ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯ ತಿದ್ದುಪಡಿ ತಂದಿದ್ದು, ಹೊಸ ಯೋಜನೆ ಅಡಿಯಲ್ಲಿ ಇವಿ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಸಬ್ಸಡಿ ನೀಡಲು ಒಪ್ಪಿಗೆ ಸೂಚಿಸಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಇವಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಫೇಮ್ 2 ಯೋಜನೆಯ ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ. 5 ಸಾವಿರದಿಂದ ರೂ. 30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿರುವುದು ಇವಿ ವಾಹನಗಳ ಮಾರಾಟ ಸುಧಾರಣೆಗೆ ಮಹತ್ವದ ನಿರ್ಧಾರವಾಗಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಹೊಸ ಸಬ್ಸಡಿ ತಿದ್ದುಪಡಿಯನ್ನು ಘೋಷಣೆ ಮಾಡುತ್ತಿದ್ದಂತೆ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್‌ಗಳ ಬೆಲೆ ಕಡಿತ ಮಾಡಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ತನ್ನ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ ಮಾಡಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಹೊಸ ಸಬ್ಸಡಿ ಅನುಮೋದನೆಗೆ ಮೊದಲು ಎಕ್ಸ್‌ಶೋರೂಂ ಪ್ರಕಾರ ರೂ. 61,640 ಬೆಲೆ ಹೊಂದಿದ್ದ ಅಪ್ಟಿಮಾ ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯು ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಸ್ಕೂಟರ್ ರೂ. 53,600ಕ್ಕೆ ಲಭ್ಯವಾಗಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡ್ಡಾಯವಾಗಿ ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಜೊತೆಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡವನ್ನು ಜಾರಿಗೆ ತಂದಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಹೊಸ ಮಾನದಂಡಗಳಿಗೂ ಪೂರಕವಾದ ವೈಶಿಷ್ಟ್ಯತೆ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಮಾದರಿಯು 42 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 82 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಅಪ್ಟಿಮಾ ಹೆಚ್ಎಕ್ಸ್ ಮಾದರಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಎಕ್ಸೆಂಡ್ ಬ್ಯಾಟರಿ ರೇಂಜ್ ಮಾದರಿಯನ್ನು ಸಹ ಮಾರಾಟ ಮಾಡುತ್ತಿದ್ದು, ಎಕ್ಸೆಂಡ್ ಬ್ಯಾಟರಿ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 122 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಂಗಲ್ ಬ್ಯಾಟರಿ ವರ್ಷನ್ ಅಥವಾ ಎಕ್ಸೆಂಡ್ ಬ್ಯಾಟರಿ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಖರೀದಿ ಮಾಡಬಹುದಾಗಿದ್ದು, ಹೆಚ್ಚಿನ ಮೈಲೇಜ್ ಹೊಂದಿರುವ ಮಾದರಿಗೆ ಎಕ್ಸ್‌ಶೋರೂಂ ಪ್ರಕಾರ ರೂ.58,980 ಬೆಲೆ ನಿಗದಿ ಮಾಡಲಾಗಿದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

1200 ವ್ಯಾಟ್ ಎಲೆಕ್ಟ್ರಿಕ್ ಮೋಟರ್‌ ಹೊಂದಿರುವ ಅಪ್ಟಿಮಾ ಹೆಚ್ಎಸ್ ಮಾದರಿಯು 51.2 ವಿ / 30 ಎಎಚ್ ಪೋರ್ಟಬಲ್ ಬ್ಯಾಟರಿ ಹೊಂದಿದ್ದು, ಈ ಎಲೆಕ್ಟ್ರಿಕ್ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ಐದು ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಫೇಮ್ 2 ಸಬ್ಸಡಿ ಹೆಚ್ಚಳ ನಂತರ ಹೀರೋ ಅಪ್ಟಿಮಾ ಹೆಚ್ಎಕ್ಸ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಏಪ್ರನ್-ಮೌಂಟೆಡ್ ಟರ್ನ್ ಇಂಡಿಕೇಟರ್ಸ್, ಯುಎಸ್‌ಬಿ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12 ಇಂಚಿನ ಅಲಾಯ್ ವೀಲ್ಸ್, ರಿಮೋಟ್ ಲಾಕ್, ಎಲ್ಇಡಿ ಹೆಡ್‌ಲೈಟ್ ಮತ್ತು ಆಂಟಿ-ಥೆಫ್ಟ್ ಅಲಾರಂ ಸೇರಿದಂತೆ ಪ್ರಮುಖ ಫೀಚರ್ಸ್‌ಗಳಿದ್ದು, ಬೆಲೆ ಇಳಿಕೆಯಾಗಿರುವುದು ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

Most Read Articles

Kannada
English summary
Hero Optima HX Prices Reduced Under Fame-2 Subsidy. Read in Kannada.
Story first published: Friday, June 18, 2021, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X