ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಹೋಂಡಾ ಕಂಪನಿಯು ಜಪಾನ್ ಮಾರುಕಟ್ಟೆಯಲ್ಲಿಯಲ್ಲಿ ಕ್ರಾಸ್ ಕಬ್ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಕ್ರಾಸ್ ಕಬ್ ಲಿಮಿಟೆಡ್ ಎಡಿಷನ್ ಹೊಸ ಪುಕೊ ಬ್ಲೂ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಹೊಸ ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕನ್ನು 2000 ಯುನಿಟ್ ಗಳಿಗೆ ಸಿಮೀತಗೊಳಿಸಿ ಲಿಮಿಟೆಡ್ ಎಡಿಷನ್ ಆಗಿ ಪರಿಚಯಿಸಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕ್ ಈ ವರ್ಷ ಜುಲೈ 22ರಿಂದ ಜಪಾನ್ ಮಾರುಕಟ್ತೆಯಲ್ಲಿ ಮಾರಾಟವಾಗಲಿದೆ. ಕ್ರಾಸ್ ಕಬ್ ಸರಳವಾದ ವಿನ್ಯಾಸವನ್ನು ಹೊಂದಿದೆ, ಈ ಟ್ರಯಲ್ ಬೈಕ್ ಎಲ್ಇಡಿ ಹೆಡ್ ಲೈಟ್, ಹೆಡ್ ಲೈಟ್ ಗಾರ್ಡ್, ಸೆಮಿ ಬ್ಲ್ಯಾಕ್ ಟೈರ್ ಮತ್ತು ರೇರ್ ಕ್ಯಾರಿಯರ್ ಅನ್ನು ಒಳಗೊಂಡಿದೆ. ಟ್ರಯಲ್ ಬೈಕಿನ ಬೆಲೆಯು ಜಪಾನ್ ನಲ್ಲಿ ಭಾರತೀಯ ಕರೆನ್ಸಿ ಪ್ರಕಾರ ರೂ.2.29 ಲಕ್ಷಗಳಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಹೊಸ ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕ್ ಕ್ಲಾಸಿಕಲ್ ವೈಟ್, ಪರ್ಲ್ ಶೈನಿಂಗ್ ಯೆಲ್ಲೊ, ಕ್ಯಾಮಫ್ಲೇಜ್ ಗ್ರೀನ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್‌ನಂತಹ ಬಣ್ಣಗಳ ಆಯ್ಕೆಗಳಲ್ಲಿ ಇದು ಲಭ್ಯವಿದೆ. ಆದರೆ ಗ್ರ್ಯಾಫೈಟ್ ಬ್ಲ್ಯಾಕ್ ಬಣ್ಣವು ಹೆಚ್ಚು ದುಬಾರಿಯಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಈ ಟ್ರಯಲ್ ಬೈಕಿನ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ 109 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಈ ಹೊಸ ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕಿನಲ್ಲಿ 4.3-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಇನ್ನು ಈ ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ವಿಂಗ್ ಆರ್ಮ್ ಟೈಪ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಹೋಂಡಾ ಮೋಟಾರ್‌ಸೈಕಲ್ ತನ್ನ ಸಿಟಿ125 ಮೊಪೆಡ್ ಅನ್ನು 2020ರ ಜೂನ್‌ನಲ್ಲಿ ಬಿಡುಗಡೆಗೊಳಿಸಿತು. ನಂತರ ಈ ಸಿಟಿ125 ಮೊಪೆಡ್ ಅನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಪರಿಚಯಿಸಿದ್ದರು. ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೋಂಡಾ ಸಿಟಿ125 ಮೊಪೆಡ್ ಇತ್ತೀಚೆಗೆ ಹೊಸ ಸಫಾರಿ ಗ್ರೀನ್ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಹೊಸ ಬಣ್ಣದ ಅಯ್ಕೆಯನ್ನು ಹೊರತುಪಡಿಸಿ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವೆಣಗಳಿಲ್ಲ. ಹೊಸ ಸಫಾರಿ ಗ್ರೀನ್ ಬಣ್ಣದ ಆಯ್ಕೆಯೊಂದಿಗೆ ಹೋಂಡಾ ಸಿಟಿ125 ಮೊಪೆಡ್ ಮತ್ತಷ್ಟು ಆಕರ್ಷಕವಾಗಿದೆ. ಇನ್ನು ವಿಶೇಷವೆಂದರ್ ಈ ಮೊಪೆಡ್ ನಲ್ಲಿ ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಹೋಂಡಾ ಕ್ರಾಸ್ ಕಬ್

ಇನ್ನು ಹೊಸ ಹೋಂಡಾ ಕ್ರಾಸ್ ಕಬ್ ಟ್ರಯಲ್ ಬೈಕ್ ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದರೊಂದಿಗೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಬಿಡುಗಡೆಯಾಗಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಟ್ರಯಲ್ ಬೈಕ್ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Honda Cross Cub Gets A New Puco Blue Colour. Read In Kannada.
Story first published: Tuesday, May 18, 2021, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X