ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್‌ ಕಂಪನಿಯು ತನ್ನ 2021ರ ಜಾವಾ 42 ಬೈಕ್ ಮಾದರಿಯನ್ನು ಕೆಲ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಜಾವಾ 42 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ 1.68 ಲಕ್ಷದಿಂದ ರೂ.1.83 ಲಕ್ಷ ಬೆಲೆ ಹೊಂದಿದೆ.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಕ್ಲಾಸಿಕ್ ಬೈಕ್ ಮಾರಾಟ ಗಮನಸೆಳೆಯುತ್ತಿರುವ ಜಾವಾ ಬೈಕ್ ಮಾದರಿಗಳು ಹಲವಾರು ವಿವಿಧ ನಮೂನೆಯ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಗ್ರಾಹಕರೊಬ್ಬರು ಜಾವಾ 42 ಮಾದರಿಗಾಗಿ ಸ್ಟಾರ್ ಲೈಟ್ ಬ್ಲ್ಯೂ ಬಣ್ಣದ ಆಯ್ಕೆ ನೀಡುವ ಮೂಲಕ ಪೆರಾಕ್ ಬೈಕಿಗೆ ಹೊಸ ಲುಕ್ ನೀಡಿದ್ದಾರೆ. ಮೂಲ ಮಾದರಿಗಿಂತಲೂ ಉತ್ತಮ ಹೊರ ನೋಟ ಹೊಂದಿರುವ ಮಾಡಿಫೈ ಆವೃತ್ತಿಯು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಕಸ್ಟಮೈಜ್ಡ್ ಜಾವಾ 42 ಮಾದರಿಗೆ ಹೊಸ ಬಣ್ಣದ ಆಯ್ಕೆಯನ್ನು ಸೂರತ್‌ನಲ್ಲಿ ಕ್ಲಾಸಿಕ್ ಜಾವಾ ಬೈಕ್ ಡೀಲರ್ಸ್‌ನಲ್ಲಿ ಅಧಿಕೃತವಾದ ಕಸ್ಟಮೈಜ್ಡ್ ಬಣ್ಣದ ಆಯ್ಕೆ ಲಭ್ಯವಿದ್ದು, ಹೊಸ ಬಣ್ಣದ ಆಯ್ಕೆಯನ್ನು ಡೀಲರ್ಸ್ ಉಚಿತವಾಗಿ ನೀಡುತ್ತಿದ್ದಾರೆ.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಕಂಪನಿಯಿಂದ ನೀಡಾಗುವ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆ ಬೇಕಿದ್ದಲ್ಲಿ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆ ಉಳಿಸಿಕೊಳ್ಳಬಹುದಾಗಿದ್ದು, ಆಸಕ್ತ ಗ್ರಾಹಕರು ಬೇಕಿದ್ದರೆ ಸ್ಟಾರ್ ಲೈಟ್ ಬ್ಲ್ಯೂ ಬಣ್ಣದ ಆಯ್ಕೆ ಪಡೆದುಕೊಳ್ಳಬಹುದು.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಹೊಸ ಜಾವಾ 42 ಬೈಕ್ ಮಾದರಿಯನ್ನು ಸಿರಿಯಸ್ ವೈಟ್, ಆಲ್-ಸ್ಟಾರ್ ಬ್ಲ್ಯಾಕ್ ಮತ್ತು ಓರಿಯನ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದ್ದು, ಈ ಬೈಕಿನ ಫ್ಯೂಯಲ್ ಟ್ಯಾಂಕ್ ನಲ್ಲಿ '42' ಮತ್ತು 'ಕ್ಲಾಸಿಕ್ ಲೆಜೆಂಡ್ಸ್' ಗ್ರಾಫಿಕ್ಸ್‌ ಎಂಬ ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

2021ರ ಜಾವಾ 42 ಬೈಕಿನಲ್ಲಿ ಈಗ ಬಾರ್-ಎಂಡ್ ಮೀರರ್, ರೈಡರ್ ಮತ್ತು ಪಿಲಿಯನ್‌ಗಾಗಿ ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟ್, ಮರುವಿನ್ಯಾಸಗೊಳಿಸಲಾದ ಸೈಡ್ ಸ್ಟ್ಯಾಂಡ್, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಮತ್ತು ಹೆಚ್ಚಿನ ಫೀಚರ್ ಗಳು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಹೊಸ ಬೈಕಿಗೆ ಹೆಡ್‌ಲ್ಯಾಂಪ್ ಗ್ರಿಲ್ ಮತ್ತು ಫ್ಲೈ-ಸ್ಕ್ರೀನ್ ಅನ್ನು ಬಿಡಿಭಾಗಗಳಾಗಿ ನೀಡಲಾಗಿದ್ದು 2021ರ ಜಾವಾ 42 ಬೈಕಿನಲ್ಲಿ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ನೀಡಲು ಸಸ್ಪೆಂಕ್ಷನ್ ಸೆಟಪ್ ಅನ್ನು ರಿ-ಟ್ಯೂನ್ ಮಾಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಹೊಸ ಜಾವಾ 42 ಬೈಕಿನಲ್ಲಿ ಈ ಹಿಂದಿನ 293ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈಗ ಕ್ರಾಸ್-ಪೋರ್ಟ್ ಹರಿವಿನೊಂದಿಗೆ ಬರುತ್ತದೆ, ಇದು ಉತ್ತಮ ಮೈಲೇಜ್, ಬಲವಾದ ಎಕ್ಸ್ಲ್‌ರೇಷನ್ ಮತ್ತು ಅದರ ಡ್ಯುಯಲ್ ಎಕ್ಸಾಸ್ಟ್ ಆಕರ್ಷಕವಾಗಿವೆ.

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

293ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಮಾದರಿಯು 6800 ಆರ್‌ಪಿಎಂನಲ್ಲಿ 27 ಬಿಹೆಚ್‌ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: 14 ದಿನಗಳ ಕಾಲ ಟೈಟ್ ಕರ್ಫ್ಯೂ: ವಾಹನಗಳ ಸಂಚಾರಕ್ಕೆ ಏನೆಲ್ಲಾ ರೂಲ್ಸ್?

ಹೊಸ ಕಸ್ಟಮೈಜ್ಡ್ ಬಣ್ಣದ ಆಯ್ಕೆಯಲ್ಲಿ ಮಿಂಚಿದ ಜಾವಾ 42 ಮೋಟಾರ್‌ಸೈಕಲ್

ಇನ್ನು 2021ರ ಜಾವಾ 42 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾವಾ ಬೈಕ್ 2 ಕೆಜಿ ಹಗುರವಾಗಿದೆ. ಇದು ಒಟ್ಟು 172 ಕೆಜೆ ತೂಕವನ್ನು ಹೊಂದಿದೆ. ಅಲ್ಲದೇ 2021ರ ಜಾವಾ 42 ಬೈಕಿನಲ್ಲಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತದೆ.

Most Read Articles

Kannada
English summary
Customized Starlight Blue Color Jawa 42 Looks Like Classic Legend. Read in Kannada.
Story first published: Wednesday, April 28, 2021, 23:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X