ಯಾವ ಸ್ಕೂಟರ್ ಕೂಡ ತಲುಪದ ಮೈಲಿಗಲ್ಲು ತಲುಪಿದ ಹೋಂಡಾ ಆಕ್ಟಿವಾ

ಕೇವಲ 20 ವರ್ಷಗಳಲ್ಲಿ 2.5 ಕೋಟಿ ಮಾರಾಟವಾಗುವ ಮೂಲಕ ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 2.5 ಕೋಟಿ ಮಾರಾಟದ ಗಡಿಯನ್ನು ದಾಟಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಹೋಂಡಾ ಆಕ್ಟಿವಾ ಪಾತ್ರಾವಗಿದೆ.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಈ ಜನಪ್ರಿಯ ಮತ್ತು ಹೆಚ್ಚು ಯಶಸ್ವಿಗಳಿಸಿದ ಆಕ್ಟಿವಾ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಎರಡು ದಶಕಗಳನ್ನು ಪೂರೈಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ 2001ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. 102 ಸಿಸಿ ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 2003-04ರ ವೇಳೆಗೆ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿತ್ತು. ನಂತರದ ಎರಡು ವರ್ಷಗಳಲ್ಲಿ ಮಾರಟದಲ್ಲಿ 10 ಲಕ್ಷ ಮೈಲಿಗಲ್ಲು ಸಾಧಿಸಿತು.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಆರನೇ ತಲೆಮಾರಿನ ಮಾದರಿ ಮಾರಾಟವಾಗುತ್ತಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 20 ವರ್ಷಗಳ ಯಶ್ವಸಿ ಓಟವನ್ನು ಪೂರೈಸಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಈ ಸಂಭ್ರಮದ ಪ್ರಯುಕ್ತ ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ತನ್ನ ಆಕ್ಟಿವಾ 6ಜಿ ಸ್ಕೂಟರ್‌ನ ಹೊಸ ಸ್ಪೆಷಲ್ 20ನೇ ವರ್ಷದ ಆನಿವರ್ಸರಿ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ವ್ಯವಸ್ಥಾಪಕ ನಿರ್ದೇಶಕ ಅಟ್ಸುಶಿ ಒಗಾಟಾ ಮಾತನಾಡಿ, 2001ರಲ್ಲಿ ಪ್ರಾರಂಭವಾದಾಗಿನಿಂದ, ಅದು 100-110 ಸಿಸಿ ಎಂಜಿನ್ ಆಗಿರಲಿ ಅಥವಾ ಹೊಸ ಪವರ್ ಫುಲ್ 125ಸಿಸಿ ಎಂಜಿನ್ ಆಗಿರಲಿ, ಆಕ್ಟಿವಾ ಕುಟುಂಬದ ಯಶಸ್ಸಿನ ರಹಸ್ಯವು ನಂಬಿಕೆಯನ್ನು ಬೆಳೆಸುವ ನಾಯಕ ಆಕ್ಟಿವಾ ಆಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

20 ವರ್ಷಗಳ ನಂತರ, ಆಕ್ಟಿವಾ ತಾಂತ್ರಿಕ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ, ಅದು 2001ರಲ್ಲಿ ಹೋಂಡಾ ಪೇಟೆಂಟ್ ಪಡೆದ ಟಫ್-ಅಪ್ ಟ್ಯೂಬ್ ಮತ್ತು ಸಿಎಲ್‍ಸಿ ಕಾರ್ಯವಿಧಾನವಾಗಲಿ, 2009 ರಲ್ಲಿ ಈಕ್ವಲೈಜರ್‌ನೊಂದಿಗೆ ಹೋಂಡಾದ ಕಾಂಬಿ-ಬ್ರೇಕ್ ಸಿಸ್ಟಂ ಆಗಿರಬಹುದು.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಅದೇ ರೀತಿ 2013ರಲ್ಲಿ ಶೇ.10 ರಷ್ಟು ಮೈಲೇಜ್ ಹೆಚ್ಚಿಸುವ ಕ್ರಾಂತಿಕಾರಿ ಹೋಂಡಾ ಇಕೋ ಟೆಕ್ನಾಲಜಿ (ಎಚ್‌ಇಟಿ) ಆಗಿರಬಹುದು, ಇನ್ನು ಬಿಎಸ್- 6 ಯುಗದಲ್ಲಿ ಇಎಸ್ಪಿ ಮತ್ತು ವರ್ಲ್ಡ್ ಫಸ್ಟ್ ಎಚ್‌ಇಟಿ ಪಿಜಿಎಂ-ಫೈ ಎಂಜಿನ್ ಅನ್ನು ಆಕ್ಟಿವಾ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

2015-16ರಲ್ಲಿ ಆಕ್ಟಿವಾ ಒಂದು ಕೋಟಿ ಮಾರಾಟವನ್ನು ತಲುಪಿದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ಐದು ವರ್ಷಗಳಲ್ಲಿ, ಹೋಂಡಾ ಆಕ್ಟಿವಾ 1.5 ಕೋಟಿ ಹೆಚ್ಚು ಗ್ರಾಹಕರನ್ನು ಗಳಿಸಿ 2.5 ಕೋಟಿ ಮಾರಾಟದ ಗಡಿಯನ್ನು ತಲುಪಿದೆ.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

2017-18ರ ಅವಧಿಯಲ್ಲಿ ಆಕ್ಟಿವಾ 5 ಜಿ ಅನ್ನು ಹೊಸ ಡಿಲಕ್ಸ್ ರೂಪಾಂತರದೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಪೊಸಿಷನ್ ಲ್ಯಾಂಪ್, ಡಿಜಿಟಲ್-ಅನಲಾಗ್ ಮೀಟರ್ ಮತ್ತು ಸೀಟ್ ಓಪನರ್ ಸ್ವಿಚ್‌ನೊಂದಿಗೆ 4-ಇನ್ -1 ಲಾಕ್ ಅನ್ನು ಒಳಗೊಂಡಿತ್ತು.

2.5 ಕೋಟಿ ಮಾರಾಟದ ಮೈಲಿಗಲ್ಲು ತಲುಪಿದ ಮೊದಲ ಸ್ಕೂಟರ್ ಹೋಂಡಾ ಆಕ್ಟಿವಾ

ಆಕ್ಟಿವಾ 6ಜಿ ಸ್ಕೂಟರ್ 26 ಹೊಸ ಪೇಟೆಂಟ್ ಅಪ್ಲಿಕೇಶನ್‌ಗಳು ಮತ್ತು ಶೇ.13 ಹೆಚ್ಚಿನ ಮೈಲೇಜ್ ನೀಡುವ 125 ಸಿಸಿ ಆವೃತ್ತಿಯೊಂದಿಗೆ ಕಾರ್ಯರೂಪಕ್ಕೆ ಬಂದಂತೆ ಹೋಂಡಾ ಭಾರತದ ಮೊದಲ ಬಿಎಸ್-6 ಸ್ಕೂಟರ್ ಅನ್ನು ಪರಿಚಯಿಸಿತು. ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಹೊಸ ದಾಖಲೆಗಳನ್ನು ಸೃಷ್ಟಿಸಿ ಭರ್ಜರಿಯಾಗಿ ಮಾರಟವಾಗುತ್ತಿದೆ.

Most Read Articles

Kannada
English summary
Honda Activa Becomes First Scooter To Have 2.5 Crore Customers. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X