ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 3.85 ಲಕ್ಷ ಯೂನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 3,40,133 ಯುನಿಟ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಿದೆ. ಉಳಿದ 45,400 ಯುನಿಟ್ ಗಳನ್ನು ರಫ್ತು ಮಾಡಿದೆ. 2021ರ ಜೂನ್ ಇದರ ಮಾರಾಟದ ಹೆಚ್ಚಳವು ಶೇ.66 ರಷ್ಟಿದೆ. ಗಮನಾರ್ಹವಾಗಿ, ಹೋಂಡಾ ತನ್ನ ವರ್ಷದ ಪ್ರಗತಿಗೆ ಸಂಬಂಧಿಸಿದ ಡೇಟಾವನ್ನು ಬಹಿರಂಗಪಡಿಸಲಿಲ್ಲ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

2021ರ ಜುಲೈ ತಿಂಗಳ ಮಾರಾಟದಲ್ಲಿ ಆಕ್ಟಿವಾ 6ಜಿ ಮತ್ತು ಶೈನ್ ಮಾದರಿಗಳು ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಹೋಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ದೇಶದ ಹಲವು ಕಡೆಗಳಲ್ಲಿ ಅನ್ ಲಾಕ್ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದೆ. ಹೋಂಡಾ ಕಂಪನಿಯ ಪ್ರೀಮಿಯಂಬೈಕ್ ಗಳು ಕೂಡ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲೂ ಸಹ ಮುಂಚೂಣಿಯನ್ನು ಸಾಧಿಸುತ್ತಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದು, 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಸಾಮಾನ್ಯ ಬೈಕ್ ಶೋರೂಂಗಳಲ್ಲಿ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳ ಮೂಲಕ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮಾರಾಟಗೊಳಿಸುತ್ತಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಎರಡು ಹೊಸ ಪ್ರೀಮಿಯಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳಾಗಿವೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆಯನ್ನು ಬಿಗ್‌ವಿಂಗ್ ಟಾಪ್‌ಲೈನ್ ಶೋ ರೂಂಗಳಲ್ಲಿ ಪ್ರಾರಂಭಿಸಿದೆ, ಇನ್ನು ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ಕೇವಲ 24 ಗಂಟೆಯೊಳಗೆ ಸೋಲ್ಡ್ ಔಟ್ ಆಗಿತ್ತು.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಒಟ್ಟಿನಲ್ಲಿ ಹೋಂಡಾ ಕಂಪನಿಗೆ ಪ್ರೀಮಿಯಂ ಬೈಕ್ ಗಳು ಮಾರಾಟದಲ್ಲಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಿದೆ. ಪ್ರೀಮಿಯಂ ಬೈಕ್ ಗಳ ಜೊತೆ ಸಾಮಾನ್ಯ ಮಾದರಿಗಳು ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೋಂಡಾ ಕಂಪನಿಯು ಹೊಸ ಅಡ್ವೆಂಚರ್ ಬೈಕಿನ ಟೀಸರ್ ಬಿಡುಗಡೆಗೊಸಲಾಗಿದೆ ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಮತ್ತು ಮಾಹಿತಿಯನ್ನು ಹೋಂಡಾ ಕಂಪನಿಯು ಬಹಿರಂಗಪಡಿಸಿಲ್ಲ.

ಜುಲೈ ತಿಂಗಳಿನಲ್ಲಿ 3.85 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು ಎನ್‌ಎಕ್ಸ್200 ಎಂಬ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದ್ದರು. ಇದರಿಂದ ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಹೋಂಡಾ ಎನ್‌ಎಕ್ಸ್200 ಆಗಿರಬಹುದು ಎಂದು ಹೇಳಲಾಗುತ್ತಿದೆ. ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಆಗಿರಬಹುದು. ಹೋಂಡಾ ಕಂಪನಿಯು ಈ ಹೊಸ ಎನ್‌ಎಕ್ಸ್200 ಬೈಕನ್ನು ಆಗಸ್ಟ್ 19 ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿದೆ.

Most Read Articles

Kannada
English summary
Honda motorcycle and scooter india sells 3 85 lakh units in july 2021 details
Story first published: Wednesday, August 4, 2021, 21:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X