ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಸ್ಪೋರ್ಟ್ಸ್ ಟೂರರ್ ಎನ್‌ಟಿ1100 ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗಳಿಗೆ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಎನ್‌ಟಿ1100(Honda NT1100) ಸರಿಯಾದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೊಸ ಹೋಂಡಾ ಎನ್‌ಟಿ1100 ಬೈಕಿನ ವಿನ್ಯಾಸವು ಆಫ್ರಿಕಾ ಟ್ವಿನ್‌ನೊಂದಿಗೆ ತನ್ನ ಡಿಎನ್ಎ ಅನ್ನು ಹಂಚಿಕೊಳ್ಳುತ್ತದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. CRF1100L ಅನ್ನು ಸವಾಲಿನ ಹಾದಿಗಳನ್ನು ತೆಗೆದುಕೊಳ್ಳಲು ಅಭಿವೃದ್ಧಿಪಡಿಸಲಾಗಿದ್ದರೂ, ಎನ್‌ಟಿ1100 ಅನ್ನು ಬಹಳ ದೂರ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹೋಂಡಾದ ಜಾಗತಿಕ ಶ್ರೇಣಿಯಲ್ಲಿನ 750 ಸಿಸಿ ಟೂರಿಂಗ್ ರೇಂಜ್ ಮತ್ತು ಫ್ಲ್ಯಾಗ್‌ಶಿಪ್ ಗೋಲ್ಡ್ ವಿಂಗ್ ನಡುವಿನ ಅಂತರವನ್ನು ಕಡಿಮೆ ಮಾಡಲು ಇದನ್ನು ಸಿದ್ದಪಡಿಸಲಾಗಿದೆ. ಈ ಬೈಕ್ ಅನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾತ್ರ ನೀಡಲಾಗಿದೆ ಆದರೆ ಶೀಘ್ರದಲ್ಲೇ ಪ್ರಪಂಚದ ಇತರ ಭಾಗಗಳಿಗೆ ಸಾಗಿಸುವ ನಿರೀಕ್ಷೆಯಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೊಸ ಹೋಂಡಾ ಎನ್‌ಟಿ1100 ಬೈಕ್ ಅಡ್ವೆಂಚರ್ ಮಾದರಿಯ ಛಾಯೆಗಳನ್ನು ತೋರಿಸುತ್ತದೆ. ಇದು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ವಿನ್-ಬೀಮ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು ಹೆಚ್ಚು ಫೇರ್ಡ್ ಫ್ರಂಟ್ ಎಂಡ್ ಅನ್ನು ಹೊಂದಿದೆ. ಅದರ ಮೇಲೆ, ಇದು ದೊಡ್ಡ ವಿಂಡ್‌ಸ್ಕ್ರೀನ್ ಅನ್ನು ಹೊಂದಿದ್ದು ಅದು ಎತ್ತರ ಮತ್ತು ಇದನ್ನು ಐದು-ರೀತಿಯಲ್ಲಿ ಹೊಂದಾಣಿಕೆ ಮಾಡಬಲ್ಲದು.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಇನ್ನು ಈ ಬೈಕ್ ಎರಡೂ ಬದಿಯವಿಂಡ್ ಡಿಫ್ಲೆಕ್ಟರ್‌ಗಳಿಂದ ಸಹಾಯವಾಗುತ್ತದೆ. ಈ ಬೈಕಿನಲ್ಲಿ ಇತರ ಸ್ಟೈಲಿಂಗ್ ಹೈಲೈಟ್‌ಗಳಲ್ಲಿ ಸ್ಪ್ಲಿಟ್-ಸ್ಟೈಲ್ ಸೀಟ್‌ಗಳು, ಸಿಂಗಲ್-ಸೈಡೆಡ್ ಟ್ವಿನ್-ಬ್ಯಾರೆಲ್ ಎಕ್ಸಾಸ್ಟ್, ಸಿಂಗಲ್-ಪೀಸ್ ಗ್ರಾಬ್ ರೈಲ್, ಲಗೇಜ್ ಮೌಂಟಿಂಗ್ ರ್ಯಾಕ್‌ಗೆ ವಿಸ್ತರಿಸುತ್ತದೆ ಮತ್ತು ಪ್ರತಿ ಬದಿಯಲ್ಲಿ ಪ್ಯಾನಿಯರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೋಂಡಾ ಎನ್‌ಟಿ1100 ಬೈಕ್ ಮ್ಯಾಟ್ ಇರಿಡಿಯಮ್ ಗ್ರೇ ಮೆಟಾಲಿಕ್, ಪರ್ಲ್ ಗ್ಲೇರ್ ವೈಟ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೊಸ ಹೋಂಡಾ ಎನ್‌ಟಿ1100 ಬೈಕ್ ಸೆಮಿ-ಡಬಲ್ ಕ್ರ್ಯಾಡಲ್ ಫ್ರೇಮ್ ಮತ್ತು ಫ್ರಿಕಾ ಟ್ವಿನ್‌ನಲ್ಲಿ ಬಳಸುವ ಬೋಲ್ಟ್-ಆನ್ ಅಲ್ಯೂಮಿನಿಯಂ ಸಬ್‌ಫ್ರೇಮ್ ಅನ್ನು ಒಳಗೊಂಡಿರುವ ಚಾಸಿಸ್‌ನಿಂದ ಆಧಾರವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಈ ಹೊಸ ಸ್ಪೋರ್ಟ್ಸ್ ಟೂರರ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಅನ್ನು ಸ್ವಲ್ಪಮಟ್ಟಿಗೆ ನವೀಕರಿಸಿದೆ. ಆಫ್ರಿಕಾ ಟ್ವಿನ್‌ ಬೈಕಿಗೆ ಹೋಲಿಸಿದರೆ ಇದರ ಎರಡು ಕಡೆಗಳಲ್ಲಿ 150 ಎಂಎಂ ಲೋ ಟ್ರ್ಯಾವೆಲ್ ಅನ್ನು ನೀಡುತ್ತದೆ. ಇನ್ನು ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಶೋವಾ USD ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಸೆಟಒ ಅನ್ನು ಒಳಗೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೋಂಡಾ ಎನ್‌ಟಿ1100 ಬೈಕ್ ಮುಂಭಾಗದಲ್ಲಿ ದೊಡ್ಡದಾದ 21-ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 18-ಇಂಚಿನ ವ್ಹೀಲ್ ಅನ್ನು ಹೊಂದಿದೆ. ಇದು ಹೆಚ್ಚು ಆರಾಮದಾಯಕ ರೈಡಿಂಗ್ ದಕ್ಷತಾಶಾಸ್ತ್ರವನ್ನು ಒದಗಿಸುವ 820ಎಂಎಂ ಎತ್ತರವನ್ನು ಕಡಿಮೆ ಮಾಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೇಕಿಂಗ್ ಅನ್ನು 310 ಎಂಎಂ ಟ್ವಿನ್ ಡಿಸ್ಕ್‌ಗಳು ನಿರ್ವಹಿಸುತ್ತವೆ ಮತ್ತು ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ಒಂದೇ 256 ಎಂಎಂ ಡಿಸ್ಕ್‌ಗಳನ್ನು ಹೊಂದಿದೆ. ಇವುಗಳೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಇದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೋಂಡಾ ಎನ್‌ಟಿ1100 ಸ್ಪೋರ್ಟ್ಸ್ ಟೂರರ್ ಬೈಕಿನ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 6.5-ಇಂಚಿನ TFT ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಒದಗಿಸಿದ್ದು ಅದು ಅಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ನೀಡುತ್ತದೆ. ಇದು ವ್ಹೀಲಿ ಕಂಟ್ರೋಲ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC), ಮೂರು ಡೀಫಾಲ್ಟ್ ರೈಡಿಂಗ್ ಮೋಡ್‌ಗಳು- ಅರ್ಬನ್, ರೈನ್, ಟೂರ್ ಮತ್ತು ಎರಡು ಕಸ್ಟಮೈಸ್ ಮಾಡಬಹುದಾದ ರೈಡಿಂಗ್ ಮೋಡ್‌ಗಳಂತಹ ರೈಡರ್ ಏಡ್ಸ್ ಅನ್ನು ಸಹ ಒಳಗೊಂಡಿರುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೋಂಡಾ ಎನ್‌ಟಿ1100 ಸ್ಪೋರ್ಟ್ಸ್ ಟೂರರ್ ಬೈಕಿನ 1,084cc ಲಿಕ್ವಿಡ್-ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 101 ಬಿಹೆಚ್‍ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆದ್ದಾರಿ ಪ್ರಯಾಣಕ್ಕೆ ಸರಿಹೊಂದುವಂತೆ ಗಾಳಿಯ ಸೇವನೆಯನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಲಾಗಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 4,82,756 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 19,077 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 5,26,865 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ,

ಹೊಸ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ Honda NT1100 ಸ್ಪೋರ್ಟ್ಸ್ ಟೂರರ್ ಬೈಕ್

ಹೊಸ ಹೋಂಡಾ ಎನ್‌ಟಿ1100 ಸ್ಪೋರ್ಟ್ಸ್ ಟೂರರ್ ಬೈಕ್ ಆರಂಭದಲ್ಲಿ ಯುರೋಪ್‌ನಾದ್ಯಂತ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಎನ್‌ಟಿ1100 ಬೈಕ್ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Honda unveiled all new nt1100 sports tourer motorcycle details
Story first published: Saturday, October 23, 2021, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X