Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಡ್ವೆಂಚರ್ CB200X ಬೈಕನ್ನು ಇತ್ತೀಚೆಗೆ ಪರಿಚಯಿಸಿತು.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಈ ಹೊಸ ಸಿಬಿ200ಎಕ್ಸ್ ಬೈಕ್ ಬ್ರ್ಯಾಂಡ್‌ನ ಹಾರ್ನೆಟ್ 2.0 ನೊಂದಿಗೆ ಬಹಳಷ್ಟು ಹಂಚಿಕೊಳ್ಳುತ್ತದೆ. ಈ ಎರಡು ಬೈಕಿಗಳಲ್ಲಿ ಸಾಕಷ್ಟು ಅಂಶಗಳನ್ನು ಹಂಚಿಕೊಂಡಿದೆ. ಈ ಎರಡು ಬೈಕ್‌ಗಳಲ್ಲಿ ಒಂದೇ ರೀತಿಯ ಇಂಜಿನ್ ಮತ್ತು ಫ್ರೇಮ್ ಅನ್ನು ಒಳಗೊಂಡಿದೆ. ಇನ್ನು ಈ ಎರಡು ಬೈಕ್ ಗಳು ಸ್ಟೈಲಿಂಗ್ ಒಂದೇ ಮಾದರಿಯಲ್ಲಿದೆ. ಆದರೆ ಸಿಬಿ200ಎಕ್ಸ್ ಮಾದರಿಯು ಅಡ್ವೆಂಚರ್ ಬೈಕ್ ಆಗಿರುವುದರಿಂದ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಈ ಎರಡು ಬೈಕ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ವಿನ್ಯಾಸ

ಹೊಸ ಹೋಂಡಾ ಸಿಬಿ200ಎಕ್ಸ್ ಬೈಕ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಅಗ್ರೇಸಿವ್ ಸ್ಟೈಲಿಂಗ್ ಅಂಶಗಳನ್ನು ನೀಡಲಾಗಿದೆ. ಇದರಲ್ಲಿ ಫಾರ್ವರ್ಡ್ ಆಕರ್ಷಣೆಯೊಂದಿಗೆ ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ. ಟ್ಯಾಂಕ್ ದೊಡ್ಡ ಕವಚಗಳನ್ನು ಹೊಂದಿದೆಗೋಲ್ಡ್-ಫಿನಿಶ್ಡ್ ಯುಎಸ್ಡಿ ಫೋರ್ಕ್ಸ್ ಕಾಣುತ್ತವೆ. ಪಕ್ಕದಿಂದ, ಸಿಲೂಯೆಟ್ ನಿಮ್ಮ ಗಮನವನ್ನು ಸೆಳೆಯುತ್ತದೆ, ಈ ಬೈಕ್ ಪರ್ಲ್ ನೈಟ್ ಸ್ಟಾರ್ ಬ್ಲಾಕ್, ಮ್ಯಾಟ್ ಸಲೀನ್ ಸಿಲ್ವರ್ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ಎಂಬ ಒಟ್ಟು 3 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಹೋಂಡಾ ಹಾರ್ನೆಟ್ 2.0 ಬೈಕ್ ಸ್ಟ್ರೀಟ್ ಫೈಟರ್ ಮಾದರಿಯಾಗಿದೆ. ಫಾರ್ವರ್ಡ್ ಮನವಿಯು ಅದರ ಸಿಲೂಯೆಟ್ ಅನ್ನು ಒತ್ತಿಹೇಳುತ್ತದೆ, ಮತ್ತು ಬೀಫಿ ಟ್ಯಾಂಕ್ ಅನ್ನು ಸಹ ಪಡೆದಿದೆ. ಮುಂಭಾಗದ ಫೋರ್ಕ್‌ಗಳನ್ನು ಗೋಲ್ಡನ್ ಫಿನಿಶಿಂಗ್ ಹೊಂದಿದೆ. ಬೆಲ್ಲಿ ಪ್ಯಾನ್ ಕೂಡ ಮೋಡಿ ನೀಡುತ್ತದೆ, ಒಟ್ಟಾರೆಯಾಗಿ, ಎರಡೂ ಬೈಕ್‌ಗಳ ಆಯಾ ಬಾಡಿ ಶೈಲಿಗೆ ಅನುಗುಣವಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಹೋಂಡಾ ಹಾರ್ನೆಟ್ 2.0 ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹಾರ್ನೆಟ್ 2.0 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಅಗ್ರೇಸಿವ್ ಕ್ರೀಸ್‌ಗಳು, ಬಾಡಿ ಲೈನ್ಸ್ ಮತ್ತು ಗ್ರಾಫಿಕ್ಸ್‌ನೊಂದಿಗೆ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಫೀಚರ್ಸ್

ಹೊಸ ಹೋಂಡಾ ಸಿಬಿ200ಎಕ್ಸ್ ಬೈಕಿನಲ್ಲಿ ಅಡ್ವೆಂಚರ್ ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ನಕಲ್ ಗಾರ್ಡ್‌ಗಳು, ಸ್ಪ್ಲಿಟ್-ಸೀಟ್‌ಗಳು ಮತ್ತು ಹಝರ್ಡ್ ಲೈಟ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಈ ಬೈಕಿನ ಎರೋಗಾನಾಮಿಕ್ ಇಗ್ನಿಷನ್ ಕೀಯನ್ನು ಟ್ಯಾಂಕ್ ಮೇಲೆ ಇರಿಸಲಾಗಿದೆ. ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ನೀಡಿದೆ. ಈ ಬೈಕಿನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಈ ಹಾರ್ನೆಟ್ 2.0 ಬೈಕಿನಲ್ಲಿ ಅಲಾಯ್ ವ್ಹೀಲ್, ಅಲಾಯ್ ಫುಟ್‌ಪೆಗ್ಸ್, ಎಂಜಿನ್ ಸ್ಟಾಪ್ ಸ್ವಿಚ್, ಹಝರ್ಡ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಕ್ಸ್ ಆಕಾರದ ಎಲ್ಇಡಿ ಟೈಲ್‌ಲೈಟ್, ಎಲ್ಇಡಿ ಇಂಡಿಕೇಟರ್ ಮತ್ತು ಸಂಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಎಂಜಿನ್

ಸಿಬಿ200ಎಕ್ಸ್ ಬೈಕಿನಲ್ಲಿ ಎಂಜಿನ್ ಅನ್ನು ಹಾರ್ನೆಟ್ 2.0 ನಿಂದ ಎರವಲು ಪಡೆಯಲಾಗಿದೆ. ಈ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 16 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎರಡು ಬೈಕಿನಲ್ಲಿ ಒಂದೇ ರೀತಿಯ ಎಂಜಿನ್ ಅನ್ನು ಹೊಂದಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಸಿಬಿ200ಎಕ್ಸ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳ ವಿಷಯದಲ್ಲಿ, CB200X ಕೇವಲ ಡ್ಯುಯಲ್-ಚಾನೆಲ್ ABS ಅನ್ನು ಹೊಂದಿದೆ. ಇನ್ನು ಈ ಅಡ್ವೆಂಚರ್ ಬೈಕಿನಲ್ಲಿ ಡೈಮೆಂಡ್ ಟೈಪ್ ಫ್ರೇಮ್ ಅನ್ನು ಹೊಂದಿದೆ. ಇದು ಈ ಅಡ್ವೆಂಚರ್ ಬೈಕನ್ನು ಉತ್ತಮ ನಿಯಂತ್ರಣ ಮತ್ತು ಕಾರ್ನರ್ ಗಳಲ್ಲಿ ಉತ್ತಮ ನಿಯಂತ್ರಣದಲ್ಲಿ ಸಾಗಲು ಸಹಕಾರಿಯಾಗಿರುತ್ತದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಬೆಲೆ

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಸಿಬಿ200ಎಕ್ಸ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.44 ಲಕ್ಷಗಳಾಗಿದೆ. ಇನ್ನು ಹಾರ್ನೆಟ್ 2.0 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,1.31 ಲಕ್ಷವಾಗಿದೆ,

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಎರಡು ಬೈಕಿನಲ್ಲಿ ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ ಒಂದೇ ರೀತಿಯಲಿದೆ, ಇದು ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿರಬಹುದು. ಇನ್ನು ಈ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

Honda CB200X VS Hornet 2.0: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಹೋಂಡಾ ಸಿಬಿ200ಎಕ್ಸ್ ಬೈಕಿನ ಮುಂಭಾಗದಲ್ಲಿ 110/70 ಟೈರ್ ನೊಂದಿಗೆ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಹಿಂಭಾಗದಲ್ಲಿ : 140/70 ಟೈರ್ ನೊಂದಿಗೆ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇನ್ನು ಹಾರ್ನೆಟ್ 2.0 ಬೈಕಿನಲ್ಲಿ 17 ಇಂಚಿನ ವ್ಹೀಲ್ ಗಳಲ್ಲಿ ಮುಂಭಾಗದಲ್ಲಿ 110/70 ಮತ್ತು ಹಿಂಭಾಗದಲ್ಲಿ 140/70 ಪ್ರೊಫೈಲ್‌ಗಳನ್ನು ಒಳಗೊಂಡಿದೆ.

Most Read Articles

Kannada
English summary
Honda cb200x vs hornet 2 0 find here some top differences details
Story first published: Wednesday, September 1, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X