ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಖ್ಯಾತ ಬೈಕ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ತನ್ನ 2021ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಈ ಹೊಸ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.96 ಲಕ್ಷಗಳಾಗಿದೆ. ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಈ ಬೈಕ್‌ ಅನ್ನು ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಹೊಸ ಬೈಕಿನಲ್ಲಿ ಮ್ಯಾನುಯಲ್ ಗೇರ್‌ಬಾಕ್ಸ್ ಹಾಗೂ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಿದೆ.

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಕಂಪನಿಯು ಈ ಹೊಸ ಬೈಕಿಗಾಗಿ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಈಗ ದೇಶಿಯ ಮಾರುಕಟ್ಟೆಯಲ್ಲಿ 2021ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿಗಾಗಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಈ ಬೈಕ್ ಅನ್ನು ಖರೀದಿಸಲು ಬಯಸುವವರು ಕಂಪನಿಯ ಹೋಂಡಾ ಬಿಗ್‌ವಿಂಗ್ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಹತ್ತಿರವಿರುವ ಯಾವುದೇ ಹೋಂಡಾ ಬಿಗ್‌ವಿಂಗ್ ಶೋರೂಂಗಳಿಗೆ ಭೇಟಿ ನೀಡಿ 2021ರ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು.

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಕಂಪನಿಯು ಈ ಬೈಕಿನಲ್ಲಿ ಡ್ಯುಯಲ್ ಎಲ್ಇಡಿ ಹೆಡ್‌ಲೈಟ್‌, 5 ವೇ ಅಡ್ಜಸ್ಟಬಲ್ ವಿಂಡ್‌ಸ್ಕ್ರೀನ್, ಅಡ್ಜಸ್ಟಬಲ್ ಸೀಟ್, ಹೀಟೆಡ್ ಗ್ರಿಪ್, ಕಾರ್ನರಿಂಗ್ ಲೈಟ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಸವಾರನ ಅನುಕೂಲಕ್ಕಾಗಿ ಕಂಪನಿಯು ಹೊಸ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನಲ್ಲಿ ಬಹು ಬಣ್ಣದ 6.5-ಇಂಚಿನ ಟಿಎಫ್‌ಟಿ ಮಲ್ಟಿ ಇನ್ಫಾಮೇಶನ್ ಡಿಸ್ ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಆಪಲ್ ಕಾರ್ ಪ್ಲೇಗಳನ್ನು ನೀಡಿದೆ.

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಹೊಸ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನಲ್ಲಿ 6-ಆಕ್ಸಿಸ್ ಇನ್ ಹರ್ಶಿಯಲ್ ಮೆಶರ್'ಮೆಂಟ್ ಯೂನಿಟ್ (ಐಎಂಯು) ಅಳವಡಿಸಲಾಗಿದೆ. ಈ ಯೂನಿಟ್ ಥ್ರೊಟಲ್ ಬೈ ವೈರ್ ಅನ್ನು (ಟಿಬಿಡಬ್ಲ್ಯೂ) ನಿಯಂತ್ರಿಸುವುದರ ಜೊತೆಗೆ 7 ಹಂತದ ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (ಹೆಚ್‌ಎಸ್‌ಟಿಸಿ) ಅನ್ನು ವಿಸ್ತರಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

2021ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್‌ ಬೈಕಿನಲ್ಲಿ 1,084 ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಹಾಗೂ 103 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಈ ಬೈಕಿನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿ 1.6 ಪಟ್ಟು ಹೆಚ್ಚು ಬಾಳಿಕೆಯನ್ನು ಹೊಂದಿದ್ದು, ರನ್-ಆಫ್-ದಿ-ಮಿಲ್ ಬ್ಯಾಟರಿಗಳಿಗಿಂತ 4 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಕಂಪನಿಯ ಮಾರಾಟ, ಮಾರುಕಟ್ಟೆ ನಿರ್ದೇಶಕರಾದ ಯದ್ವಿಂದರ್ ಸಿಂಗ್ ಗುಲೇರಿಯಾ ಹೊಸ ಬೈಕಿನ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಾಹಸ ಪ್ರಿಯರಿಗಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ

ಗೋ ಎನಿವೇರ್ ಸ್ಪಿರಿಟ್‌ ಹೊಂದಿರುವ ಆಫ್ರಿಕಾ ಟ್ವಿನ್ ಬೈಕುಗಳು ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿವೆ. ಆಫ್ರಿಕಾ ಟ್ವಿನ್ ಬೈಕುಗಳು ಭಾರತದಲ್ಲಿ ಯಶಸ್ವಿಯಾಗಿ ಬೆಳೆಯುತ್ತಿದ್ದು, ಹೊಸ ಆವೃತ್ತಿಯನ್ನು ಆರಂಭಿಸುತ್ತಿದೆ ಎಂದು ಹೇಳಿದ್ದಾರೆ.

Most Read Articles

Kannada
English summary
Honda Motorcycle launches Africa Twin Adventure Sports bikes in India. Read in Kannada.
Story first published: Tuesday, January 12, 2021, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X