ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ವಿಧಿಸಲಾಗಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮವು ಸಹ ಸ್ತಬ್ಧವಾಗಿದೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮಕ್ಕೆ ಇದೀಗ ಮತ್ತೊಮ್ಮೆ ಲಾಕ್‌ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಸಂಪೂರ್ಣವಾಗಿ ನೆಲ ಕಚ್ಚಿದೆ. ಕೋವಿಡ್ ಹೆಚ್ಚಳ ನಡುವೆಯೂ ದೇಶದ ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ನಡೆಸುತ್ತಿದ್ದರೆ ಇನ್ನು ಕೆಲವು ವಾಹನ ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ವಾಹನ ಉತ್ಪಾದನೆಯನ್ನು ಬಂದ್ ಮಾಡಿವೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಕೂಡಾ ಕಳೆದ ತಿಂಗಳು 22ರಿಂದಲೇ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದು, ಇದೀಗ ವಾಹನ ಉತ್ಪಾದನೆಯನ್ನು ಪುನಾರಂಭಿಸುವ ನಿರ್ಧಾರಕ್ಕೆ ಬಂದಿದೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಕೋವಿಡ್ ತೀವ್ರ ಹೆಚ್ಚಳದ ಹಿನ್ನಲೆ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದ ಕಂಪನಿಯು ಇದೀಗ ಉತ್ಪಾದನೆಯನ್ನು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕಾರ್ಯನಿರ್ವಹಿಸಲು ನಿರ್ಧರಿಸಿದ್ದು, ನಿರಂತರ ವಾಹನ ಉತ್ಪಾದನೆಯ ಸ್ಥಗಿತದಿಂದ ಭಾರೀ ಪ್ರಮಾಣದ ಆರ್ಥಿಕ ನಷ್ಟ ಭೀತಿ ವ್ಯಕ್ತಪಡಿಸಿದೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಜೀವದ ಜೊತೆಗೆ ಜೀವನ ನಿರ್ವಹಣೆಗಾಗಿ ಉದ್ಯೋಗ ಭದ್ರತೆಯು ಸಹ ಪ್ರಮುಖವಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ಹಂತದಲ್ಲೂ ಸುರಕ್ಷಾ ಮಾರ್ಗಸೂಚಿ ಪಾಲನೆಯೊಂದಿಗೆ ಉತ್ಪಾದನೆ ಕೈಗೊಳ್ಳಲು ವಿವಿಧ ಆಟೋ ಕಂಪನಿಗಳು ಸಜ್ಜುಗೊಳ್ಳುತ್ತಿವೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಕೋವಿಡ್ 2ನೇ ಅಲೆಯು ಕಳೆದ ವಾರಕ್ಕಿಂತಲೂ ಈ ವಾರ ತುಸು ತಗ್ಗಿದ್ದು, ಮುಂದಿನ ವಾರ ವಿವಿಧ ರಾಜ್ಯ ಸರ್ಕಾರಗಳು ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅನುಮತಿಯೊಂದಿಗೆ ಲಾಕ್‌ಡೌನ್ ಮುಂದುವರಿಸುವ ಸಿದ್ದತೆಯಲ್ಲಿರುವುದರಿಂದ ಹೀರೋ ಮೋಟೊಕಾರ್ಪ್ ಸೇರಿದಂತೆ ವಿವಿಧ ಆಟೋ ಕಂಪನಿಗಳು ವಾಹನ ಉತ್ಪಾದನೆಗೆ ಚಾಲನೆ ನೀಡುತ್ತಿವೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಮೇ 24ರಿಂದ ಹೊಸ ವಾಹನ ಉತ್ಪಾದನೆಯನ್ನು ಪುನಾರಂಭ ಮಾಡಲು ನಿರ್ಧಿಸಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಸಂಕಷ್ಟದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ್ದು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಕೋವಿಡ್ ಸೋಂಕಿತರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆ ಒದಗಿಸಲು ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ವಿವಿಧ ರಾಜ್ಯಗಳಲ್ಲಿ ಆಕ್ಸಿಜನ್ ಸೌಲಭ್ಯ ಒಳಗೊಂಡ ಕೇರ್ ಸೆಂಟರ್ ಆರಂಭಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ನೋಯ್ದಾ ಮತ್ತು ಹರಿದ್ವಾರದಲ್ಲಿರುವ ರಾಮಕೃಷ್ಣ ಮಿಷನ್ ಸೇವಾಶ್ರಮದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ನೋಯ್ಡಾದಲ್ಲಿ 100 ಹಾಸಿಗೆ ಮತ್ತು ಹರಿದ್ವಾರದಲ್ಲಿ 122 ಹಾಸಿಗೆಗಳ ಸೌಲಭ್ಯದ ಕೋವಿಡ್ ಕೇರ್ ಕೇಂದ್ರಗಳ ಮೂಲಕ ಸೇವೆಗಳನ್ನು ನೀಡಲಾಗುತ್ತಿದೆ.

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು 'ಹೀರೋ ವಿ ಕೇರ್' ಸಾಮಾಜಿಕ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ನೋಯ್ಡಾ ಮತ್ತು ಹರಿದ್ವಾರ ಜಿಲ್ಲಾಡಳಿತವು ಹೀರೋ ಕೇರ್ ಸೆಂಟರ್‌ಗಳಲ್ಲಿ ವೈದ್ಯಕೀಯ ಸೇವೆಗಳನ್ನು ನಿರ್ವಹಣೆ ಮಾಡುತ್ತಿದೆ.

MOST READ: ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ಮೇ 24ರಿಂದ ಬೈಕ್ ಉತ್ಪಾದನೆಯನ್ನು ಪುನಾರಂಭಿಸಲು ನಿರ್ಧರಿಸಿದ ಹೀರೋ ಮೋಟೊಕಾರ್ಪ್

ಕೋವಿಕ್ ಕೇರ್ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ದೆಹಲಿ ಮತ್ತು ಎನ್‍ಸಿಆರ್, ಹರಿಯಾಣ, ಉತ್ತರಾಖಂಡ್, ರಾಜಸ್ತಾನ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ವೈಯಕ್ತಿಕ ಪ್ರಯಾಣಕ್ಕಾಗಿ ಕಂಪನಿಯು ತನ್ನ ಮೋಟಾರ್‌ಸೈಕಲ್‌ಗಳ ಜೊತೆ ಬೈಕ್ ಆ್ಯಂಬುಲೆನ್ಸ್ ಸಹ ಒದಗಿಸುತ್ತಿದೆ.

Most Read Articles

Kannada
English summary
Story first published: Saturday, May 22, 2021, 20:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X