23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಅಡಿಯಲ್ಲಿ ಕಾರ್ಯ ನಿರ್ವಹಿಸುವ 23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಬೈಕ್ ಚಾಲನೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತಿಳಿಸಿದೆ.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು 2020ರ ಜೂನ್ ತಿಂಗಳಿನಿಂದ ಹೋಂಡಾ ರೋಡ್ ಸೇಫ್ಟಿ ಇ-ಗುರುಕುಲ್ ರಸ್ತೆ ಸುರಕ್ಷತಾ ಅಭಿಯಾನವನ್ನು ನಡೆಸುತ್ತಿದೆ. ಇದರಲ್ಲಿ 23,000ಕ್ಕೂ ಹೆಚ್ಚು ಎನ್ಎಸ್ಎಸ್ ಸ್ವಯಂಸೇವಕರು ರಸ್ತೆ ಸುರಕ್ಷತೆ ಹಾಗೂ ಸುರಕ್ಷಿತ ಸವಾರಿಯ ಬಗ್ಗೆ ಆನ್‌ಲೈನ್‌ ತರಬೇತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಈ ಆನ್‌ಲೈನ್ ತರಬೇತಿ ಅಭಿಯಾನದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗಿಯಾಗಿದ್ದಾರೆ ಎಂದು ಹೋಂಡಾ ಕಂಪನಿಯು ವರದಿ ಮಾಡಿದೆ. ತರಬೇತಿ ಅಭಿಯಾನದಲ್ಲಿ 200 ಕಾಲೇಜುಗಳ ಹಾಗೂ 13 ವಿಶ್ವವಿದ್ಯಾಲಯಗಳ ಸ್ವಯಂಸೇವಕರು ಭಾಗವಹಿಸಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಇದರಲ್ಲಿ 30ಕ್ಕೂ ಹೆಚ್ಚು ನಗರಗಳ ಹಾಗೂ ಪ್ರದೇಶಗಳ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೋಂಡಾ ದ್ವಿಚಕ್ರ ವಾಹನಗಳ ಹಿರಿಯ ಉಪಾಧ್ಯಕ್ಷ ಪ್ರಭು ನಾಗರಾಜ್, ಕಂಪನಿಯು ದೇಶದಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ರಸ್ತೆ ಸುರಕ್ಷತಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಹೇಳಿದರು.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಈ ಸಂದರ್ಭದಲ್ಲಿ ಅವರು ಎನ್ಎಸ್ಎಸ್ ಸ್ವಯಂಸೇವಕರಿಗೆ ಧನ್ಯವಾದವನ್ನು ಸಲ್ಲಿಸಿದರು. ಕರೋನಾ ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ನೀಡಿದ ಕೊಡುಗೆ ಅಮೂಲ್ಯವಾದುದು ಎಂದು ಅವರು ಹೇಳಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಈ ತರಬೇತಿಯಲ್ಲಿ ಸ್ವಯಂಸೇವಕರಿಗೆ ರಸ್ತೆ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಹಾಗೂ ರಸ್ತೆಯಲ್ಲಿ ಕಂಡುಬರುವ ಚಿಹ್ನೆ ಫಲಕಗಳು ಮತ್ತು ಚಿಹ್ನೆಗಳನ್ನು ಪಾಲಿಸುವ ಬಗ್ಗೆ ತರಬೇತಿ ನೀಡಲಾಯಿತು.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಇದರ ಜೊತೆಗೆ ಟ್ರಾಫಿಕ್ ದೀಪಗಳು ಹಾಗೂ ವಾಹನಗಳಿಗೆ ಸಂಬಂಧಿಸಿದ ವಿಭಿನ್ನ ಸಂಕೇತಗಳ ಬಗ್ಗೆಯೂ ಅವರಿಗೆ ತಿಳಿಸಲಾಯಿತು. ರಸ್ತೆ ಅಪಘಾತಗಳನ್ನು ತಪ್ಪಿಸುವ ಬಗ್ಗೆ ಹಾಗೂ ಅಪಘಾತದ ಸಂದರ್ಭದಲ್ಲಿ ನೆರವನ್ನು ನೀಡುವುದರ ಬಗ್ಗೆ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ದ್ವಿಚಕ್ರ ವಾಹನ ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸಲು ಹಾಗೂ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಲು ಸಹ ತಿಳಿಸಲಾಯಿತು. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 2021ರ ಜನವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 4,16,716 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಈ ಪ್ರಮಾಣವು 2020ರ ಜನವರಿ ತಿಂಗಳಿಗಿಂತ 11%ನಷ್ಟು ಹೆಚ್ಚಾಗಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಜನವರಿ ತಿಂಗಳಿನಲ್ಲಿ ಒಟ್ಟಾರೆಯಾಗಿ4,37,183 ವಾಹನಗಳನ್ನು ಮಾರಾಟ ಮಾಡಿದ್ದು, ಮಾರಾಟವು 8%ನಷ್ಟು ಹೆಚ್ಚಳವಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಸತತ 6 ತಿಂಗಳಿನಿಂದ ಕಂಪನಿಯು ಮಾಸಿಕ ಮಾರಾಟದಲ್ಲಿ ಹೆಚ್ಚು ಬೆಳವಣಿಗೆಯನ್ನು ದಾಖಲಿಸುತ್ತಿದೆ ಎಂದು ಹೋಂಡಾ ಕಂಪನಿಯು ವರದಿ ಮಾಡಿದೆ. ಸ್ಕೂಟರ್ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಈವರೆಗೆ 2. 5 ಕೋಟಿಗೂ ಹೆಚ್ಚು ಹೋಂಡಾ ಆಕ್ಟಿವಾ ಸ್ಕೂಟರ್'ಗಳನ್ನು ಮಾರಾಟ ಮಾಡಲಾಗಿದೆ. ಈ ಅಂಕಿ ಅಂಶದ ಮೂಲಕ ಹೋಂಡಾ ಆಕ್ಟಿವಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿ ಹೊರ ಹೊಮ್ಮಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ ತನ್ನ ಜನಪ್ರಿಯ ಆಕ್ಟಿವಾ 6 ಜಿ ಸ್ಕೂಟರಿನ ಮೇಲೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.

23,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು ಆಕ್ಟಿವಾ 6 ಜಿ ಸ್ಕೂಟರ್ ಖರೀದಿಸಲು 100%ನಷ್ಟು ಹಣಕಾಸು ಆಯ್ಕೆಯನ್ನು ನೀಡುತ್ತಿದೆ. ಈ ಸ್ಕೂಟರ್ ಅನ್ನು ರೂ.2,499 ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು.

Most Read Articles

Kannada
English summary
Honda Motorcycle educates more than 23000 NSS volunteers about road safety. Read in Kannada.
Story first published: Tuesday, February 16, 2021, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X