Just In
- 58 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 59 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹೀರೋ ಎಕ್ಸ್ಪಲ್ಸ್ 200ಟಿ ಬೈಕ್
ದೇಶದ ಅತಿ ದೊಡ್ಡ ದ್ವಿಚಕ್ರ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಎಕ್ಸ್ಪಲ್ಸ್ 200ಟಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ನವೀಕರಣಗಳೊಂದಿಗೆ ಹೀರೋ ಎಕ್ಸ್ಪಲ್ಸ್ 200ಟಿ ಬೈಕ್ ಬಿಡುಗಡೆಯಾಗಲಿದೆ.

ಹೀರೋ ಮೋಟೊಕಾರ್ಪ್ ತನ್ನ ಎಕ್ಸ್ಪಲ್ಸ್ 200ಟಿ ಬೈಕಿನ ಟೀಸರ್ ಅನ್ನು ಕಳೆದ ವರ್ಷದಲ್ಲೇ ಬಿಡುಗಡೆಗೊಳಿಸಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಬೈಕು ಇಂದಿಗೂ ಬಿಡುಗಡೆಯಾಗಲಿಲ್ಲ. ಇದೀಗ ಹೀರೋ ಎಕ್ಸ್ಪಲ್ಸ್ 200ಟಿ ಬೈಕಿನ ವಿಶೇಷಗಳು ಬಹಿರಂಗವಾಗಿವೆ. ಆದರೆ ಈ ಹೊಸ ಬೈಕಿನಲ್ಲಿ ಆಯಿಲ್-ಕೂಲರ್ ಅನ್ನು ಒಳಗೊಂಡಿಲ್ಲ. ಇದರಲ್ಲಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ 200ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ 200ಸಿಸಿ ಎಂಜಿನ್ 18.4 ಬಿಹೆಚ್ಪಿ ಪವರ್ ಮತ್ತು 16.45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್

ಈ ಹೊಸ ಹೀರೋ ಎಕ್ಸ್ಪಲ್ಸ್ 200ಟಿ ಬೈಕ್177 ಮೀ,ಮೀ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ.

ಹೊಸ ಎಕ್ಸ್ಪಲ್ಸ್ 200ಟಿ ಬೈಕ್ ಪ್ಯಾಂಥರ್ ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್ ಮತ್ತು ಮ್ಯಾಟ್ ಶೀಲ್ಡ್ ಗೋಲ್ಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಆಯಿಲ್-ಕೂಲರ್ ಇಲ್ಲದೆ, ಹೀರೋ ಬೈಕ್ಗೆ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಬಿಎಸ್-4 ಹೀರೋ ಎಕ್ಸ್ಪಲ್ಸ್ 200ಟಿ ಬೈಕಿಗೆ ಸುಮಾರು ರೂ.1.05 ಲಕ್ಷ ಬೆಲೆಯನ್ನು ಹೊಂದಿತ್ತು. ಇನ್ನು ಹೊಸ ಮಾದರಿಗೆ ಅಂದಾಜು ರೂ, 1.10 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಹೊಸ ಹೀರೋ ಎಕ್ಸ್ಪಲ್ಸ್ 200ಟಿ ಬೈಕ್ ಒಂದೆರಡು ದಿನಗಳಲ್ಲಿ ಡೀಲರುಗಳನ್ನು ತಲುಪಬಹುದು ಎಂದು ವರದಿಗಳಾಗಿದೆ. ಇನ್ನು ಹಿಂದಿನ ಮಾದರಿಯಲ್ಲಿದ್ದ ಸೀಟ್ ಅನ್ನು ಬದಲಾಯಿಸುವ ಸಾಧ್ಯತೆಗಳಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಬಿಎಸ್ 6 ಎಕ್ಸ್ಪಲ್ಸ್ 200ಟಿ ಬೈಕಿನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಫೀಚರ್ ಅನ್ನು ಒಳಗೊಂಡಿರಬಹುದು. ಅದೇ ರೀತಿ ಈ ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ನೀಡಲಾಗುತ್ತದೆ. ಇದು ಸವಾರಿಗೆ ಸುಲಭವಾಗಿ ಓದುವ ರೀತಿ ಇರುತ್ತದೆ.

ಹೀರೋ ಎಕ್ಸ್ಪಲ್ಸ್ 200 ಮಾದರಿಯು ಇತ್ತೀಚೆಗೆ ಕೇರಳದಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ. ಹೀರೋ ಎಕ್ಸ್ಪಲ್ಸ್ 200 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ. ಅದೇ ರೀತಿ ಹೊಸ ಎಕ್ಸ್ಪಲ್ಸ್ 200ಟಿ ಬೈಕ್ ಕೂಡ ಗ್ರಾಹಕರನ್ನು ಸೆಳೆಯಲು ಹೊಸ ನವೀಕರಣಗಳೊಂದಿಗೆ ಬರಲಿದೆ.