ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಹೋಂಡಾ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಆಕ್ಟಿವಾ ಸ್ಕೂಟರ್ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಹೋಂಡಾ 2001ರಲ್ಲಿ ಆಕ್ಟಿವಾ ಮೂಲಕ ನಮ್ಮ ದೇಶದಲ್ಲಿ ದ್ವಿಚಕ್ರ ವಾಹನಗಳ ಜಾಗವನ್ನು ಪ್ರವೇಶಿಸಿದ್ದರು, ಇದು ಇಲ್ಲಿಯವರೆಗೆ ನಮ್ಮ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಬೆಳವಣಿಗೆಯು ಇತ್ತೀಚಿನ ವರ್ಷಗಳಲ್ಲಿ ತೀವ್ರ ಹೆಚ್ಚಳವನ್ನು ಕಂಡಿದೆ. ಮೊದಲ 2.5 ಕೋಟಿ ಮಾರಾಟವನ್ನು 16 ವರ್ಷಗಳ ಕಾರ್ಯಾಚರಣೆಯಲ್ಲಿ ಸಾಧಿಸಲಾಗಿದೆ ಎಂದು ಹೋಂಡಾ ಹೇಳಿದ್ದಾರೆ, ಮುಂದಿನ 2.5 ಕೋಟಿ ಯುನಿಟ್‌ಗಳು ಕೇವಲ 5 ವರ್ಷಗಳಲ್ಲಿ ಮಾರಾಟವಾದವು.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಕೆಲವು ತಿಂಗಳುಗಳ ಹಿಂದೆ ಭಾರತದಲ್ಲಿ 2.5 ಕೋಟಿ ಮಾರಾಟದ ಮೈಲಿಗಲ್ಲನ್ನು ದಾಟಿದ ಮೊದಲ ಸ್ಕೂಟರ್ ಮಾದರಿಯೆಂದರೆ ಆಕ್ಟಿವಾ ಸರಣಿ ಎಂಬುದನ್ನೂ ಗಮನಿಸಬೇಕು. ಪ್ರಸ್ತುತ, ಆಕ್ಟಿವಾ ಸರಣಿಯು ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಅನ್ನು ಒಳಗೊಂಡಿದೆ, ಇವೆರಡೂ ಬಹು ರೂಪಾಂತರಗಳನ್ನು ಹೊಂದಿವೆ. ಆಕ್ಟಿವಾ 6 ಜಿ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದರೆ, ಆಕ್ಟಿವಾ 125 ಸ್ಕೂಟರ್ 124 ಸಿಸಿ ಸಿಂಗಲ್-ಪಾಟ್ ಮೋಟಾರ್ ಪಡೆಯುತ್ತದೆ

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಮತ್ತು ಸಿಇಒ ಅತುಶಿ ಒಗಟಾ ಅವರು ಮಾತನಾಡಿ, ಎರಡು ದಶಕಗಳಿಂದ ಭಾರತೀಯ ಚಲನಶೀಲತೆ ಅಗತ್ಯತೆಗಳನ್ನು ಪೂರೈಸುತ್ತಿದೆ, ಹೋಂಡಾದಲ್ಲಿ 5 ಕೋಟಿ ಗ್ರಾಹಕರು ಪ್ರದರ್ಶಿಸಿದ ಪ್ರೀತಿ ಮತ್ತು ವಿಶ್ವಾಸದಿಂದ ನಾವು ಗೌರವಿಸಲ್ಪಟ್ಟಿದ್ದೇವೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಆರಂಭದಿಂದಲೂ, ತನ್ನ ವ್ಯಾಪಾರ ಪಾಲುದಾರರು ಮತ್ತು ಎಲ್ಲಾ ಪಾಲುದಾರರೊಂದಿಗೆ ಹೋಂಡಾ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮತ್ತು ಮಾರಾಟದ ನಂತರ ಉತ್ತಮ ಸೇವೆಯನ್ನು ನೀಡಲು ಗಮನಹರಿಸಿದೆ. ಮುಂದುವರಿಯುತ್ತಾ ನಮ್ಮ ಕೊಡುಗೆಗಳನ್ನು ಮತ್ತಷ್ಟು ವಿಸ್ತರಿಸಲು ಮತ್ತು ಭಾರತದ ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಾವು ಆಶಿಸುತ್ತೇವೆ ಎಂದು ಅವರು ಮುಂದುವರಿಸಿದರು.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಹೋಂಡಾ ಭಾರತದಲ್ಲಿ ಎರಡು ಡೀಲರ್ ನೆಟ್‌ವರ್ಕ್‌ಗಳನ್ನು ಹೊಂದಿದೆ. ಇದು ರೆಡ್‌ವಿಂಗ್ ಮತ್ತು ಬಿಗ್‌ವಿಂಗ್ ಆಗಿದೆ. ಇದರಲ್ಲಿ ರೆಡ್‌ವಿಂಗ್ ನೆಟ್‌ವರ್ಕ್‌ ನಲ್ಲಿ ಆಕ್ಟಿವಾ, ಗ್ರಾಜಿಯಾ, ಹಾರ್ನೆಟ್ 2.0, ಸಿಬಿ200ಎಕ್ಸ್, ಇತ್ಯಾದಿಗಳಂತಹ ಒಳ್ಳೆ ಮಾದರಿಗಳನ್ನು ಹೊಂದಿದ್ದರೆ, ಬಿಗ್‌ವಿಂಗ್ ನೆಟ್‌ವರ್ಕ್‌ ನಲ್ಲಿ ಸಿಬಿ350, ಹೈನಸ್350, ಸಿಬಿಆರ್650ರ್, ಸಿಬಿಆರ್650ರ್, ಆಫ್ರಿಕಾ ಟ್ವಿನ್, ಗೋಲ್ಡ್ ವಿಂಗ್, ಮುಂತಾದ ಬ್ರ್ಯಾಂಡ್‌ನ ಪ್ರೀಮಿಯಂ ಮಾದರಿಗಳನ್ನು ಒಳಗೊಂಡಿದೆ,

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಹೋಂಡಾ ತನ್ನ ಬಿಗ್‌ವಿಂಗ್ ಡೀಲರ್ ನೆಟ್‌ವರ್ಕ್ ಅನ್ನು ದೇಶದಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಕೆಲವು ಹೊಸ ಮಾದರಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ಹೋಂಡಾ ಕಂಪನಿಯು ತನ್ನ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 4,82,756 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಇನ್ನು ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 19,077 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 5,26,865 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ, ವರ್ಷದಿಂದ ವರ್ಷದ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕುಸಿತವನ್ನು ಕಂಡಿದೆ. ಇನ್ನು ಕಳೆದ ವರ್ಷ ಹೋಂಡಾ 25,978 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ವರ್ಷದ ರಫ್ತಿಗೆ ಹೋಲಿಸಿದರೆ ಕುಸಿತವನ್ನು ಕಂಡಿದೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ಇತ್ತೀಚೆಗೆ ತೆರೆದಿದೆ. ಈ ಶೋರೂಂ ಮೂಲಕ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಲಿದ್ದಾರೆ. ಹೋಂಡಾ ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದು. ಹೋಂಡಾ ಮೋಟಾರ್‌ಸೈಕಲ್ ಈ ವರ್ಚುವಲ್ ಶೋರೂಂ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ಬೈಕ್ ಖರೀದಿಸಬಹುದು. ಹೋಂಡಾ ಬಿಗ್‌ವಿಂಗ್‌ನ ವೆಬ್‌ಸೈಟ್ www.hondabigwingindia.com ವರ್ಚುವಲ್ ಶೋರೂಂ ಮೂಲಕ ಗ್ರಾಹಕರು ಬೈಕ್ ಖರೀದಿಸಬಹುದು.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ವಿಭಿನ್ನ ಬೈಕ್ ಗಳ ಆಕ್ಸೇಸರಿಸ್'ಗಳು ವರ್ಚುವಲ್ ಶೋರೂಂನಲ್ಲಿ ಲಭ್ಯವಿರುವುದರಿಂದ ಗ್ರಾಹಕರು ಬೈಕ್ ಖರೀದಿಸುವಾಗ ಅವುಗಳನ್ನು ಕಸ್ಟಮೈಸ್ ಮಾಡಬಹುದು. ವರ್ಚುವಲ್ ಶೋರೂಂನಲ್ಲಿ ಬೈಕ್ ಖರೀದಿಸುವ ಅನುಭವವು ನೈಜ ಶೋರೂಂನಲ್ಲಿ ಬೈಕ್ ಖರೀದಿಸಿದಂತೆ ಮಾಡಲು ಬೈಕಿನ 360 ಡಿಗ್ರಿ ಚಿತ್ರಗಳನ್ನು ಕೂಡ ತೋರಿಸಲಾಗುತ್ತದೆ.

ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Honda

ಈ ಚಿತ್ರಗಳು ಬೈಕಿನ ಪ್ರತಿಯೊಂದು ಭಾಗದ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ. ಇದರ ಹೊರತಾಗಿ ಆಡಿಯೋ, ವೀಡಿಯೊ ಮೂಲಕ ಬೈಕ್‌ಗಳ ಪ್ರತಿಯೊಂದು ಬಿಡಿ ಭಾಗಗಳ ಬಗ್ಗೆಯೂ ವಿವರವಾದ ಮಾಹಿತಿಯನ್ನು ನೀಡಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಹ್ವರ್ಚುವಲ್ ಚಾಟ್ ಸಪೋರ್ಟ್ ಸಹ ನೀಡಲಾಗುತ್ತದೆ. ಇದರಿಂದ ಗ್ರಾಹಕರ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗಲಿದೆ. ತಮ್ಮ ಹೋಂಡಾ ಬೈಕ್ ಅನ್ನು ಕಸ್ಟಮೈಸ್ ಮಾಡಿದ ನಂತರ ಗ್ರಾಹಕರು ತಮ್ಮ ಹತ್ತಿರದ ಬಿಗ್ ವಿಂಗ್ ಡೀಲರ್‌ಶಿಪ್‌ನಿಂದ ಬೈಕ್ ವಿತರಣೆಯನ್ನು ಪಡೆದು ಕೊಳ್ಳಬಹುದು.

Most Read Articles

Kannada
English summary
Hmsi two wheeler sales cross 5 crore milestone in india details
Story first published: Thursday, October 7, 2021, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X