ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ ಕ್ಲಾಸಿಕ್

ಜಾವಾ ಮೋಟಾರ್‌ಸೈಕಲ್‌ ಕಂಪನಿಯು ತನ್ನ 2021ರ ಜಾವಾ ಕ್ಲಾಸಿಕ್ ಮತ್ತು 42 ಬೈಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಬೈಕ್ ಮಾದರಿಗಳು ಕಸ್ಟಮ್ ಬಣ್ಣಗಳೊಂದಿಗೆ ಮಿಂಚುತ್ತಿವೆ.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಕ್ಲಾಸಿಕ್ ಬೈಕ್ ಮಾರಾಟ ಗಮನಸೆಳೆಯುತ್ತಿರುವ ಜಾವಾ ಬೈಕ್ ಮಾದರಿಗಳು ಹಲವಾರು ವಿವಿಧ ನಮೂನೆಯ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಗ್ರಾಹಕರೊಬ್ಬರು ಜಾವಾ ಕ್ಲಾಸಿಕ್ ಬೈಕ್ ಮಾದರಿಗಾಗಿ ಪೆರಾಕ್ ಬೈಕ್ ಮಾದರಿಯಲ್ಲೇ ಮ್ಯಾಟೆ ಬ್ಲ್ಯಾಕ್ ಬಣ್ಣದ ಆಯ್ಕೆ ಪಡೆದುಕೊಳ್ಳುವ ಮೂಲಕ ಆಕರ್ಷಕ ಲುಕ್ ಪಡೆದುಕೊಂಡಿದೆ.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಹೊಸ ಬಣ್ಣದ ಆಯ್ಕೆ ನಂತರ ಜಾವಾ ಕ್ಲಾಸಿಕ್ ಮಾದರಿಯು ಮೂಲ ಮಾದರಿಗಿಂತಲೂ ಉತ್ತಮ ಹೊರ ನೋಟ ಹೊಂದಿದ್ದು, ಮಾಡಿಫೈ ಆವೃತ್ತಿಯು ಕ್ಲಾಸಿಕ್ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಕಸ್ಟಮೈಜ್ಡ್ ಬಣ್ಣದ ಆಯ್ಕೆಗಳನ್ನು ಜಾವಾ ಕ್ಲಾಸಿಕ್ ಮತ್ತು 42 ಮಾದರಿಗಳಿಗೆ ಸೂರತ್‌ ಮೂಲದ ಕ್ಲಾಸಿಕ್ ಜಾವಾ ಬೈಕ್ ಡೀಲರ್ಸ್‌ನಲ್ಲಿ ಅಘೋಜಿ ಕಸ್ಟಮ್ ಕಂಪನಿಯೇ ಡೀಲರ್ಸ್ ಜೊತೆಗೂಡಿ ಕಸ್ಟಮೈಜ್ಡ್ ಬಣ್ಣದ ಆಯ್ಕೆಗಳನ್ನು ನೀಡುತ್ತಿದೆ.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಕಂಪನಿಯಿಂದ ನೀಡಲಾಗುವ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆ ಬೇಕಿದ್ದಲ್ಲಿ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆ ಉಳಿಸಿಕೊಳ್ಳಬಹುದಾಗಿದ್ದು, ಆಸಕ್ತ ಗ್ರಾಹಕರಿಗಾಗಿ ರೂ. 15 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಾಗಿ ಮ್ಯಾಟೆ ಬ್ಲ್ಯಾಕ್ ಮತ್ತು 42 ಮಾದರಿಗಾಗ ಸ್ಟಾರ್ ಲೈಟ್ ಬ್ಲ್ಯೂ ಬಣ್ಣದ ಆಯ್ಕೆ ಪಡೆದುಕೊಳ್ಳಬಹುದು.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಹೊಸ ಜಾವಾ ಕ್ಲಾಸಿಕ್, 42 ಬೈಕ್ ಮಾದರಿಗಳನ್ನು ಸಿರಿಯಸ್ ವೈಟ್, ಆಲ್-ಸ್ಟಾರ್ ಬ್ಲ್ಯಾಕ್ ಮತ್ತು ಓರಿಯನ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದ್ದು, ಈ ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ಗ್ರಾಫಿಕ್ಸ್‌ ಸೇರಿಸಲಾಗಿರುತ್ತದೆ.

MOST READ: ಪ್ರತಿ ಚಾರ್ಜ್‌ಗೆ 240ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಎನರ್ಜಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಇನ್ನು 2021ರ ಜಾವಾ ಕ್ಲಾಸಿಕ್ ಮತ್ತು 42 ಬೈಕ್ ಮಾದರಿಗಳಲ್ಲಿ ಇದೀಗ ಬಾರ್-ಎಂಡ್ ಮೀರರ್, ರೈಡರ್ ಮತ್ತು ಪಿಲಿಯನ್‌ಗಾಗಿ ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟ್, ಮರುವಿನ್ಯಾಸಗೊಳಿಸಲಾದ ಸೈಡ್ ಸ್ಟ್ಯಾಂಡ್, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

ಜಾವಾ ಎರಡು ಬೈಕ್ ಮಾದರಿಗಳಲ್ಲೂ 293 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಕ್ರಾಸ್-ಪೋರ್ಟ್ ಹರಿವಿನೊಂದಿಗೆ ಬರುತ್ತದೆ, ಇದು ಉತ್ತಮ ಮೈಲೇಜ್, ಬಲವಾದ ಎಕ್ಸ್ ಲೇರೆಷನ್ ಮತ್ತು ಡ್ಯುಯಲ್ ಪೈಪ್‌ಗಳಿಂದ ಥ್ರೋಟಿಯರ್ ಎಕ್ಸಾಸ್ಟ್ ನೋಟ್ ಅನ್ನು ನೀಡುತ್ತದೆ.

MOST READ: ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಪೆರಾಕ್ ಬೈಕ್ ಮಾದರಿಯಲ್ಲೇ ಕಸ್ಟಮ್ ಬಣ್ಣದ ಆಯ್ಕೆ ಪಡೆದುಕೊಂಡ ಜಾವಾ

2021ರ ಜಾವಾ ಕ್ಲಾಸಿಕ್ ಮತ್ತು 42 ಬೈಕ್ ಹೊಸ ಫೀಚರ್ಸ್‌ಗಳು ಮತ್ತು ನವೀಕರಿಸಲಾದ ವಿನ್ಯಾಸ ಮತ್ತು ಮೂರು ಹೊಸ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಜಾವಾ ಬೈಕ್‌ಗಳು ಒಟ್ಟು 172 ಕೆಜೆ ತೂಕದೊಂದಿಗೆ ಹಳಯ ಮಾದರಿಗಿಂತ 2 ಕೆ.ಜಿ ಕಡಿತಗೊಂಡಿವೆ.

Image Courtesy: agozee_kustoms

Most Read Articles

Kannada
English summary
Jawa Classic Featuring Perak’s Matte Black Colour Scheme. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X