ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ತನ್ನ ಹೊಸ ವರ್ಸಿಸ್ 1000 ಬೈಕನ್ನು ಹೊಸ ನವೀಕರಣಗಳೊಂದಿಗೆ ಅನಾವರಣಗೊಳಿಸಿದೆ. 2022ರ ಕವಾಸಕಿ ವರ್ಸಿಸ್ 1000(Kawasaki Versys 1000) ಬೈಕ್ ಗಾಗಿ ಹೊಸ ಎಂಟ್ರಿ-ಲೆವೆಲ್ 'ಸ್ಟ್ಯಾಂಡರ್ಡ್' ವೆರಿಯಂಟ್ ಪರಿಚಯಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಹೊಸ ವೆರಿಯೆಂಟ್ ನೊಂದಿಗೆ 2022ರ ಕವಾಸಕಿ ವರ್ಸಿಸ್ ಬೈಕ್ ಕೇವಲ ಸಣ್ಣ ಬದಲಾವಣೆಗಳೊಂದಿಗೆ ಬರುತ್ತದೆ, ಈ ಹೊಸ ಕವಾಸಕಿ ವರ್ಸಿಸ್ 1000 ಬೈಕಿನಲ್ಲಿ 999 ಸಿಸಿ, ಇನ್ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಎಚ್‌ಪಿ ಪವರ್ ಮತ್ತು 101 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಸ್ ಮತ್ತು ಎಸ್ಇ ಮಾದರಿಗಳ ಹೆಚ್ಚುವರಿ ಸಲಕರಣೆಗಳಿಲ್ಲದೆ, ಬೇಸ್ ರೂಪಾಂತರವು ತೂಕವನ್ನು ಕಳೆದುಕೊಳ್ಳುತ್ತದೆ, ಆದರೆ ಇನ್ನೂ ಮೂಲ ಉಪಕರಣಗಳನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಇನ್ನು ಕ್ವಿಕ್‌ಶಿಫ್ಟರ್, ಹಿಟೆಡ್ ಗ್ರಿಪ್ಸ್, ಹ್ಯಾಂಡ್ ಗಾರ್ಡ್‌ಗಳು ಮತ್ತು ಹೆಚ್ಚಿನ ವಿಂಡ್‌ಶೀಲ್ಡ್ ಕೂಡ ಹೆಚ್ಚುವರಿ ಲಭ್ಯವಿದೆ. 253 ಕೆಜಿಯಲ್ಲಿ, ಬೇಸ್ ರೂಪಾಂತರವು ಎಸ್‌ ರೂಪಾಂತರಗಿಂತ 2 ಕೆಜಿ ಕಡಿಮೆ ತೂಕವನ್ನು ಹೊಂದಿರುತ್ತದೆ. ಎಸ್‌ಇಗಿಂತ ನಾಲ್ಕು ಕೆಜಿ ಭಾರವಾಗಿರುತ್ತದೆ. ಎಸ್ ಟ್ರಿಮ್ ಮೇಲೆ ವರ್ಸಿಸ್ 1000 ಎಸ್ಇ ಯಲ್ಲಿ ಕಿಟ್ ಮಟ್ಟಗಳು ಎಲೆಕ್ಟ್ರಾನಿಕ್ ಡ್ಯಾಂಪ್ಡ್ ಶೋವಾ ಸ್ಕೈಹೂಕ್ ಸಸ್ಪೆನ್ಷನ್ ಮತ್ತು ಇತರ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಸೇರಿಸುವುದನ್ನು ಒಳಗೊಂಡಿದೆ

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

2022ರ ಕವಾಸಕಿ ವರ್ಸಿಸ್ 1000 ಎಸ್‌ಇ ವೆರಿಯೆಂಟ್ ಬೆಲೆಯು ಅಂದಾಜು ರೂ.15.21 ಲಕ್ಷ ದಿಂದ ಆರಂಭವಾಗಬಹುದು. ಇನ್ನು ಈ ಹೊಸ ಬೈಕ್ ದೊಡ್ಡದಾದ ಪ್ಯಾನಿಯರ್‌ಗಳು ಮತ್ತು ಹೆಚ್ಚು ಪ್ರಾಯೋಗಿಕ ಸೌಕರ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ,

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಇನ್ನು ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್ ಎಲೆಕ್ಟ್ರಾನಿಕ್ ಕಂಟ್ರೋಲ್ ಸಸ್ಪೆಂಕ್ಷನ್(ಕೆಇಸಿಎಸ್) ಅನ್ನು ಹೊಂದಿದೆ. ಇದು ರಸ್ತೆಗೆ ಸರಿಹೊಂದಿಸಲು ಮತ್ತು ಲಗೇಜ್ ಅಥವಾ ಪ್ರಯಾಣಿಕರಿಗೆ ಅನುಗುಣವಾಗಿ ಹಿಂಭಾಗದ ಪ್ರೀ ಲೋಡ್ ಅನ್ನು ಅತ್ಯುತ್ತಮವಾಗಿಸಲು ಸವಾರರಿಗೆ ಅನುವು ಮಾಡಿಕೊಡುತ್ತದೆ. ಶೋವಾ ಅವರ ಸ್ಕೈಹೂಕ್ ಎಲೆಕ್ಟ್ರಾನಿಕ್ ಸುಸಜ್ಜಿತ ಸವಾರಿ ಹೊಂದಾಣಿಕೆ ಹೊಂದಿಸುವ ಡೇಟಾವನ್ನು ವಿಶ್ಲೇಷಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಕವಾಸಕಿ ಕಂಪನಿಯ ಪ್ರಕಾರ, ಸ್ಕೈಹೂಕ್ ಸಸ್ಪೆಂಕ್ಢನ್ ಡ್ಯಾಂಪಿಂಗ್ ಫೋರ್ಸ್ ಅನ್ನು ಮಾರ್ಪಡಾಗಿ ರಸ್ತೆ ಗುಂಡಿಗಳನ್ನು ಮತ್ತು ಹಂಪ್ ಗಳಲ್ಲಿ ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಪರಿಸ್ಥಿತಿಗಳನ್ನು ಲೆಕ್ಕಿಸದೆ ಬೈಕ್‌ ಅನ್ನು ಸಂಪೂರ್ಣವಾಗಿ ಸಮತೋಲನ ಮಟ್ಟದಲ್ಲಿಡಲು ಸ್ಕೈಹೂಕ್ ಸಸ್ಪೆಂಕ್ಷನ್ ಸೆಟಪ್ ಸಹಾಯ ಮಾಡುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಇನ್ನು ಸಸ್ಪೆಂಕ್ಷನ್ ಅದರ ವೇಗ ಮತ್ತು ದೂರವನ್ನು ಅಳೆಯಲು ಸಿಸ್ಟಂ ಸೆನ್ಸಾರ್ ಗಳನ್ನು ಬಳಸುತ್ತದೆ. ಸೆನ್ಸರ್ ಗಳ ನಡುವಿನ ಅಂತರವು ಬದಲಾದಂತೆ, ಎಲೆಕ್ಟ್ರಾನಿಕ್ ಸ್ಕೈಹೂಕ್ ಸಸ್ಪೆಂಕ್ಷನ್ ಅಗತ್ಯವಿರುವ ಡ್ಯಾಂಪಿಂಗ್ ಹೊಂದಾಣಿಕೆಯ ಪ್ರಮಾಣವನ್ನು ಲೆಕ್ಕಾಚಾರ ಮಾಡುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಕವಾಸಕಿ ತನ್ನ ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಮಿಡ್ ವೈಟ್ ಬೈಕ್ ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಆದರೆ ಇದರ ಬೆಲೆಗಳನ್ನು ಪರಿಗಣಿಸಿ ಹೆಚ್ಚಿನ ಪ್ರೀಮಿಯಂನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಕವಾಸಕಿ ಝಡ್650ಆರ್‌ಎಸ್ ಬೈಕ್ ಇದರ ಹಿರಿಯ ಸಹೋದರ ಮಾದರಿಯಾದ ಝಡ್900ಆರ್‌ಎಸ್ ನಿಂದ ವಿನ್ಯಾಸ ಸ್ಫೂರ್ತಿ ಪಡೆಯುತ್ತದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಒಳಗೊಂಡಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಸುತ್ತುವರಿದ ಸುತ್ತಿನ ಆಕಾರದ ಹೆಡ್‌ಲ್ಯಾಂಪ್, ವೃತ್ತಾಕಾರದ ರೇರ್ ಮೀರರ್ಸ್, ಫ್ಲಾಟ್ ಸೀಟ್ ಫಿನಿಶ್, ಅಂಡರ್‌ಬೆಲ್ಲಿ ಎಕ್ಸಾಸ್ಟ್ ಸಿಸ್ಟಂ, ಸ್ಪ್ಲಿಟ್-ಸ್ಪೋಕ್ ವೀಲ್ಸ್, ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದಲ್ಲಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಈ ಹೊಸ ಮಿಡಲ್ ವೈಟ್ ಬೈಕ್ ಟಿಯರ್ ಆಕಾರದ ಫ್ಯೂಯಲ್ ಟ್ಯಾಂಕ್, ಸುತ್ತಲೂ ಎಲ್ ಇಡಿ ಲೈಟಿಂಗ್ ಸಿಸ್ಟಂ ಇತ್ಯಾದಿಗಳನ್ನು ಹೊಂದಿದೆ. ಯುರೋಪಿನ ಮಾರುಕಟ್ಟೆಗಳಲ್ಲಿ ಕವಾಸಕಿ ಝಡ್650ಆರ್‌ಎಸ್ ಕ್ಯಾಂಡಿ ಎಮರಾಲ್ಡ್ ಗ್ರೀನ್, ಮೆಟಾಲಿಕ್ ಮೂಂಡಸ್ಟ್ ಗ್ರೇ/ಎಬೊನಿ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ವಿಂಟೇಜ್ ಮಾದರಿಗಳನ್ನು ಕ್ಯಾಂಡಿ ಎಮರಾಲ್ಡ್ ಗ್ರೀನ್ ಬಣ್ಣವು ಗೋಲ್ಡನ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇತರ ಎರಡು ಪೇಂಟ್ ಸ್ಕೀಮ್‌ಗಳಲ್ಲಿ, ಬ್ಲ್ಯಾಕ್ ಬಣ್ಣದ ಚಕ್ರಗಳನ್ನು ನೀಡಲಾಗಿದೆ ಮತ್ತು ಬಾಡಿ ಗ್ರಾಫಿಕ್ಸ್ ಕೂಡ ಪ್ರತಿ ಬಣ್ಣದ ಆಯ್ಕೆಯಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Kawasaki Versys 1000 ಬೈಕ್

ಸ್ಟ್ಯಾಂಡರ್ಡ್ ವರ್ಸಿಸ್ 1000 ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಮತ್ತು ರೈಡಿಂಗ್ ಮೋಡ್‌ಗಳು ಮತ್ತು TFT ಇನ್ಸ್ ಟ್ರೂಮೆಂತ್ ಕ್ಲಸ್ಟರ್ ಕಳೆದುಕೊಳ್ಳುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಈ 2022ರ ಕವಾಸಕಿ ವರ್ಸಿಸ್ 1000 ಬೈಕ್ ಯುರೋಪಿನ ಇತರ ಭಾಗಗಳಲ್ಲಿ ಲಭ್ಯವಿರುತ್ತದೆ. . ಭಾರತದಲ್ಲಿ ವರ್ಸಿಸ್ 1000 ಹೊಸ ಬೇಸ್ ಮಾಡೆಲ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಲಭ್ಯವಾಗಬಹುದು.

Most Read Articles

Kannada
English summary
Kawasaki introduced new versys 1000 with base variant details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X