YouTube

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಗ್ರಾಜಿಯಾ 125 ಸ್ಕೂಟರ್‌ನ ಹೊಸ ಸ್ಪೋರ್ಟ್ಸ್ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ನಿನ್ನೆ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಬಿಡುಗಡೆಗೊಳಿಸಿದ ಹೊಸ ಟಿವಿಸಿಯಲ್ಲಿ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಸ್ಟೈಲಿಂಗ್ ಮತ್ತು ಫೀಚರ್ ಗಳ ಬಗ್ಗೆ ವಿವರಿಸಲಾಗಿದೆ. ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಇದು ಹೆಚ್ಚು ಸ್ಪೋರ್ಟಿಯಾಗಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೆಚ್ಚಾಗಿ ಈ ಸ್ಪೋರ್ಟ್ಸ್ ಎಡಿಷನ್ ಯುವ ಗ್ರಾಹಕರನ್ನು ಸೆಳೆಯುತ್ತದೆ. ಇನ್ನು ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಬೆಲೆಯು ಗುರುಗ್ರಾಮ್ ಎಕ್ಸ್ ಶೋ ರೂಂ ಪ್ರಕಾರ ರೂ.82,564 ಗಳಾಗಿದೆ.

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಹೊಸ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ನಲ್ಲಿ ಹೊಸ ಬಾಡಿ ಗ್ರಾಫಿಕ್ಸ್‌ನೊಂದಿಗೆ ಎರಡು ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ಪರ್ಲ್ ನೈಟ್‌ಸ್ಟಾರ್ ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್ ಸೇರಿವೆ. ಹೊಸ ಕಾಸ್ಮೆಟಿಕ್ ಅಪ್‌ಡೇಟ್‌ನ ಹೊರತಾಗಿ, ಸ್ಕೂಟರ್ ಇತರ ಎಲ್ಲ ಅಂಶಗಳು ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಈ ಸ್ಕೂಟರ್‌ನಲ್ಲಿ ಅದೇ 125 ಸಿಸಿ ಹೆಚ್‌ಇಟಿ(ಹೋಂಡಾ ಇಕೋ ಟೆಕ್ನಾಲಜಿ) ಬಿಎಸ್‌ವಿಐ ಪಿಜಿಎಂ-ಎಫ್‌ಐ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪೇಟೆಂಟ್ ಪಡೆದ ಎಸಿಜಿ ಸ್ಟಾರ್ಟರ್ ಮೋಟರ್ ಇದೆ. ಇದು ಪ್ರತಿ ಬಾರಿಯೂ ತ್ವರಿತ, ಮತ್ತು ಜೋಲ್ಟ್-ಫ್ರೀ ಸ್ಟಾರ್ಟ್ ಆಗುತ್ತದೆ.

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ನಲ್ಲಿ ಪಾಸ್-ಸ್ವಿಚ್, ಹೊಸ ಎಂಜಿನ್ ಸ್ಟಾರ್ಟ್/ ಸ್ಟಾಪ್ ಸ್ವಿಚ್, ಸೀಟ್‌ಗಾಗಿ ಮಲ್ಟಿ-ಫಂಕ್ಷನಲ್ ಸ್ವಿಚ್ ಮತ್ತು ಫ್ಯೂಯಲ್ ಲಿಡ್ ಅನ್ನು ಒಳಗೊಂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಇನ್ನು ಈ ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‍ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‍ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಸ್ಕೂಟರ್‌ನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಿದ್ದಾರೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 190 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬ್ರ್ಯಾಂಡ್‌ನ ಪ್ರೀಮಿಯಂ 125 ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ.

ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ

ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಸಹಕಾರಿಯಾಗುತ್ತದೆ. ಇನ್ನು ಹೋಂಡಾ ಗ್ರಾಜಿಯಾ 125 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಫ್ಯಾಸಿನೊ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‌ಮ್ಯಾನ್‌ ಸ್ಟ್ರೀಟ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು

Most Read Articles

Kannada
English summary
New Honda Grazia 125 Sports Edition Official TVC. Read In Kannada.
Story first published: Tuesday, January 19, 2021, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X