ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಣಿಯನ್ನು ಸಲ್ಲಿಸಿದೆ. ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯ ಬಗ್ಗೆ ವದಂತಿಗಳಿವೆ.

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೋಂಡಾ ಕಂಪನಿಯು 2018ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರದರ್ಶಿಸಿತು. ಆದರೆ ಪೇಟೆಂಟ್ ಸಲ್ಲಿಸುವುದರಿಂದ ಭಾರತದಲ್ಲಿ ಬಿಡುಗಡೆಗೆ ಪರಿಗಣಿಸಲಾಗುತ್ತಿದೆ ಎಂದಲ್ಲ. ಇನ್ನು ಈ ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ 4.2 ಕಿ.ವ್ಯಾ ಮೋಟಾರ್ ಮತ್ತು ತೆಗೆಯಬಹುದಾದ 50.4ವಿ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇನ್ನು ಇದರಲ್ಲಿ ಚಾರ್ಜಿಂಗ್ ಕೇಬಲ್ ಮೂಲಕ ಬ್ಯಾಟರಿಯನ್ನು ತೆಗೆಯದೆ ಚಾರ್ಜ್ ಮಾಡಬಹುದು,

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಆದರೆ ತೆಗೆಯಬಹುದಾದವು ಹೆಚ್ಚುವರಿ ಅನುಕೂಲತೆಯನ್ನು ನೀಡುತ್ತದೆ. ಜಾಗತಿಕ ಮಾರುಕಟ್ಟೆಗಳಲ್ಲಿ ನೀಡಲಾಗುವ ಹೋಂಡಾ ಪಿಸಿಎಕ್ಸ್ ಸ್ಕೂಟರ್ ನಲ್ಲಿ ಹ್ರೈಬಿಡ್ ಎಂಜಿನ್ ಜೊತೆಗೆ ಫುಲ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಬರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಪಡೆದಿದೆ ಎಂದು ವರದಿಗಳು ಸೂಚಿಸುತ್ತವೆ. ಇನ್ನು ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ. ಈ ಸ್ಕೂಟರ್ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೊಸ ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅಚ್ಚುಕಟ್ಟಾದ ಲೈನ್ ಗಳೊಂದಿಗೆ ಟ್ವಿನ್-ಪಾಡ್ ಹೆಡ್‌ಲ್ಯಾಂಪ್‌ಗಳನ್ನು ಮುಂಭಾಗದಲ್ಲಿ ಮತ್ತು ಎತ್ತರದ ವಿಂಡ್‌ಸ್ಕ್ರೀನ್‌ನೊಂದಿಗೆ ಇದು ಮಿನಿ-ಮ್ಯಾಕ್ಸಿ ಸ್ಕುಟರ್ ಲುಕ್ ಅನ್ನು ನೀಡುತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸ್ಪ್ಲಿಟ್ ಫ್ಲೋರ್ಬೋರ್ಡ್, ಬ್ಲ್ಯಾಕ್ ಅಲಾಯ್ ವ್ಹೀಲ್ಸ್, ಫುಲ್ ಡಿಜಿಟಲ್ ಎಲ್ಸಿಡಿ ಪ್ಯಾನಲ್, ರಿಮೋಟ್ ಸ್ಟಾರ್ಟ್ ಕೀ ಮತ್ತು ಇತರ ಫಿಚರ್ ಗಳನ್ನು ಒಳಗೊಂಡಿದೆ. ಸೀಟ್ ಕೆಳಗಿ ಟ್ವಿನ್ ಬ್ಯಾಟರಿ ಪ್ಯಾಕ್‌ಗಳಿವೆ,

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೊಸ ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ರಿಯರ್ ಶಾಕ್ಸ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ. ಒಟ್ಟಾರೆಯಾಗಿ ಈ ಸ್ಕೂಟರ್ ನಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೊಸ ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ 40 ಕಿ.ಮೀ ರೇಂಜ್ ಅನ್ನು ಹೊಂದಿದೆ. ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸಲ್ಲಿಸುವುದು ಒಳ್ಳೆ ಸುದ್ದಿಯಾದರೂ, ಇದನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆಯೇ ಎಂಬುದು ಖಚಿತವಾಗಿಲ್ಲ.

ಭಾರತದಲ್ಲಿ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ

ಹೋಂಡಾ ಕಂಪನಿಯ ಇದರ ಜೊತೆ ಇದರ ಮಾದರಿಗಳನ್ನು ಒಳಗೊಂಡಂತೆ ಹಲವಾರು ಮಾದರಿಗಳಿಗೆ ಪೇಟೆಂಟ್ ಪಡೆದಿದೆ, ಮೂಲಗಳ ಪ್ರಕಾರ, ಕೆಲವೊಮ್ಮೆ ಈ ಪೇಟೆಂಟ್‌ಗಳನ್ನು ಭಾರತದಲ್ಲಿ ಭವಿಷ್ಯದಲ್ಲಿ ಹೋಂಡಾ ಬಿಡುಗಡೆಗೊಳಿಸಲಿರುವ ಮಾದರಿಗಳಾಗಿರುತ್ತದೆ, ಆದರೆ ಹೋಂಡಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ.

Most Read Articles

Kannada
English summary
Honda PCX Electric Scooter Patented. Read In Kannada.
Story first published: Friday, May 14, 2021, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X