350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಭಾರತದಲ್ಲಿ ಉತ್ಪಾದನೆಯಾಗುವ 350 ಸಿಸಿ ಬೈಕ್‌ಗಳನ್ನು ಹೊರ ದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ. ಕಂಪನಿಯು ಇತ್ತೀಚೆಗೆ ತನ್ನ ಮೇಡ್ ಇನ್ ಇಂಡಿಯಾ ಬೈಕುಗಳ ರಫ್ತಿಗಾಗಿ ಕೆಲವು ಹೊಸ ಮಾದರಿಗಳನ್ನು ಸೇರಿಸುವುದಾಗಿ ತಿಳಿಸಿದೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಬೈಕುಗಳ ಉತ್ಪಾದನೆ ತುಂಬಾ ಅಗ್ಗವಾಗಿದೆ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ. ಆದ್ದರಿಂದ ಕಂಪನಿಯು ಭಾರತವನ್ನು ಹೋಂಡಾ ಬೈಕ್‌ಗಳ ರಫ್ತು ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಹೋಲುವ ಯುರೋ 5 ಮಾಲಿನ್ಯ ನಿಯಮಗಳನ್ನು ಕೆಲವು ದೇಶಗಳು ಪಾಲಿಸುತ್ತಿವೆ ಎಂದು ಕಂಪನಿ ಹೇಳಿದೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ 2001ರಲ್ಲಿ ಭಾರತದಲ್ಲಿ ಬೈಕುಗಳ ಉತ್ಪಾದನೆಯನ್ನು ಆರಂಭಿಸಿತು. ಅದೇ ವರ್ಷ ಕಂಪನಿಯು ತನ್ನ ಆಕ್ಟಿವಾ ಸ್ಕೂಟರ್ ಅನ್ನು ರಫ್ತು ಮಾಡಲು ಆರಂಭಿಸಿತು. 2015ರಲ್ಲಿ ಕಂಪನಿಯು 15 ವರ್ಷಗಳನ್ನು ಪೂರೈಸುವ ಹೊತ್ತಿಗೆ 1 ಮಿಲಿಯನ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು ಭಾರತದಲ್ಲಿ ತಯಾರಿಸಿದ ಬೈಕ್‌ಗಳನ್ನು ಆಗ್ನೇಯ ಏಷ್ಯಾ, ಜಪಾನ್ ಮಧ್ಯಪ್ರಾಚ್ಯ, ಲ್ಯಾಟಿನ್, ಮಧ್ಯ ಅಮೆರಿಕಾ ಹಾಗೂ ಸಾರ್ಕ್ ದೇಶಗಳಿಗೆ ರಫ್ತು ಮಾಡುತ್ತದೆ. ಕಂಪನಿಯು ತನ್ನ 19 ದ್ವಿಚಕ್ರ ವಾಹನಗಳನ್ನು ರಫ್ತು ಮಾಡುತ್ತದೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಇವುಗಳಲ್ಲಿ ಹೋಂಡಾ ಹೈನೆಸ್ ಸಿಬಿ 350 ಹಾಗೂ ಸಿಬಿ 350 ಆರ್‌ಎಸ್ ಬೈಕುಗಳು ಸಹ ಸೇರಿವೆ. ಸಿಬಿಆರ್ 650 ಆರ್ ಬೈಕ್ ಅನ್ನು ಸಹ ಭಾರತದಿಂದ ರಫ್ತು ಮಾಡಲಾಗುವುದು ಎಂದು ಹೋಂಡಾ ಮೋಟಾರ್‌ಸೈಕಲ್ ಕಂಪನಿ ಹೇಳಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಆದರೆ ಕಂಪನಿಯು ಭಾರತದಲ್ಲಿ ಈ ಬೈಕಿನ ಉತ್ಪಾದನೆಯನ್ನು ಆರಂಭಿಸಿದ ನಂತರ ಇದು ಸಾಧ್ಯವಾಗಲಿದೆ. ಸದ್ಯಕ್ಕೆ ಈ ಬೈಕಿನ ಬೆಲೆ ರೂ.11 ಲಕ್ಷಗಳಾಗಲಿದೆ. ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಿದ ನಂತರ ಈ ಬೈಕಿನ ಬೆಲೆ ಭಾರತದಲ್ಲಿಯೂ ಕಡಿಮೆಯಾಗಲಿದೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಹಾಗೂ ರಫ್ತು ಸೇರಿದಂತೆ ಒಟ್ಟು 4,11,037 ಯುನಿಟ್‌ಗಳನ್ನು ಮಾರಾಟ ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಮಾರ್ಚ್ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ದೇಶಿಯ ಮಾರಾಟವು 3,95,037 ಯುನಿಟ್‌ಗಳಾಗಿದ್ದರೆ, 16,000 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಕಂಪನಿಯು ಈ ವರ್ಷ ಹೈನೆಸ್ ಸಿಬಿ 350 ಹಾಗೂ ಸಿಬಿ 350 ಆರ್‌ಎಸ್ ಬೈಕುಗಳನ್ನು ಬಿಡುಗಡೆಗೊಳಿಸಿದೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಇದಲ್ಲದೆ ಕಂಪನಿಯು ಎರಡು 650 ಸಿಸಿ ಬೈಕ್ ಹಾಗೂ 500 ಸಿಸಿ ಅಡ್ವೆಂಚರ್ ಬೈಕುಗಳನ್ನು ಸಹ ಬಿಡುಗಡೆಗೊಳಿಸಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪ್ರೀಮಿಯಂ ಬಿಗ್‌ವಿಂಗ್ ಮಾರಾಟಗಾರರನ್ನು ವಿಸ್ತರಿಸುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು ಇತ್ತೀಚೆಗೆ ಚೆನ್ನೈನಲ್ಲಿ ಹೊಸ ಬಿಗ್‌ವಿಂಗ್ ಶೋರೂಂಗಳನ್ನು ತೆರೆದಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯ 125 ಸಿಸಿ ಬೈಕ್ ಹಾಗೂ 110 ಸಿಸಿ ಸ್ಕೂಟರ್'ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶದಲ್ಲಿ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ಹೋಂಡಾ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದ್ದು, ಮಾರಾಟದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಹಿಂದಿಕ್ಕಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

350 ಸಿಸಿ ಬೈಕುಗಳನ್ನು ರಫ್ತು ಮಾಡಲು ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಈ ವರ್ಷ ಭಾರತದಲ್ಲಿ ಹೊಸ ಶಕ್ತಿಶಾಲಿ ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಈ ಬೈಕ್ ಹೋಂಡಾ ರೆಬೆಲ್ 500 ಬೈಕಿನ ಪ್ರಬಲ ಆವೃತ್ತಿಯಾಗಿರಲಿದೆ. ಈ ಬೈಕ್ ಅನ್ನು ರೆಬೆಲ್ 1100 ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Honda motorcycle company to export 350cc bikes. Read in Kannada.
Story first published: Thursday, April 15, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X