ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲೂ ಸಹ ಮುಂಚೂಣಿ ಸಾಧಿಸುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಶೋರೂಂಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಎರಡು ಮಾದರಿಯ ಬೈಕ್ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದು, 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಸಾಮಾನ್ಯ ಬೈಕ್ ಶೋರೂಂಗಳಲ್ಲಿ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳ ಮೂಲಕ ಮಾರಾಟಗೊಳಿಸುತ್ತಿದೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಹೋಂಡಾ ಸಾಮಾನ್ಯ ಶೋರೂಂ ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಜಾಲ ಹೊಂದಿದ್ದು, ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಸಹ ಗ್ರಾಹಕರ ಬೇಡಿಕೆಯೆಂತೆ ಹೆಚ್ಚಿಸಲಾಗುತ್ತಿದೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಹೈನೆಸ್ ಸಿಬಿ 350 ಕ್ಲಾಸಿಕ್ ಬೈಕ್ ಬಿಡುಗಡೆಯೊಂದಿಗೆ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇತ್ತೀಚೆಗೆ ದೆಹಲಿಯ ಕಾಂತಿ ನಗರದಲ್ಲಿ ಹೊಸ ಬಿಗ್‌ವಿಂಗ್ ಶೋರೂಂಗೆ ಚಾಲನೆ ನೀಡಿದ್ದು, ದಕ್ಷಿಣ ಭಾರತದಲ್ಲೂ ಬಿಂಗ್‌ವಿಂಗ್ ಶೋರೂಂಗಳ ಸಂಖ್ಯೆ ಹೆಚ್ಚುತ್ತಿದೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಹೊಸ ಮಾರಾಟ ಮಳಿಗೆಯ ಮೂಲಕ ಕ್ಲಾಸಿಕ್ ಬೈಕ್ ಮಾದರಿಯಾದ ಹೈನೆಸ್ ಸಿಬಿ350 ಮತ್ತು ರೆಟ್ರೋ ಮಾದರಿಯಾದ ಸಿಬಿ350 ಆರ್‌ಎಸ್ ಬೈಕ್ ಮಾರಾಟವನ್ನು ಹೆಚ್ಚಿಸುವ ನೀರಿಕ್ಷೆಯಲ್ಲಿದ್ದು, ಹೊಸ ಅಡ್ವೆಂಚರ್ ಬೈಕ್ ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲೂ ಎರಡು ಮಾದರಿಯ ಮಾರಾಟ ಸೌಲಭ್ಯಗಳನ್ನು ಪರಿಚಯಿಸಿದ್ದು, ಬಿಗ್‌ವಿಂಗ್ ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ 350 ಸಿಸಿಯಿಂದ 500 ಸಿಸಿ ಬೈಕ್ ಮಾದರಿಗಳನ್ನು ಮತ್ತು ಬಿಗ್‌ವಿಂಗ್ ಟಾಪ್‌ಲೈನ್ ಮಾರಾಟ ಮಳಿಗೆಗಳಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಸಾಮಾನ್ಯ ಬಿಗ್‌ವಿಂಗ್ ಶೋರೂಂನಲ್ಲಿ ಕಡಿಮೆ ಸಿಸಿ ಸಾಮರ್ಥ್ಯದ ಪ್ರೀಮಿಯಂ ಬೈಕ್ ಖರೀದಿಗೆ ಲಭ್ಯವಿದ್ದಲ್ಲಿ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂನಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಸೂಪರ್ ಬೈಕ್‌ಗಳು ಕೂಡಾ ಖರೀದಿಗೆ ಲಭ್ಯವಿರಲಿವೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ದೇಶದ ಪ್ರಮುಖ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂ ತೆರೆದಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ಪ್ರೀಮಿಯಂ ಬೈಕ್ ಮಾರಾಟ ಮಾಡುವ ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ದೇಶಾದ್ಯಂತ ಈ ವರ್ಷಾಂತ್ಯಕ್ಕೆ 50 ಹೊಸ ಬಿಗ್‌ವಿಂಗ್ ಶೋರೂಂಗಳು ಆರಂಭಗೊಳ್ಳುತ್ತಿದೆ.

ಪ್ರೀಮಿಯಂ ಬೈಕ್ ಬೇಡಿಕೆ ಹೆಚ್ಚಳ: ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಿದ ಹೋಂಡಾ

ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳು ಟೈರ್ 1, ಟೈರ್ 2 ನಗರಗಳಲ್ಲೂ ಕೂಡಾ ಕಾರ್ಯಾಚರಣೆ ಆರಂಭಿಸುವ ಸಿದ್ದತೆಯಲ್ಲಿದ್ದು, ಹೊಸ ಶೋರೂಂಗಳ ಮೂಲಕ ಹೊಸ ಬೈಕ್ ಮಾದರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Honda Inaugurated New Bigwing Dealership In Delhi East. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X