ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಶೈನ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಈ ಹೋಂಡಾ ಶೈನ್ ಬೈಕ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್‍ಗಳಲ್ಲಿ ಒಂದಾಗಿದ್ದು, ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಪಡೆದುಕೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಹೋಂಡಾ ಶೈನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ರೂಪಾಂತಗಳಲ್ಲಿ ಮಾರಾಟವಾಗುತ್ತಿದೆ. ಬೆಲೆ ಏರಿಕೆ ಬಳಿಕ, ಹೋಂಡಾ ಶೈನ್‌ನ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ಈಗ ರೂ.71,550 ಆಗಿದ್ದರೆ, ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ರೂ.76,346 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಬೆಲೆ ಏರಿಕೆಯ ಹೊರತಾಗಿ, ಈ ಬೈಕಿನ ಉಳಿದ ಯಾವುದೇ ಬದಲಾವಣೆಗಳಿಲ್ಲ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಆದರೆ ಹೋಂಡಾ ಕಂಪನಿಯು ತನ್ನ ಶೈನ್ ಬೈಕಿನ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡುತ್ತಿದೆ. ಗ್ರಾಹಕರು ಹೊಸ ಶೈನ್ ಬೈಕ್ ಖರೀದಿಸುವಾಗ ರೂ.3500 ವರೆಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಲಭಿಸುತ್ತದೆ. ಆದರೆ ಇದಕ್ಕೆ ತನ್ನದೇ ಆದ ಕೆಲವು ನಿಯಮಗಳು ಮತ್ತು ಕೆಲವು ಷರತ್ತುಗಳನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಈ ಕೊಡುಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ವಹಿವಾಟಿನಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಕನಿಷ್ಠ ವಹಿವಾಟು ಮೌಲ್ಯವು ರೂ.40,000 ರೂಪಾಯಿಗಳಾಗಿರಬೇಕು ಎಂದು ಹೋಂಡಾ ಕಂಪನಿ ಹೇಳಿದೆ. ಈ ಕ್ಯಾಶ್‌ಬ್ಯಾಕ್ ಆಫರ್ ಜೂನ್ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 90 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗಿವೆ. ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಮ್ಯೂಟರ್ ಬೈಕ್ ಗಳಲ್ಲಿ ಒಂದಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಈ ಹೋಂಡಾ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಹೋಂಡಾ ಶೈನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಯುನಿಟ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿವೆ. ಇದರೊಂದಿಗೆ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು 2021ರ ಮೇ ತಿಂಗಳಿನಲ್ಲಿ ಒಟ್ಟು 58,168 ದ್ವಿಚಕ್ರ ವಾಹನಗಳ ಮಾರಾಟಗೊಳಿಸಿವೆ. ಇನ್ನು ಹೋಂಡಾ ಶೈನ್ ಬೈಕಿನ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
Honda Shine BS6 Prices Hiked. Read In Kannada.
Story first published: Friday, June 4, 2021, 21:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X