ಇಂಡಿಯಾ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಪ್ರಸಕ್ತ ವರ್ಷದ ಇಂಡಿಯಾ ಬೈಕ್ ವೀಕ್ ಪುಣೆ ಬಳಿಯಿರುವ ಆ್ಯಂಬಿ ವ್ಯಾಲಿಯಲ್ಲಿ ಭರ್ಜರಿಯಾಗಿ ಆರಂಭಗೊಂಡಿದ್ದು, 2021 ಬೈಕ್ ವೀಕ್‌ನಲ್ಲಿ ಈ ಬಾರಿ ಹಲವಾರು ಹೊಸ ಮಾದರಿಯ ಪ್ರೀಮಿಯಂ ಬೈಕ್ ಮಾದರಿಗಳು ಅನಾವರಣಗೊಂಡಿವೆ. ಇನ್ನು ಕೆಲವು ಬಹುನೀರಿಕ್ಷಿತ ಮಾದರಿಗಳು ಬಿಡುಗಡೆಗೊಂಡಿದ್ದು, ಕವಾಸಕಿ ನಿರ್ಮಾಣದ ಹೊಸ ಜೆಡ್650ಆರ್‌ಎಸ್ ಕೂಡಾ ಇದೀಗ ದೇಶಿಯ ಮಾರುಕಟ್ಟೆ ಪ್ರವೇಶಿಸಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕವಾಸಕಿಯು ಭಾರತದಲ್ಲಿ ಈಗಾಗಲೇ ಹಲವಾರು ಸೂಪರ್ ಬೈಕ್ ಮಾದರಿಗಳ ಮಾರಾಟ ಹೊಂದಿದ್ದು, ಕಂಪನಿಯು ಇದೀಗ ಪ್ರೀಮಿಯಂ ಬೈಕ್ ಖರೀದಿದಾರರ ಬೇಡಿಕೆ ಅನುಸಾರವಾಗಿ ಹೊಸ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದು, ಕಂಪನಿಯು ಇದೀಗ ಹೊಸ ಬೈಕ್ ಮಾದರಿಯನ್ನು ಇಂಡಿಯನ್ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಳಿಸುವ ಮೂಲಕ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿತು.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಹೊಸ ಜೆಡ್650ಆರ್‌ಎಸ್ ಬೈಕ್ ಮಾದರಿಯು ಕವಾಸಕಿ ನಿರ್ಮಾಣದ ಮತ್ತೊಂದು ಮಧ್ಯಮ ಕ್ರಮಾಂಕದ ಸೂಪರ್ ಬೈಕ್ ಮಾದರಿಯಾದ ಜೆಡ್900ಆರ್‌ಎಸ್ ಮಾದರಿಯ ವಿನ್ಯಾಸ ಸ್ಫೂರ್ತಿ ಪಡೆದುಕೊಂಡಿದ್ದು, ರೆಟ್ರೊ ವಿನ್ಯಾಸದೊಂದಿಗೆ ಹೊಸ ಬೈಕ್ ಮಾದರಿಯು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಕವಾಸಕಿ ಕಂಪನಿಯು ಹೊಸ ಜೆಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಮಾದರಿಯನ್ನು ಎಕ್ಸ್ ಶೋರೂಂ ಪ್ರಕಾರ ರೂ. 6.65 ಲಕ್ಷಕ್ಕೆ ಬಿಡುಗಡೆ ಮಾಡಿದ್ದ, ಈ ರೆಟ್ರೊ-ಥೀಮ್ ಬೈಕಿನ ವಿತರಣೆಯು ಶೀಘ್ರದಲ್ಲಿಯೇ ಆರಂಭವಾಗಲಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಜೆಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ವೃತ್ತಾಕಾರವಾದ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅನ್ನು ಹೊಂದಿದ್ದು, ಎಲ್‌ಇಡಿ ಟೈಲ್‌ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಇತರೆ ಪ್ರಮುಖ ವೈಶಿಷ್ಟ್ಯತೆಗಳೆಂದರೆ ವೃತ್ತಾಕಾರವಾಗಿರುವ ರಿಯರ್ ವ್ಯೂ ಮೀರರ್ಸ್, ಸ್ಪೋಕ್ಡ್ ವ್ಹೀಲ್ ಗಳು, ಸ್ಪೋರ್ಟಿಯಾಗಿರುವ ಇಂಧನ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಸಿಸ್ಟಮ್ ಮತ್ತು ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಒಳಗೊಂಡಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಹೊಸ ಜೆಡ್650ಆರ್‌ಎಸ್ ಬೈಕ್ ಮಾದರಿಯಲ್ಲಿ ಕಂಪನಿಯು ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮಾಡೆಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯನ್ನು ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿಯು ಇದೇ ಬೈಕ್ ಮಾದರಿಗೆ ಮೂರು ವಿವಿಧ ಬಣ್ಣಗಳ ಆಯ್ಕೆಯನ್ನು ನೀಡಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಜೆಡ್650ಆರ್‌ಎಸ್ ಮಾದರಿಯಲ್ಲಿ ಇತರೆ ಗಮನಿಸಬಹುದಾದ ತಾಂತ್ರಿಕ ಅಂಶಗಳೆಂದರೆ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾಗಿರುವ ಹ್ಯಾಂಡಲ್‌ಬಾರ್ ಪೊಸಿಶನಿಂಗ್ ಮತ್ತು ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್ ಒಳಗೊಂಡಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಕವಾಸಕಿ ಜೆಡ್650ಆರ್‌ಎಸ್ ಬೈಕಿನಲ್ಲಿ ಕವಾಸಕಿಯು ತನ್ನ ಬೈಕ್‌ಗಳಲ್ಲಿ ಕಂಡುಬರುವ 649 ಸಿಸಿ ಪ್ಯಾರಲಲ್ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 6,700 ಆರ್‌ಪಿಎಂನಲ್ಲಿ 67.3 ಬಿಹೆಚ್‌ಪಿ ಮತ್ತು 8,000 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಹೊಸ ಬೈಕಿನಲ್ಲಿ ಕಂಪನಿಯು 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಿದ್ದು, ಇನ್ನು ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್ ಗಳಿಗೆ ಹೋಲಿಸಿದರೆ ಈ ಹೊಸ ಬೈಕ್ 20 ಬಿಹೆಚ್‍ಪಿ ಮತ್ತು 12 ಎನ್ಎಂ ಕಡಿಮೆ ಟಾರ್ಕ್ ಉತ್ಪಾದಿಸುತ್ತದೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಹೊಸ ಕವಾಸಕಿ ಜೆಡ್650ಆರ್‌ಎಸ್ ಬೈಕ್ ಸಸ್ಷೆಂಷನ್ ಬಗೆಗೆ ಹೇಳುವುದಾದರೆ ಹೊಸ ಬೈಕ್ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಬ್ಯಾಕ್‌ಲಿಂಕ್ ಮೊನೊಶಾಕ್ ಸೆಟಪ್ ಜೋಡಿಸಲಾಗಿದ್ದು, ಬೈಕಿನ ಬ್ರೇಕಿಂಗ್ ಸಿಸ್ಟಂ ಕೂಡಾ ಹೆಚ್ಚು ಕಾರ್ಯಕ್ಷಮತೆ ಕೂಡಿವೆ.

ಇಂಡಿಯನ್ ಬೈಕ್ ವೀಕ್ 2021: ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಅನಾವರಣ

ಹೊಸ ಬೈಕಿನಲ್ಲಿ ಡ್ಯುಯಲ್-ಪಿಸ್ಟನ್ ಫ್ರಂಟ್ ಕ್ಯಾಲಿಪರ್‌ಗಳೊಂದಿಗೆ 300 ಎಂಎಂ ಟ್ವಿನ್ ರೋಟರ್‌ಗಳು ಮತ್ತು ಸಿಂಗಲ್-ಪಿಸ್ಟನ್ ರಿಯರ್ ಕಾಲಿಪರ್ ಹೊಂದಿರುವ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು, ಹೊಸ ಬೈಕ್ ಕಾರ್ಯಕ್ಷಮತೆಯನ್ನು ಜನಪ್ರಿಯತೆಗೊಳಿಸಲು ತನ್ನ ಪ್ರಮುಖ ಬೈಕ್ ಮಾದರಿಗಳಿಂದ ಕೆಲವು ವಿಶಿಷ್ಠವಾದ ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ.

Most Read Articles

Kannada
English summary
Kawasaki india introduced new z650rs in 2021 ibw
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X