ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಸಿಟಿ125 ಮೊಪೆಡ್ ಅನ್ನು 2020ರ ಜೂನ್‌ನಲ್ಲಿ ಬಿಡುಗಡೆಗೊಳಿಸಿತು. ನಂತರ ಈ ಸಿಟಿ125 ಮೊಪೆಡ್ ಅನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಪರಿಚಯಿಸಿದ್ದರು.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇದೀಗ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೋಂಡಾ ಸಿಟಿ125 ಮೊಪೆಡ್ ಹೊಸ ಸಫಾರಿ ಗ್ರೀನ್ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಹೊಸ ಬಣ್ಣದ ಅಯ್ಕೆಯನ್ನು ಹೊರತುಪಡಿಸಿ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವೆಣಗಳಿಲ್ಲ. ಹೊಸ ಸಫಾರಿ ಗ್ರೀನ್ ಬಣ್ಣದ ಆಯ್ಕೆಯೊಂದಿಗೆ ಹೋಂಡಾ ಸಿಟಿ125 ಮೊಪೆಡ್ ಮತ್ತಷ್ಟು ಆಕರ್ಷಕವಾಗಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಈ ಹೋಂಡಾ ಸಿಟಿ125 ಮೊಪೆಡ್ ನಲ್ಲಿ ಅದೇ ಏರ್-ಕೂಲ್ಡ್ 124 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.8 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇನ್ನು ಈ ಹೊಸ ಹೋಂಡಾ ಮೋಪೆಡ್ 5.3-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಪಡೆಯುತ್ತದೆ. ಇನ್ನು ಈ ಮೊಪೆಡ್ ಪ್ರತಿ ಲೀಟರ್‌ಗೆ 67.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇನ್ನು ಹೊಸ ಹೋಂಡಾ ಮೋಪೆಡ್ ನಲ್ಲಿ ಎಲ್ಇಡಿ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ವಿಶೇಷವೆಂದರ್ ಈ ಮೊಪೆಡ್ ನಲ್ಲಿ ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಹೊಸ ಹೋಂಡಾ ಸಿಟಿ125 ಮೊಪೆಡ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಗೈಟೆರ್ಡ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇನ್ನು ಸುರಕ್ಷತೆಗಾಗಿ ಹೊಸ ಹೋಂಡಾ ಮೊಪೆಡ್ ನಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಎಬಿಎಸ್ ಅನ್ನು ಕೂಡ ನೀಡಿದ್ದಾರೆ. ಇದರಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಕಂಪನಿ ನೀಡಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇನ್ನು ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ತನ್ನ ಡ್ಯಾಕ್ಸ್ ಮಿನಿ ಬೈಕನ್ನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೋಂಡಾ ಡ್ಯಾಕ್ಸ್ ಮಿನಿ ಬೈಕಿನ ಹಳೆಯ ಹೆಸರು ಎಸ್‌ಟಿ ಎಂದಾಗಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಹೋಂಡಾ ಇಂದು ಗ್ರೋಮ್ ಮಿನಿಬೈಕ್‌ಗೆ ಸಾಕಷ್ಟು ಹೆಸರುವಾಸಿಯಾಗಿದ್ದರೂ, ಇದು 60 ಮತ್ತು 70 ರ ದಶಕಗಳಲ್ಲಿ ಮಿನಿ ಬೈಕ್ ಅನ್ನು ಹೊಂದಿತ್ತು. ಆಗ ಮಿನಿಬೈಕ್ ಅನ್ನು ಎಸ್‌ಟಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು. ಎಸ್‌ಟಿ ಮಿನಿಬೈಕ್ ಅಮೆರಿಕಾ ಮತ್ತು ಜಪಾನ್, ಯುರೋಪ್ ಸೇರಿದಂತೆ ಹಲವು ಕಡೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿತ್ತು.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಹೋಂಡಾ ಕಂಪನಿಯು ಮಿನಿ ಬೈಕ್ ಗಾಗಿ ಯುರೋಪಿನಲ್ಲಿ 'ಹೋಂಡಾ ಎಸ್‌ಟಿ 125' ಹೆಸರನ್ನು ಇತ್ತೀಚೆಗೆ ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಿಕೊಂಡಿದೆ. ಮತ್ತೊಮ್ಮೆ ಯುರೋಪಿನ ಮಾರುಕಟ್ಟೆಗಳಲ್ಲಿ ಹಳೆಯ ಐಕಾನಿಕ್ ಹೆಸರಿನಲ್ಲಿ ಮಿನಿ ಬೈಕ್ ಅನ್ನು ಬಿಡುಗಡೆಗೊಳಿಸಲು ಹೋಂಡಾ ಸಜ್ಜಾಗುತ್ತಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 67.2 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ125

ಇನ್ನು ಥೈಲ್ಯಾಂಡ್ ನಲ್ಲಿ ಹೋಂಡಾ ಸಿಟಿ125 ಮೊಪೆಡ್ ಬೆಲೆಯು ಭಾರತದ ಕರೆನ್ಸಿ ಪ್ರಕಾರ ರೂ.2.64 ಲಕ್ಷಗಳಾಗಿದು. ಈ ಬೆಲೆಯು ಭಾರತದಲ್ಲಿ ತುಂಬಾ ದುಬಾರಿಯಾಗುತ್ತದೆ. ಆದರಿಂದ ಹೋಂಡಾ ಕಂಪನಿಯುಈ ಮೊಪೆಡ್ ಅನ್ನು ಭಾರತದಲ್ಲಿ ಪರಿಚಯಿಸುವುದಾದರೆ ಇದನ್ನು ಸ್ಥಳಿಯವಾಗಿ ತಯಾರಿಸಬೇಕಾಗುತ್ತದೆ.

Most Read Articles

Kannada
English summary
Honda CT125 Gets A New Colour Option. Read In Kannada.
Story first published: Monday, March 29, 2021, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X