Just In
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬೈಕಿಗಾಗಿ ಪೇಟೆಂಟ್ ಪಡೆದ ಹೋಂಡಾ ಮೋಟಾರ್‌ಸೈಕಲ್
ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಯಾವಾಗಲೂ ತನ್ನ ವಾಹನಗಳಲ್ಲಿ ಹೊಸತನವನ್ನು ಅಳವಡಿಸುತ್ತದೆ. ಈ ಕಾರಣಕ್ಕೆ ಕಂಪನಿಯು ಹೊಸ ಹೊಸ ವಾಹನಗಳಿಗೆ ಪೇಟೆಂಟ್ ಪಡೆಯುತ್ತದೆ.

ಕಂಪನಿಯು ಹಲವಾರು ಹೊಸ ವಾಹನಗಳಿಗೆ ಪೇಟೆಂಟ್ ಪಡೆದಿದ್ದರೂ ಇದುವರೆಗೂ ಅವುಗಳನ್ನು ಬಳಸಿಲ್ಲ. ಕಳೆದ ಕೆಲವು ವರ್ಷಗಳಿಂದ ಜಪಾನ್ ಮೂಲದ ಕಂಪನಿಯು ಗ್ರೋಮ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಕಂಪನಿಯು ಈ ಬಗ್ಗೆ ಯಾವುದೇ ಖಚಿತವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಕೆಲವು ವರ್ಷಗಳ ಹಿಂದೆ ಹೋಂಡಾ ಕಂಪನಿಯು ಭಾರತಕ್ಕಾಗಿ ಗ್ರೋಮ್ ಟ್ರೇಡ್‌ಮಾರ್ಕ್ ಅನ್ನು ಪಡೆದಿತ್ತು. ಆದರೆ ಕಂಪನಿಯು ಹೋಂಡಾ ನವೀ ಎಂಬ ಸ್ಕೂಟರ್ ಶೈಲಿಯ ಬೈಕ್ ಅನ್ನು ಬಿಡುಗಡೆಗೊಳಿಸಿತು. ಕಂಪನಿಯು ಈಗ ಮತ್ತೊಮ್ಮೆ ಭಾರತದಲ್ಲಿ ಗ್ರೋಮ್ ಬೈಕಿಗಾಗಿ ಪೇಟೆಂಟ್ ಸಲ್ಲಿಸಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಇತ್ತೀಚೆಗೆ ಈ ಸ್ಕೂಟರ್ ಶೈಲಿಯ ಬೈಕಿನ ಪೇಟೆಂಟ್ ದಾಖಲೆ ಬಹಿರಂಗಗೊಂಡಿದೆ. ಆದರೆ ಹೋಂಡಾ ಕಂಪನಿಯ ದಾಖಲೆಯನ್ನು ನೋಡಿದರೆ ಪೇಟೆಂಟ್ ಪಡೆದ ಈ ಹೊಸ ಹೋಂಡಾ ಗ್ರೋಮ್ ಸಹ ರಸ್ತೆಗಳಲ್ಲಿ ಕಾಣಿಸದಿರುವ ಸಾಧ್ಯತೆಗಳು ಹೆಚ್ಚು.

ಹೋಂಡಾ ಕಂಪನಿಯು ನವೀ ಮೋನಿಕರ್ ಬೈಕ್ ಅನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಗಳಿವೆ. ಹೋಂಡಾ ನವೀಯನ್ನು ಭಾರತದಲ್ಲಿ ಮೊದಲ ಬಾರಿಗೆ 2016ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಗಿತ್ತು. ಈ ಬೈಕಿನ ವಿನ್ಯಾಸವು ಸಾಕಷ್ಟು ಸಂಖ್ಯೆಯ ಜನರನ್ನು ಆಕರ್ಷಿಸಿತು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಡಿಮೆ ಸಂಖ್ಯೆಯಲ್ಲಿ ಮಾರಾಟವಾದ ಕಾರಣಕ್ಕೆ ಹಾಗೂ ಹೊಸ ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ಹೋಂಡಾ ಕಂಪನಿಯು ತನ್ನ ನವೀ ಬೈಕ್ ಮಾರಾಟವನ್ನು ದೇಶಿಯ ಮಾರುಕಟ್ಟೆಯಿಂದ ಕೈಬಿಟ್ಟಿತು. ಆದರೆ ಹೋಂಡಾ ಕಂಪನಿಯು ನವೀ ಬೈಕ್ ಅನ್ನು ಭಾರತದಲ್ಲಿ ಉತ್ಪಾದಿಸುತ್ತದೆ.

ಭಾರತದಲ್ಲಿ ಉತ್ಪಾದನೆಯಾಗುವ ನವೀ ಬೈಕ್ ಅನ್ನು ಹೋಂಡಾ ಕಂಪನಿಯು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. ಸ್ಕೂಟರ್ ಶೈಲಿಯ ನವೀ ಬೈಕಿನಲ್ಲಿ ಹೋಂಡಾ ಆಕ್ಟಿವಾದಲ್ಲಿರುವಂತಹ 110 ಸಿಸಿಯ ಎಂಜಿನ್ ಅಳವಡಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.8 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 8.96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಕಂಪನಿಯು ಈ ಎಂಜಿನ್‌ನೊಂದಿಗೆ ಸಿವಿಟಿ ಗೇರ್‌ಬಾಕ್ಸ್ ಅನ್ನು ಅಳವಡಿಸಿದೆ.

ಹೋಂಡಾ ಕಂಪನಿಯು ಪೇಟೆಂಟ್ ಪಡೆದಿರುವ ಗ್ರೋಮ್ 125 ಬೈಕಿನಲ್ಲಿ 125 ಸಿಸಿ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.2 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬಗ್ಗೆ ರಶ್ ಲೇನ್ ವರದಿ ಮಾಡಿದೆ.