ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಈ ವರ್ಷದ ಜನವರಿ ತಿಂಗಳಿನಲ್ಲಿ ಅಪ್ ಡೇಟ್ ಮಾಡಲಾದ ತನ್ನ ಹೊಸ ಗೋಲ್ಡ್ ವಿಂಗ್ ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿತ್ತು.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈಗ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಹೆಚ್‌ಎಂಎಸ್‌ಐ) ಹೊಸ ಗೋಲ್ಡ್ ವಿಂಗ್ ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೆಚ್‌ಎಂಎಸ್‌ಐ ಈ ಹೊಸ ಬೈಕಿನ ಟೀಸರ್ ಅನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಬಿಗ್‌ವಿಂಗ್ ಎಂಬುದು ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ಶೋರೂಂ ಆಗಿದ್ದು, ಈ ಶೋರೂಂ ಮೂಲಕ ಕಂಪನಿಯ ಪ್ರೀಮಿಯಂ ಬೈಕುಗಳನ್ನು ಮಾರಾಟ ಮಾಡಲಾಗುತ್ತದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾದ ಪ್ರಮುಖ ಕ್ರೂಸರ್ ಬೈಕ್ ಆದ ಗೋಲ್ಡ್ ವಿಂಗ್ ಬೈಕ್ ಅನ್ನು ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್ ಅನ್ನು ಸವಾರ ಹಾಗೂ ಹಿಂಬದಿಯ ಸವಾರರ ಅನುಕೂಲಕ್ಕಾಗಿ ಅಪ್ ಡೇಟ್ ಮಾಡಲಾಗಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಗೋಲ್ಡ್ ವಿಂಗ್ ಬೈಕ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಗೋಲ್ಡ್ ವಿಂಗ್ ಬೈಕಿನಲ್ಲಿ 1,833 ಸಿಸಿ, ಲಿಕ್ವಿಡ್-ಕೂಲ್ಡ್ ಫ್ಲಾಟ್-ಸಿಕ್ಸ್ ಎಂಜಿನ್‌ ಅಳವಡಿಸಲಾಗಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಎಂಜಿನ್ 5,500 ಆರ್‌ಪಿಎಂನಲ್ಲಿ 125 ಬಿಹೆಚ್‌ಪಿ ಪವರ್ ಹಾಗೂ 4,500 ಆರ್‌ಪಿಎಂನಲ್ಲಿ 170 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಿವರ್ಸ್ ಗೇರ್'ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಥವಾ ರಿವರ್ಸ್ ಗೇರ್'ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗೋಲ್ಡ್ ವಿಂಗ್ ಲಭ್ಯವಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೊಸ ಕ್ರೂಸರ್ ಬೈಕಿನಲ್ಲಿ ಸ್ಪೋರ್ಟ್‌, ರೇನ್, ಟೂರ್ ಹಾಗೂ ಇಕೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಹೊಸ ಹೋಂಡಾ ಗೋಲ್ಡ್ ವಿಂಗ್‌ನಲ್ಲಿ ಮೊದಲಿಗಿಂತ ಉತ್ತಮವಾದ ಸ್ಪೀಕರ್ ನೀಡಲಾಗಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಸ್ಟ್ಯಾಂಡರ್ಡ್ ಮಾದರಿಯನ್ನು ಹೊಸ ಪರ್ಲ್ ಡೀಪ್ ಮಡ್ ಗ್ರೇ ಬಣ್ಣದಲ್ಲಿ ಮಾರಾಟ ಮಾಡಲಾದರೆ, ಟಾಪ್ ಎಂಡ್ ಗೋಲ್ಡ್ ವಿಂಗ್ ಟೂರ್ ಮಾದರಿಯನ್ನು ಗನ್‌ಮೆಟಲ್ ಬ್ಲ್ಯಾಕ್ ಮೆಟಾಲಿಕ್ ಹಾಗೂ ಕ್ಯಾಂಡಿ ಅರ್ಡೆಂಟ್ ರೆಡ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಗೋಲ್ಡ್ ವಿಂಗ್ ಟೂರ್ ಮಾದರಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಫೀಚರ್ ನೀಡಲಾಗಿದೆ. ಮ್ಯಾನುಯಲ್ ಟ್ರಾನ್ಸ್'ಮಿಷನ್ ನೊಂದಿಗೆ2021ರ ಹೋಂಡಾ ಗೋಲ್ಡ್ ವಿಂಗ್ 366 ಕೆ.ಜಿ ತೂಕವನ್ನು ಹೊಂದಿದ್ದರೆ, ಡಿಸಿಟಿ ಮಾದರಿಯು 367 ಕೆ.ಜಿ ತೂಕವನ್ನು ಹೊಂದಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

2021 ಹೋಂಡಾ ಗೋಲ್ಡ್ ವಿಂಗ್ ಟೂರ್ ಮಾದರಿಯಲ್ಲಿ ಹೆಚ್ಚು ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಈ ಮಾದರಿಯಲ್ಲಿ ಸ್ಟೋರೇಜ್ ಸ್ಪೇಸ್ ಅನ್ನು 11 ಲೀಟರ್ ಹೆಚ್ಚಳದೊಂದಿಗೆ 121 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಬೈಕಿನಲ್ಲಿ ಪಿಲ್ಲರ್ ಬ್ಯಾಕ್‌ರೆಸ್ಟ್ ಅನ್ನು ಸಹ ಮಾಡಿಫೈ ಮಾಡಲಾಗಿದೆ. ಟೂರ್ ಮಾದರಿಯಲ್ಲಿರುವ ಸೀಟುಗಳು ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿರುವ ಸಿಂಥೆಟಿಕ್ ಲೆದರ್ ಹೊದಿಕೆಯನ್ನು ಪಡೆಯುತ್ತವೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಬೈಕಿನಲ್ಲಿ 45 ವ್ಯಾಟ್‌ಗಳ ಸ್ಪೀಕರ್ ಅಳವಡಿಸಲಾಗಿದ್ದು, ಆಟೋಮ್ಯಾಟಿಕ್ ವಾಲ್ಯೂಮ್ ಅಡ್ಜಸ್ಟ್ ಮೆಂಟ್ ಫೀಚರ್ ನೀಡಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ಗೋಲ್ಡ್ ವಿಂಗ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಹೊಸ ಗೋಲ್ಡ್ ವಿಂಗ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಗೋಲ್ಡ್ ವಿಂಗ್ ಬಿಎಸ್ 4 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.28.2 ಲಕ್ಷಗಳಾಗಿದೆ. ಅಪ್ ಡೇಟ್ ಮಾಡಲಾದ ಹೊಸ ಬಿಎಸ್ 6 ಮಾದರಿಯ ಬೆಲೆ ಇದಕ್ಕಿಂತ ಸ್ವಲ್ಪ ದುಬಾರಿಯಾಗಬಹುದು.

Most Read Articles

Kannada
English summary
Honda Motorcycle releases teaser of new Honda Goldwing bike. Read in Kannada.
Story first published: Friday, June 11, 2021, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X