ಅಡ್ವೆಂಚರ್ ಬೈಕ್ ವಿಭಾಗಕ್ಕೆ ಹೊಸದಾಗಿ ಲಗ್ಗೆಯಿಟ್ಟ Honda CB200X ಬೈಕಿನ ವಿಶೇಷತೆಗಳೇನು?

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಅಡ್ವೆಂಚರ್ ವಿಭಾಗದಲ್ಲಿ ಈಗಾಗಲೇ ಹಲವು ಹೊಸ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮೊದಲ ಬಾರಿಗೆ ಎಂಟ್ರಿ ಲೆವಲ್ ಮಾದರಿಯ ಅಡ್ವೆಂಚರ್ ಆವೃತ್ತಿಗಳನ್ನು ಖರೀದಿ ಬಯುಸುವ ಗ್ರಾಹಕರಿಗಾಗಿ ಸಿಬಿ200ಎಕ್ಸ್(CB200X) ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಸಿಬಿ200ಎಕ್ಸ್ ಅಡ್ವೆಂಚರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.44 ಲಕ್ಷ ಬೆಲೆ ಹೊಂದಿದ್ದು, ದೊಡ್ಡ ಗಾತ್ರದ ಅಡ್ವೆಂಚರ್ ಬೈಕ್ ಮಾದರಿಯಲ್ಲಿಯೇ ಈ ಬೈಕ್ ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಬೈಕ್ ಮಾದರಿಯ ವಿತರಣೆ ಆರಂಭಿಸಿರುವ ಹೋಂಡಾ ಕಂಪನಿಯು ಬೈಕಿನ ಕಾರ್ಯಕ್ಷಮತೆ ಕುರಿತಂತೆ ಇತ್ತೀಚೆಗೆ ಟೆಸ್ಟ್ ರೈಡ್ ಆಯೋಜಿಸಿತ್ತು. ಹೊಸ ಬೈಕ್ ಚಾಲನೆಗಾಗಿ ಡ್ರೈವ್‌ಸ್ಪರ್ಕ್ ತಂಡವನ್ನು ಆಹ್ವಾನಿಸಿದ್ದ ಕಂಪನಿಯು ಎಂಟ್ರಿ ಲೆವಲ್ ಅಡ್ವೆಂಚರ್ ಬೈಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಸಿಬಿ200ಎಕ್ಸ್ ಬೈಕ್ ಮಾದರಿಯು 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 16 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಅಡ್ವೆಂಚರ್ ಬೈಕ್ ಮಾದರಿಯಲ್ಲಿ ಡೈಮೆಂಡ್ ಟೈಪ್ ಫ್ರೇಮ್ ಹೊಂದಿದ್ದು, ಇದು ಈ ಅಡ್ವೆಂಚರ್ ಬೈಕ್ ಅನ್ನು ಉತ್ತಮವಾಗಿ ನಿಯಂತ್ರಣ ಮಾಡುವುದಲ್ಲದೆ ಕಾರ್ನರ್ ಗಳಲ್ಲಿ ಉತ್ತಮ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಅಡ್ವೆಂಚರ್ ಬೈಕ್ ವಿಭಾಗಕ್ಕೆ ಹೊಸದಾಗಿ ಲಗ್ಗೆಯಿಟ್ಟ Honda CB200X ಬೈಕಿನ ವಿಶೇಷತೆಗಳೇನು?

ಅಡ್ವಂಚರ್-ಟೂರರ್ ವಿಭಾಗದಲ್ಲಿರುವ ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್, ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಸೇರಿದಂತೆ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಹಲವಾರು ಹೊಸ ಫೀಚರ್ಸ್ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್‌, ಎಲ್‌ಇಡಿ ಟೈಲ್‌ಲ್ಯಾಂಪ್ಸ್, ನಾಕಲ್ ಗಾರ್ಡ್‌ಗಳು, ಸ್ಪ್ಲಿಟ್-ಸೀಟ್‌ಗಳು ಮತ್ತು ಹಝರ್ಡ್ ಲೈಟ್ ಅನ್ನು ಹೊಂದಿದೆ.

ಹೊಸ ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಹೊಂದಿದ್ದು, ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹೊಂದಿದೆ.

Most Read Articles

Kannada
English summary
Honda cb200x review video first riding impressions
Story first published: Saturday, September 25, 2021, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X