ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ ವಿಡಿಯೋ ರಿವ್ಯೂ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ಹೊಸ ಬದಲಾವಣೆಯೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಗ್‌ವಿಂಗ್ ಶೋರೂಂಗಳ ಮೂಲಕ ಪ್ರೀಮಿಯಂ ಬೈಕ್ ಖರೀದಿದಾರರನ್ನು ಸೆಳೆಯುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ ಜನಪ್ರಿಯ ಸಿಬಿ500ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಅನ್ನು ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಡ್ರೈವ್‌ಸ್ಪಾರ್ಕ್ ತಂಡಕ್ಕೆ ಹೊಸ ಬೈಕ್ ಕಾರ್ಯಕ್ಷಮತೆ ಕುರಿತಾಗಿ ಪರೀಕ್ಷಿಸಲು ವಿಶೇಷ ಆಹ್ವಾನ ನೀಡಿತ್ತು.

ಸಿಬಿ500ಎಕ್ಸ್ ಮಾದರಿಯನ್ನು ಮೊದಲ ಬಾರಿಗೆ 2013ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದ ಕಂಪನಿಯು ಇದುವರೆಗೆ ನಾಲ್ಕು ಬಾರಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ನವೀಕರಣಗಳೊಂದಿಗೆ ಉನ್ನತೀಕರಿಸಿದ್ದು, ಇದೀಗ ನ್ಯೂ ಜನರೇಷನ್ ಮಾದರಿಯೊಂದಿಗೆ ಮಾರಾಟ ಮಾಡುತ್ತಿದೆ. ಸಿಬಿ500ಎಕ್ಸ್ ಬೈಕ್ ಮಾದರಿಯು ಸರಳವಾದ ವಿನ್ಯಾಸವನ್ನು ಹೊಂದಿದ್ದರೂ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಅಡ್ವೆಂಚರ್ ಟೂರರ್ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕಳೆದ ತಿಂಗಳ ಹಿಂದಷ್ಟೇ ಹೊಸ ಬೈಕ್ ಮಾದರಿಯು 2021ರ ಆವೃತ್ತಿಯೊಂದಿಗೆ ಮಾರಾಟಗೊಳ್ಳುತ್ತಿದೆ.

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ ವಿಡಿಯೋ ರಿವ್ಯೂ

ಹೋಂಡಾ ಕಂಪನಿಯು ಹೊಸ ಸಿಬಿ500ಎಕ್ಸ್ ಬೈಕ್ ಮಾದರಿಯನ್ನು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಹಾಗೂ ಗ್ರ್ಯಾಂಡ್ ಪ್ರಿಕ್ಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡುತ್ತಿದ್ದು, ನವೀಕರಣ ಆವೃತ್ತಿಯೊಂದಿಗೆ ಹೊಸ ಬೈಕಿನಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ ವಿಡಿಯೋ ರಿವ್ಯೂ

ಸಿಬಿ 500ಎಕ್ಸ್ ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು ಹೊಸ ಎಮಿಷನ್ ಪ್ರೇರಿತ ಲಿಕ್ವಿಡ್ ಕೂಲ್ 471-ಸಿಸಿ ಪ್ಯಾರಾಲೆಲ್ ಟ್ವಿನ್ ಸಿಲಿಂಡರ್ ಎಂಜಿನ್‌ ಅಳವಡಿಸಿದ್ದು, ಆರು ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8,500 ಆರ್‌ಪಿಎಂನಲ್ಲಿ 46.93 ಬಿಹೆಚ್‌ಪಿ ಹಾಗೂ 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ ವಿಡಿಯೋ ರಿವ್ಯೂ

ಹೊಸ ಬೈಕಿನಲ್ಲಿರುವ ಹಿಂದಿನ ವ್ಹೀಲ್ ಅನ್ನು ಸ್ಲಿಪ್ ಹಾಗೂ ಕ್ಲಚ್ ಮೂಲಕ ಚಾಲನಾ ತಂತ್ರಜ್ಞಾನ ಹೊಂದಿದ್ದು, ದಿನಬಳಕೆಯ ಜೊತೆಗೆ ಅಡ್ವೆಂಚರ್ ಟೂರರ್ ಉದ್ದೇಶಗಳಿಗೆ ಅಭಿವೃದ್ದಿಗೊಳಿಸಲಾಗಿದೆ. ಹೊಸ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಬೆನೆಲ್ಲಿ ಟಿಆರ್‌ಕೆ 502 ಹಾಗೂ ಸುಜುಕಿ ವಿ-ಸ್ಟ್ರೋಮ್ 650 ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda CB500X Review Video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X