ವಿಡಿಯೋ: ಹೊಸ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯನ್ನು ಕಂಪನಿಯು ಇತ್ತೀಚೆಗೆ 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಳಿಸಿ ಗಮನಸೆಳೆಯಿತು.

ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಂಡ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಮೋಟಾರ್‌ಸೈಕಲ್‌ ಮಾದರಿಯು ಆಕರ್ಷಕವಾದ ಆಕ್ಸೆಸರಿಸ್ ಪ್ಯಾಕೇಜ್ ಜೋಡಣೆ ಹೊಂದಿದ್ದು, ಹೊಸ ಬೈಕ್ ಮಾದರಿಯ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋದಲ್ಲಿ ವೀಕ್ಷಿಸಿಬಹುದಾಗಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಮಾದರಿಯು ರೂ. 1.16 ಲಕ್ಷ ಬೆಲೆ ಹೊಂದಿದ್ದು, ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆ ಆಕರ್ಷಕವಾಗಿದೆ.

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಬೈಕಿನಲ್ಲಿ ಪ್ರಮುಖ ಅಂಶಗಳೆಂದರೆ ಎಲ್ಇಡಿ ಟರ್ನ್ ಇಂಡಿಕೇಟರ್ಸ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಮತ್ತು ಎಲ್‌ಸಿಡಿ ಬ್ರೈಟ್ನೆಸ್ ಹೊಂದಾಣಿಕೆಯಂತಹ ಫಸ್ಟ್-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದರ ಜೊತೆಗೆ ಹೊಸ ಬೈಕಿನ ಸ್ಪೀಡೋ ಮೀಟರ್‌ನಲ್ಲಿರುವ ಗೇರ್ ಪೊಸಿಷನ್ ಇಂಡಿಕೇಟರ್ಸ್ ವೈಶಿಷ್ಟ್ಯತೆ ಒಳಗೊಂಡಿದ್ದು, ಸಾಮಾನ್ಯ ರೂಪಾಂತರದಿಂದ ತನ್ನನ್ನು ಪ್ರತ್ಯೇಕಿಸಲು ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಹೊಸ 3D ಲೋಗೋ ಬ್ರ್ಯಾಂಡಿಂಗ್ ಮತ್ತು ಹೊಸ 'ಸ್ಟೆಲ್ತ್' ಬ್ಯಾಡ್ಜ್ ಪಡೆದುಕೊಂಡಿದೆ.

ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Hero xtreme 160r stealth kannada walkaround video
Story first published: Tuesday, December 7, 2021, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X