2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‌ಸೈಕಲ್ ಶೀಘ್ರದಲ್ಲೇ ತನ್ನ ಹೊಸ ಚೀಫ್ ಬಾಬರ್ ಡಾರ್ಕ್ ಹಾರ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. 2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಇಂಡಿಯನ್ ಮೋಟಾರ್‌ಸೈಕಲ್ 2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕಿನ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ. ಮುಂಬರುವ ಕ್ರೂಸರ್‌ನ ಸಿಲೂಯೆಟ್ ಹೊಂದಿರುವ ಟೀಸರ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಚಿತ್ರದಲ್ಲಿ ಈ ಬೈಕಿನ ವಿ-ಟ್ವಿನ್ ಎಂಜಿನ್, ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗದ ಕೌಲ್‌ನ ಲುಕ್ ಅನ್ನು ಬಹಿರಂಗಪಡಿಸಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಇದರೊಂದಿಗೆ ಈ ಹೊಸ ಬೈಕಿನ ರಿಯರ್‌ವ್ಯೂ ಮೀರರ್ಸ್, ಹೆಡ್‌ಲೈಟ್ ಮಾಸ್ಕ್, ಫ್ರಂಟ್ ಫೆಂಡರ್ ಮತ್ತು ಟರ್ನ್ ಸಿಗ್ನಲ್‌ಗಳು ಟೀಸರ್ ಚಿತ್ರದಲ್ಲಿ ಕಾಣಸಿಗುತ್ತದೆ. ಇನ್ನು ಟೀಸರ್ ಚಿತ್ರದಲ್ಲಿ ವಿ-ಟ್ವಿನ್ ಕ್ರೂಸರ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಕೂಡ ಬಹಿರಂಗಪಡಿಸಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಈ 2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ಸುಂದರವಾದ ಕ್ರೂಸರ್ ಭಾರತೀಯ ಮಾರುಕಟ್ಟೆಯಲ್ಲಿ ಲಗ್ಗೆಯಿಡಲಿದೆ. ಇನ್ನು 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಇದರಲ್ಲಿ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಕೂಡ ಒಳಗೊಂಡಿರುತ್ತದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಇಂಡಿಯನ್ ಚೀಫ್ ಸರಣಿಯ ಬೈಕ್‌ಗಳ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.20,75,922ಗಳಾಗಿದೆ. ಹೊಸ ಬೈಕುಗಳಲ್ಲಿ ವಿಭಿನ್ನ ವಿನ್ಯಾಸ, ಫೀಚರ್'ಗಳ ಜೊತೆಗೆ ಹಲವಾರು ತಾಂತ್ರಿಕ ಅಪ್‍ಡೇಟ್‌ಗಳನ್ನು ನೀಡಲಾಗುತ್ತದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಈ ಮೂರು ಮಾದರಿಗಳು ದೊಡ್ಡ ಥಂಡರ್ ಸ್ಟ್ರೋಕ್ 116 ಮೋಟರ್ ಗಳನ್ನು ಒಳಗೊಂಡಿವೆ. ಈ ಮೂರು ಬೈಕ್‌ಗಳು ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್, ಚೀಫ್ ಬಾಬರ್ ಡಾರ್ಕ್ ಹಾರ್ಸ್ ಹಾಗೂ ಸೂಪರ್ ಚೀಫ್ ಲಿಮಿಟೆಡ್ ಬೈಕುಗಳಾಗಿವೆ ಎಂದು ಇಂಡಿಯನ್ ಮೋಟಾರ್‌ಸೈಕಲ್ ಕಂಪನಿ ತಿಳಿಸಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಹೊಸ ಬೈಕ್‌ಗಳ ಜೊತೆಗೆ ಒರಿಜಿನಲ್ ಬಿಡಿಭಾಗಗಳನ್ನು ಸಹ ನಿಡುವುದರಿಂದ ಗ್ರಾಹಕರು ವಿಭಿನ್ನ ಸವಾರಿ ಅನುಭವವನ್ನು ಪಡೆಯಬಹುದಾಗಿದೆ. ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್ 64 ಇಂಚಿನ ಶಾರ್ಟ್ ವ್ಹೀಲ್ ಬೇಸ್ ಹಾಗೂ 26 ಇಂಚಿನ ಎತ್ತರದ ಸೀಟ್ ಅನ್ನು ಹೊಂದಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಚೀಫ್ ಸರಣಿಯಲ್ಲಿರುವ ಬೈಕ್ 46 ಎಂಎಂ ಫ್ರಂಟ್ ಅಡ್ಜಸ್ಟಬಲ್ ಫೋರ್ಕ್ ಹೊಂದಿದೆ. ಈ ಬೈಕಿನಲ್ಲಿ 28.5 ಡಿಗ್ರಿ ಲೀನ್ ಆಂಗಲ್ ನೀಡಲಾಗಿದೆ. ರೈಡರ್ ಅನುಕೂಲಕ್ಕಾಗಿ ಈ ಬೈಕಿನಲ್ಲಿ ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಈ ಹೊಸ ಇಂಡಿಯನ್ ಚೀಫ್ ಬೈಕ್‌ಗಳು ಹಳೆಯ ಮಾದರಿಯಲ್ಲಿರುವಂತಹ ಸಾಂಪ್ರದಾಯಿಕ ವಿ-ಟ್ವಿನ್ ಎಂಜಿನ್‌ ಹೊಂದಿದೆ. ಈ ಬೈಕ್ ಪವರ್ ಉತ್ಪಾದನೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕಂಪನಿಯ ಬೈಕ್‌ಗಳಿಗೆ ಕಠಿಣ ಪೈಪೋಟಿ ನೀಡಲಿದೆ.

2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕ್ ಟೀಸರ್ ಬಿಡುಗಡೆ

ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್‌ಗಳು ಡೀಲರ್‌ಶಿಪ್ ಬಳಿ ತಲುಪಿದೆ ಎಂದು ವರದಿಗಳಾಗಿದೆ. ಆಸಕ್ತ ಗ್ರಾಹಕರು ಡೀಲರ್‌ಶಿಪ್ ಗಳಿಗೆ ಬೇಟಿ ನೀಡಬಹುದು. ಈ ಚೀಫ್ ಸರಣಿಯ ಹೊಸ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಖರೀದಿಸಲು ಬಯಸುವ ಗ್ರಾಹಕರು ಟೋಕಮ್ ಮೊತ್ತ ರೂ.3 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
2022 Indian Chief Bobber Dark Horse Teaser Released. Read In kannada
Story first published: Friday, June 18, 2021, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X