ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಜನಪ್ರಿಯ ದ್ವಿಚಕ್ರ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಸರಣಿಯಲ್ಲಿರುವ ವರ್ಸಿಸ್ 650 ಮತ್ತು ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಎರಡು ಬೈಕ್‌ಗಳ ಮೇಲೆ ಕವಾಸಕಿ ರೂ.30,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಕವಾಸಕಿ ವರ್ಸಿಸ್ 650 ಮತ್ತು ವರ್ಸಿಸ್ 1000 ಬೈಕ್‌ಗಳ ಮೇಲೆ ಇರುವ ಈ ರಿಯಾಯಿತಿಗಳು ಸಿಮೀತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕವಾಸಕಿ ಕಂಪನಿಯು ಈ ಆಫರ್ ಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದೆ. ಕವಾಸಕಿ ವರ್ಸಿಸ್ 650 ಅಥವಾ ವರ್ಸಿಸ್ 1000 ಬೈಕ್‌ಗ ಖರೀದಿಸುವಾಗ ಕಂಪನಿಯು ಬಿಡುಗಡೆ ಮಾಡಿದ ಹೊಸ ವೋಚರ್ ಮೂಲಕ ರಿಯಾಯಿತಿಯನ್ನು ಪಡೆಯಬಹುದು.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಈ ವೋಚರ್ ಮೂಲಕ, ಕವಾಸಕಿ ವರ್ಸಿಸ್ 650 ಮತ್ತು ವರ್ಸಿಸ್ 1000 ಬೈಕ್‌ಗಳ ಬೆಲೆ ರೂ,30,000 ಗಳವರೆಗೆ ಕಡಿತವಾಗುತ್ತದೆ. ಸದ್ಯ ಕವಾಸಕಿ ವರ್ಸಿಸ್ 650 ಬೈಕಿನ ಬೆಲೆಯು ರೂ.7.08 ಲಕ್ಷಗಳಾದರೆ, ವರ್ಸಿಸ್ 1000 ಬೈಕಿನ ಬೆಲೆಯು ರೂ.11.44 ಲಕ್ಷ ಗಳಾಗಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಕವಾಸಕಿ ವರ್ಸಿಸ್ 650 ಬೈಕ್ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಕವಾಸಕಿ ವರ್ಸಿಸ್ 650 ಜಪಾನಿನ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಅಡ್ವೆಂಚರ್ ಮಾದರಿಯಾಗಿದೆ. ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಇನ್ನು ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ನೀಡಲಾಗಿಲ್ಲ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಇನ್ನು 2020ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 145 ಎಂಎಂ ಆಫ್ಸೆಟ್ ಲೇಡೌನ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 250 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ನೀಡಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಇನ್ನು ಕವಾಸಕಿ ವರ್ಸಿಸ್ 1000 ಬಿಎಸ್ 6 ಬೈಕಿನಲ್ಲಿ 1,043 ಸಿಸಿಯ ಲಿಕ್ವಿಡ್-ಕೂಲ್ಡ್, ಇನ್-ಲೈನ್ ಫೋರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ ಸ್ಲಿಪ್-ಅಸಿಸ್ಟ್ ಕ್ಲಚ್‌ ಹೊಂದಿರುವ 6-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ವರ್ಸಿಸ್ 1000 ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್‌‌ಗಳನ್ನು ಹೊಂದಿದೆ. ಇವುಗಳಲ್ಲಿ ಐಎಂಯು ಆಧಾರಿತ ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಸಹ ಸೇರಿದೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಇಂಟೆಲಿಜೆಂಟ್ ಆಂಟಿ-ಲಾಕ್ ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್‌ಗಳನ್ನು ಹೊಂದಿದೆ. 21 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿರುವ ಈ ದೊಡ್ಡ ಗಾತ್ರದ ಬೈಕಿನ ತೂಕ 255 ಕೆ.ಜಿಗಳಾಗಿದೆ.

ಕವಾಸಕಿ ವರ್ಸಿಸ್ 650, ವರ್ಸಿಸ್ 1000 ಬೈಕ್‌ಗಳ ಮೇಲೆ ಭರ್ಜರಿ ಆಫರ್

ಈ ಬೈಕಿನಲ್ಲಿ ವಿಂಡ್-ಸ್ಕ್ರೀನ್, ಅನಲಾಗ್ ಟ್ಯಾಕೋಮೀಟರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಪಕ್ಕದಲ್ಲಿ ಡಿಸಿ ಚಾರ್ಜಿಂಗ್ ಸಾಕೆಟ್‌ ಸೇರಿದಂತೆ ಹಲವಾರು ಫೀಚರ್‌ಗಳನ್ನು ನೀಡಲಾಗಿದೆ.

Most Read Articles

Kannada
English summary
Kawasaki Versys 650, Versys 1000 Available Discount. Read In Kannada.
Story first published: Monday, July 5, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X