂತ್ರಜ್ಞಾನವನ್ನು ಬಳಸಿಕೊಂಡು ಟಿವಿಎಸ್ ಕಂಪನಿಯ ಅಪಾಚೆ ಆರ್‌ಆರ್ 310 ಬೈಕ್ ಅನ್ನು ತಯಾರಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯ ಒಪ್ಪಂದದ ಪ್ರಕಾರ, ಸದ್ಯಕ್ಕೆ ಹಾರ್ಲೆ ಡೇವಿಡ್ಸನ್ ಕಂಪನಿಯ ಬೈಕುಗಳ ವಿತರಣೆ, ಮಾರಾಟ ಹಾಗೂ ಇತರ ಸೇವೆಗಳನ್ನು ಹೀರೋ ಮೋಟೊಕಾರ್ಪ್ ಕಂಪನಿಯು ನಿರ್ವಹಿಸುತ್ತದೆ.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಕಂಪನಿಯು ಹಾರ್ಲೆ ಡೇವಿಡ್ಸನ್ ಬೈಕಿಗಾಗಿ ಮಧ್ಯಮ ಸಾಮರ್ಥ್ಯದ ಬೈಕುಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ಇದರ ರಿಬ್ಯಾಡ್ಜ್ ಆವೃತ್ತಿಯನ್ನು ಹೀರೋ ಮೋಟೊಕಾರ್ಪ್ ಬ್ರಾಂಡ್‌ನಡಿಯಲ್ಲಿ ಸಹ ಉತ್ಪಾದಿಸಲಾಗುವುದು ಎಂದು ಹೇಳಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಪ್ರತಿ ಬೈಕ್ ಸೆಗ್ ಮೆಂಟಿನಲ್ಲಿ ಎಂಜಿನ್'ಗಳ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಿಡಲ್ ವೇಟ್ ಸೆಗ್ ಮೆಂಟಿನಲ್ಲಿ 500 ಸಿಸಿ ಎಂಜಿನ್ ಸಾಮರ್ಥ್ಯದಿಂದ 900 ಸಿಸಿ ಸಾಮರ್ಥ್ಯದ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಇದೇ ವೇಳೆ ಭಾರತೀಯ ಗ್ರಾಹಕರು 350 ಸಿಸಿಯಿಂದ 400 ಸಿಸಿ ಬೈಕ್‌ಗಳಿಗೆ ಆದ್ಯತೆ ನೀಡುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿ ಈ ಸೆಗ್ ಮೆಂಟಿನಲ್ಲಿ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯು ಪ್ರಾಬಲ್ಯವನ್ನು ಹೊಂದಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ರಾಯಲ್ ಎನ್‌ಫೀಲ್ಡ್ ಈ ಸೆಗ್ ಮೆಂಟಿನಲ್ಲಿ ಸುಮಾರು 90%ನಷ್ಟು ಪಾಲನ್ನು ಹೊಂದಿದೆ. ಹೀರೋ ಮೋಟೊಕಾರ್ಪ್‌ ಕಂಪನಿಯು ಈ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಿರುವ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ ಬೈಕಿಗೆ ಪೈಪೋಟಿ ನೀಡಲಿದೆ.

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಕಂಪನಿಯ ಸಿಎಫ್‌ಒ ನಿರಂಜನ್ ಗುಪ್ತಾ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಈ ಬೈಕುಗಳ ಕೆಲಸ ಆರಂಭವಾಗಿದೆ. ಆದರೆ, ಈ ಬೈಕ್‌ಗಳನ್ನು ಯಾವಾಗ ಪರಿಚಯಿಸಲಾಗುವುದು ಎಂಬ ಬಗ್ಗೆ ಸದ್ಯಕ್ಕೆ ತೀರ್ಮಾನಿಸಿಲ್ಲ ಎಂದು ಹೇಳಿದರು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮಿಡಲ್ ವೇಟ್ ಸೆಗ್'ಮೆಂಟಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಹೀರೋ ಮೋಟೊಕಾರ್ಪ್

ಹಾರ್ಲೆ ಡೇವಿಡ್ಸನ್ ಕಂಪನಿಯ ನೆರವಿನಿಂದ ಹೀರೋ ಮೋಟೊಕಾರ್ಪ್ ಕಂಪನಿಯು ಮಿಡಲ್ ವೇಟ್ ಸೆಗ್ ಮೆಂಟಿನಲ್ಲಿ ಉತ್ತಮ ಬೈಕುಗಳನ್ನು ಬಿಡುಗಡೆಗೊಳಿಸಲು ಸಾಧ್ಯವಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ.

Most Read Articles

Kannada
English summary
Hero Motocorp to launch new bike in middle weight segment. Read in Kannada.
Story first published: Thursday, May 20, 2021, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X