Just In
- 35 min ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 1 hr ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 2 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ Kawasaki Ninja ZX-10R ಬೈಕ್
ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿಯು ತನ್ನ ನಿಂಜಾ ಝಡ್ಎಕ್ಸ್-10ಆರ್ ಬೈಕನ್ನು ಹೊಸ ಬಣ್ಣದ ಅಯ್ಕೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕವಾಸಕಿ ನಿಂಜಾ ಝಡ್ಎಕ್ಸ್-10ಆರ್(Kawasaki Ninja ZX-10R) ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್ಗಳಲ್ಲಿ ಒಂದಾಗಿದೆ.
2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಇದು ಮೆಟಾಲಿಕ್ ಮ್ಯಾಟ್ ಗ್ರ್ಯಾಫೆನೆಸ್ಟೀಲ್ ಗ್ರೇ ಬಣ್ಣದ ಜೊತೆಗೆ ಮೆಟಾಲಿಕ್ ಡಯಾಬ್ಲೊ ಬ್ಲ್ಯಾಕ್ನ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಣ್ಣದ ಜೊತೆಗೆ ರೆಡ್ ಪಿನ್ಸ್ಟ್ರೈಪ್ಗಳನ್ನು ಮತ್ತು ಸೈಡ್ ಫೇರಿಂಗ್ ಅನ್ನು ಹೊಂದಿದೆ. 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಶೀಘ್ರದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ, ಮುಂದಿನ ವರ್ಷ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ನಾವು ನಿರೀಕ್ಷಿಸುತ್ತೆವೆ.
2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪ್ರೀಮಿಯಂ ಸೂಪರ್ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಯುರೊ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿದೆ.
ಇನ್ನು 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಸೂಪರ್ಸ್ಪೋರ್ಟ್ ಬೈಕ್ ಏರೋಡೈನಾಮಿಕ್ ಮೇಲ್ಭಾಗದ ಕೌಲ್, ಹೊಸ ಟೈಲ್ ಕೌಲ್, ಪರಿಷ್ಕೃತ ಹ್ಯಾಂಡಲ್ಬಾರ್, ಫುಟ್ಪೆಗ್ ಮತ್ತು ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ.
2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡ ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಹ ಹೊಂದಿದೆ. ಇದು ಬ್ರ್ಯಾಂಡ್ನ 'ರೈಡಾಲಜಿ ದಿ ಆ್ಯಪ್' ನೊಂದಿಗೆ ಕಾರ್ಯನಿರ್ವಹಿಸುತ್ತದೆ.ಲೀಟರ್-ಕ್ಲಾಸ್ ಸೂಪರ್ಸ್ಪೋರ್ಟ್ ಬೈಕ್ ಆಗಿರುವುದರಿಂದ, ಇದರಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಗಳನ್ನು ಹೊಂದಿದೆ.
ಇದರಲ್ಲಿ ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ ರೈಡಿಂಗ್ ಮೋಡ್ ಗಳು, ಎಂಜಿನ್ ಬ್ರೇಕ್ ಮತ್ತು ಇನು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ.
ಈ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ 998 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,200 ಆರ್ಪಿಎಂನಲ್ಲಿ 200 ಬಿಹೆಚ್ಪಿ ಪವರ್ ಮತ್ತು 11,400 ಆರ್ಪಿಎಂನಲ್ಲಿ 114 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ, ಬೈಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಸ್ಟ್ಯಾಂಡರ್ಡ್ ಆಗಿ ನೀಡಿದೆ.
2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಲೈಮ್ ಗ್ರೀನ್, ಫ್ಲಾಟ್ ಎಬೊನಿ ಟೈಪ್2 ಮತ್ತು ಮೆಟಾಲಿಕ್ ಮ್ಯಾಟ್ ಗ್ರ್ಯಾಫೆನೆಸ್ಟೀಲ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲು ಲಭ್ಯವಿರಲಿದೆ
ಈ ಲೀಟರ್-ಕ್ಲಾಸ್ ಸೂಪರ್ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಇನ್ವರ್ಡಡ್ ಶೋವಾ ಬಿಎಫ್ಎಫ್ (ಬ್ಯಾಲೆನ್ಸ್ ಫ್ರೀ ಫೋರ್ಕ್ಸ್) ಮತ್ತು ಹಿಂಭಾಗದಲ್ಲಿ ಬಿಆರ್ಎಫ್ಸಿ ಲೈಟ್ (ಬ್ಯಾಲೆನ್ಸ್ ಫ್ರೀ ರಿಯರ್ ಕುಶನ್) ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಇದರೊಂದಿಗೆ ಡ್ಯುಯಲ್-ಚಾನೆಲ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ತನ್ನ ಹೊಸ ವರ್ಸಿಸ್ 1000 ಬೈಕನ್ನು ಹೊಸ ನವೀಕರಣಗಳೊಂದಿಗೆ ಇತ್ತೀಚೆಗೆ ಅನಾವರಣಗೊಳಿಸಿತ್ತು. 2022ರ ಕವಾಸಕಿ ವರ್ಸಿಸ್ 1000 ಬೈಕ್ ಗಾಗಿ ಹೊಸ ಎಂಟ್ರಿ-ಲೆವೆಲ್ 'ಸ್ಟ್ಯಾಂಡರ್ಡ್' ವೆರಿಯಂಟ್ ಪರಿಚಯಿಸಲಾಗಿದೆ. ಈ ಹೊಸ ವೆರಿಯೆಂಟ್ ನೊಂದಿಗೆ 2022ರ ಕವಾಸಕಿ ವರ್ಸಿಸ್ ಬೈಕ್ ಕೇವಲ ಸಣ್ಣ ಬದಲಾವಣೆಗಳೊಂದಿಗೆ ಬರುತ್ತದೆ, ಈ ಹೊಸ ಕವಾಸಕಿ ವರ್ಸಿಸ್ 1000 ಬೈಕಿನಲ್ಲಿ 999 ಸಿಸಿ, ಇನ್ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಎಚ್ಪಿ ಪವರ್ ಮತ್ತು 101 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಸ್ ಮತ್ತು ಎಸ್ಇ ಮಾದರಿಗಳ ಹೆಚ್ಚುವರಿ ಸಲಕರಣೆಗಳಿಲ್ಲದೆ, ಬೇಸ್ ರೂಪಾಂತರವು ತೂಕವನ್ನು ಕಳೆದುಕೊಳ್ಳುತ್ತದೆ, ಆದರೆ ಇನ್ನೂ ಮೂಲ ಉಪಕರಣಗಳನ್ನು ಪಡೆಯುತ್ತದೆ. ಇನ್ನು ಕ್ವಿಕ್ಶಿಫ್ಟರ್, ಹಿಟೆಡ್ ಗ್ರಿಪ್ಸ್, ಹ್ಯಾಂಡ್ ಗಾರ್ಡ್ಗಳು ಮತ್ತು ಹೆಚ್ಚಿನ ವಿಂಡ್ಶೀಲ್ಡ್ ಕೂಡ ಹೆಚ್ಚುವರಿ ಲಭ್ಯವಿದೆ. 253 ಕೆಜಿಯಲ್ಲಿ, ಬೇಸ್ ರೂಪಾಂತರವು ಎಸ್ ರೂಪಾಂತರಗಿಂತ 2 ಕೆಜಿ ಕಡಿಮೆ ತೂಕವನ್ನು ಹೊಂದಿರುತ್ತದೆ. ಎಸ್ಇಗಿಂತ ನಾಲ್ಕು ಕೆಜಿ ಭಾರವಾಗಿರುತ್ತದೆ. ಎಸ್ ಟ್ರಿಮ್ ಮೇಲೆ ವರ್ಸಿಸ್ 1000 ಎಸ್ಇ ಯಲ್ಲಿ ಕಿಟ್ ಮಟ್ಟಗಳು ಎಲೆಕ್ಟ್ರಾನಿಕ್ ಡ್ಯಾಂಪ್ಡ್ ಶೋವಾ ಸ್ಕೈಹೂಕ್ ಸಸ್ಪೆನ್ಷನ್ ಮತ್ತು ಇತರ ಎಲೆಕ್ಟ್ರಾನಿಕ್ ರೈಡರ್ ಏಡ್ಗಳನ್ನು ಕೂಡ ಒಳಗೊಂಡಿವೆ.
2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ 2022ರ ಮಾದರಿಯಲ್ಲಿ ಹೊಸ ಬಣ್ಣದ ಆಯ್ಜೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ, ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಸ್ 1000 ಆರ್ಆರ್ ಮತ್ತು ಡುಕಾಟಿ ಪಾನಿಗಲೆ ವಿ2 ಬೈಕುಗಳಿಗೆ ಪೈಪೋಟಿ ನೀಡುತ್ತದೆ.