ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ.4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಹೆಚ್ಚುತ್ತಿರುವ ಕೋವಿಡ್ 2ನೇ ಅಲೆಯನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಕೋವಿಡ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ. ಕೈ ತಪ್ಪಿರುವ ಕರೋನಾ ನಿಯಂತ್ರಣವನ್ನು ಹತೋಟಿ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈದ್ಯಕೀಯ ಸೇವೆಗಳನ್ನು ತೀವ್ರಗೊಳಿಸುತ್ತಿದ್ದು, ಸರ್ಕಾರದ ಪ್ರಯತ್ನಕ್ಕೆ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಕೈಜೋಡಿಸಿವೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ವಾಹನ ಉತ್ಪಾದನೆ ಸ್ಥಗಿತವಾಗಿರುವುದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಸಹ ವೈರಸ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡಿದೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸರ್ಕಾರಗಳ ಪ್ರಯತ್ನಕ್ಕೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಸಹಕಾರ ನೀಡುತ್ತಿವೆ. ಟಿವಿಎಸ್ ಗ್ರೂಪ್ ಕಂಪನಿಯು ಸಹ ಕೋವಿಡ್ ನಿಯಂತ್ರಣಕ್ಕಾಗಿ ಕಳೆದ ವಾರಷ್ಟೇ ಕೇಂದ್ರ ಸರ್ಕಾರಕ್ಕೆ 40 ಕೋಟಿ ಹಣಕಾಸು ನೆರವು ನೀಡಿದೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ಮಾತ್ರವಲ್ಲ ಕರ್ನಾಟಕ ಸರ್ಕಾರಕ್ಕೂ ಸಹ ಪ್ರತ್ಯೇಕವಾಗಿ ರೂ. 4 ಕೋಟಿ ದೇಣಿಗೆ ಸಲ್ಲಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಕೋವಿಡ್ ವಿರುದ್ದ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಮುಂದೆಯೂ ಅಗತ್ಯ ಸಹಕಾರ ನೀಡುವುದಾಗಿ ಹೇಳಿಕೊಂಡಿದೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಕರ್ನಾಟಕಕ್ಕೆ ನೀಡಲಾಗಿರುವ ರೂ.4 ಕೋಟಿ ಪರಿಹಾರ ನಿಧಿಯಲ್ಲಿ ಟಿವಿಎಸ್ ಸಾಮಾಜಿಕ ಸೇವಾ ವಿಭಾಗವಾದ ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ ಸುಮಾರು ರೂ. 1 ಕೋಟಿ ನಗದು ದೇಣಿಗೆ ಮತ್ತು ರೂ.3 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳ ಖರೀದಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.

MOST READ: ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ವೈದ್ಯಕೀಯ ಉಪಕರಣಗಳಲ್ಲಿ ಆಮ್ಲಜನಕ ಪೂರೈಸುವ 300 ಕಾನ್ಸನ್ಟ್ರೇಟರ್ ಯಂತ್ರಗಳ ಜೊತೆ ವೆಂಟಿಲೇಟರ್‌ಗಳನ್ನು ದೇಣಿಯಾಗಿ ನೀಡಿದ್ದು, ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿದೆ.

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಇನ್ನು ಕೋವಿಡ್ 2ನೇ ಅಲೆಯಿಂದಾಗಿ ಆರ್ಥಿಕ ಸಂಕಷ್ಟವು ಕಳೆದ ಬಾರಿಗಿಂತಲೂ ಹೆಚ್ಚಾಗುತ್ತಿದ್ದು, ವೈರಸ್ ಭೀತಿಯಿಂದ ಆರ್ಥಿಕ ಚಟುವಟಿಕೆಯಿಲ್ಲದೆ ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಾಮಾಜಿಕ ಜವಾಬ್ದಾರಿ ಅಡಿ ಹಲವು ವಾಹನ ಉತ್ಪಾದನಾ ಕಂಪನಿಗಳು ಸರ್ಕಾರಕ್ಕೆ ವಿವಿಧ ರೀತಿಯ ಸಹಕಾರ ಘೋಷಿಸಿವೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕೋವಿಡ್ ಸಂಕಷ್ಟ: ಕರ್ನಾಟಕ ಸರ್ಕಾರಕ್ಕೆ ರೂ. 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್

ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕವಾಗಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

Most Read Articles

Kannada
English summary
Hon’ble Chief Minister of Karnataka, Shri. B. S. Yediyurappa receives contribution from TVS Motor Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X