ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಜನಪ್ರಿಯ ಡಿಯೋ ಸ್ಕೂಟರ್ ಬೆಲೆಯನ್ನು ಪರಿಷ್ಕರಿಸಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಡಿಯೋ ಸ್ಕೂಟರ್ ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಕಂಪನಿಯು ಡಿಯೋ ಸ್ಕೂಟರ್ ಬೆಲೆಯನ್ನು ರೂ.1,237 ವರೆಗೆ ಹೆಚ್ಚಿಸಲಾಗಿದೆ. ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ರೆಪ್ಸೋಲ್ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆ ಏರಿಕೆಯ ಬಳಿಕ, ಡಿಯೋ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.64,510 ಗಳಾಗಿದೆ. ಇದು ಪ್ರತಿಸ್ಪರ್ಧಿ ಜೂಪಿಟರ್ ಸ್ಕೂಟರ್ ಗಿಂತ ರೂ.887 ಹೆಚ್ಚಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಉಳಿದಂತೆ ಡಿಎಲ್‌ಎಕ್ಸ್ ರೂಪಾಂತರದ ಬೆಲೆ ರೂ.67,908 ಆಗಿದ್ದರೆ, ಟಾಪ್-ಆಫ್-ಲೈನ್ ಡಿಯೋ ರೆಪ್ಸೋಲ್ ಎಡಿಷನ್ ಬೆಲೆಯು ರೂ.70,408 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಡಿಯೋ ಸ್ಕೂಟರ್ ಅನ್ನು 2002ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಡಿಯೋ ಸ್ಕೂಟರ್‍ ಇಲ್ಲಿಯವರೆಗೆ 33 ಲಕ್ಷ ಹೆಚ್ಚು ಗ್ರಾಹಕರನ್ನು ಹೊಂದಿದೆ. ಹೋಂಡಾ ಡಿಯೋ ಭಾರತದಿಂದ ಅತಿ ಹೆಚ್ಚು ರಫ್ತು ಮಾಡುವ ಸ್ಕೂಟರ್ ಆಗಿದೆ. ಅಲ್ಲದೇ ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್‍‍ಗಳಲ್ಲಿ ಡಿಯೋ ಕೂಡ ಒಂದಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಬಿಎಸ್-6 ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ರೇಂಜ್, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ವಿವರದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಈ ಹೋಂಡಾ ಡಿಯೋ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಡಿಯೋ ಸ್ಕೂಟರ್ ಮುಂಭಾಗ ಆಕ್ಟಿವಾ 6ಜಿ ಸ್ಕೂಟರ್‍‍ನಂತೆ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಮತ್ತು ಡಿ‍ಆರ್‍ಎಲ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಆಕ್ಟಿವಾ 6ಜಿ ಮಾದರಿಯಂತೆಯೇ ಹೋಂಡಾ ಡಿಯೊ ಕೂಡ ಅದೇ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಹೊಸ ಡಿಯೋ ಸ್ಕೂಟರ್‍‍ನಲ್ಲಿ ಸ್ಟ್ಯಾಂಡರ್ಡ್ ರೂಪಾಂತರವು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಕ್ಯಾಂಡಿ ಝಾಸಿ ಬ್ಲೂ, ಸ್ಪೋರ್ಟ್ ರೆಡ್ ಮತ್ತು ವೈಬ್ರಂಟ್ ಆರೆಂಜ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಈ ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ 110 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9 ಬಿ‍‍ಹೆಚ್‍‍ಪಿ ಪವರ್ ಮತ್ತು 8.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಡಿಯೋ ಸ್ಕೂಟರ್

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದಾಗ ಎಂಜಿನ್‍‍ನ ದಕ್ಷತೆಯ ಅಂಕಿ ಅಂಶಗಳಲ್ಲಿ ತುಸು ಕಡಿಮೆಯಾಗಿದೆ. ಹೋಂಡಾ ಡಿಯೋ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ರೇ-ಝಡ್ ಮತ್ತು ಹೀರೋ ಮೆಸ್ಟ್ರೋ ಎಡ್ಜ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda Dio Receives Price Hike. Read In Kannada.
Story first published: Tuesday, July 13, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X