ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ನಿಂಜಾ 1000ಎಸ್‌ಎಕ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.11.40 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಎಮರಾಲ್ಡ್ ಬ್ಲೇಜ್ಡ್ ಗ್ರೀನ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರಾಫೆನೆಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕವಾಸಕಿ ಕಂಪನಿಯು ತನ್ನ ಹೊಸ ನಿಂಜಾ 1000ಎಸ್‌ಎಕ್ಸ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇದರ ವಿತರಣೆಯು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಬದಲಾವಣೆಗಳು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಕಾಸ್ಮೆಟಿಕ್ ನವೀಕರಣಗಳಿಗೆ ಸೀಮಿತವಾಗಿವೆ. ಯಾಂತ್ರಿಕ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಪಟ್ಟಿಯು ಬದಲಾಗದೆ ಉಳಿದಿದೆ. ಹೀಗಾಗಿ, 2022ರ ನಿಂಜಾ 1000ಎಸ್‌ಎಕ್ಸ್ ಎಲ್ಇಡಿ ಲೈಟಿಂಗ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 4.3 TFT ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಮುಂದುವರೆಸಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಈ ಹೊಸ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಎಬಿಎಸ್, ಕ್ರೂಸ್ ಕಂಟ್ರೋಲ್, ರೈಡಿಂಗ್ ಮೋಡ್‌ಗಳು (ಸ್ಪೋರ್ಟ್/ ರೋಡ್/ ರೈನ್/ ರೈಡರ್), ಮೂರು-ಹಂತದ ಟ್ರ್ಯಾಕ್ಷನ್ ಕಂಟ್ರೋಲ್, ಪವರ್ ಮೋಡ್‌ಗಳು, ಕ್ವಿಕ್-ಶಿಫ್ಟರ್ ಮತ್ತು ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಅನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಇನ್ನು ಕವಾಸಕಿ ನಿಂಜಾ 1000ಎಸ್‌ಎಕ್ಸ್ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಪ್ರೀಮಿಯಂ ಸ್ಪೋರ್ಟ್-ಟೂರರ್ ಕೊಡುಗೆಯಾಗಿದೆ. ನವೀಕರಿಸಿದ 2022ರ ನಿಂಜಾ 1000 ಎಸ್‌ಎಕ್ಸ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕಿನ ರೈಡರ್ ಮತ್ತು ಪಿಲಿಯನ್ ಎರಡಕ್ಕೂ ನವೀಕರಿಸಿದ ಎರ್ಗಾನೊಮಿಕ್ಸ್ ಒಳಗೊಂಡಿದೆ. ರೈಡರ್ ಮತ್ತು ಪಿಲಿಯನ್ ಸೀಟುಗಳು ದಪ್ಪವಿದೆ. ರೈಡರ್ ಸೀಟನ್ನು ಅಗಲವಾಗಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕಿನಲ್ಲಿ 1,043 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‍ಪಿಎಂನಲ್ಲಿ 140 ಬಿಹೆಚ್‍ಪಿ ಪವರ್ ಮತ್ತು 8,000 ಆರ್‍ಪಿಎಂನಲ್ಲಿ 111 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

2022ರ ನಿಂಜಾ 1000ಎಸ್‌ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗಾದಲ್ಲಿ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟ್ವಿನ್ ಡಿಸ್ಕ್‌ಗಳು ಮತ್ತು ಹಿಂಭಾಗದಲ್ಲಿ ಒಂದೇ ರೋಟರ್ ಅನ್ನು ಉಳಿಸಿಕೊಂಡಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಇನ್ನು ಕವಾಸಕಿ ಕಂಪನಿಯು ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಳಿಸಿತ್ತು. ಹೊಸ ಕವಾಸಕಿ ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,6.65 ಲಕ್ಷಗಳಾಗಿದೆ, ಈ ರೆಟ್ರೊ-ಥೀಮ್ ಬೈಕಿನ ವಿತರಣೆಯನ್ನು ಮುಂದಿನ ತಿಂಗಳ ಅಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಪ್ರಾರಂಭಿಸಬಹುದು.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಈ ಹೊಸ ಬೈಕ್ ಇದರ ಹಿರಿಯ ಸಹೋದರ ಮಾದರಿ ಝಡ್900ಆರ್‌ಎಸ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆಯುತ್ತದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನ್ಇಟ್ ಅನ್ನು ಹೊಂದಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನಿಟ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಇದರೊಂದಿಗೆ ಈ ರೆಟ್ರೊ-ಶೈಲಿಯ ಬೈಕಿನ ಇತರ ಮುಖ್ಯಾಂಶಗಳು ವೃತ್ತಾಕಾರದ ಹಿಂಬದಿಯ ಮೀರರ್ಸ್, ಸ್ಪೋಕ್ಡ್ ವ್ಹೀಲ್ ಗಳು, ಚದರ-ಆಕಾರದ ಇಂಧನ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಸಿಸ್ಟಮ್ ಮತ್ತು ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್.ಅನು ಒಳಗೊಂಡಿದೆ.ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮೂಂಡಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾಸಕಿ ಝಡ್650ಆರ್‌ಎಸ್ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಇತರ ಮುಖ್ಯಾಂಶಗಳು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾದ ಹ್ಯಾಂಡಲ್‌ಬಾರ್ ಪೊಸಿಶನಿಂಗ್ ಮತ್ತು ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್‌ಗಳು ಇತ್ಯಾದಿಗಳನ್ನು ಒಳಗೊಂಡಿದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕಿನಲ್ಲಿ ಅದೇ 649 ಸಿಸಿ ಪ್ಯಾರಲಲ್ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,700 ಆರ್‌ಪಿಎಮ್‌ನಲ್ಲಿ 67.3 ಬಿಹೆಚ್‌ಪಿ ಮತ್ತು 8,000 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ Kawasaki Ninja 1000SX ಬೈಕ್ ಬಿಡುಗಡೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್-ಟೂರರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಕವಾಸಕಿ ಕಂಪನಿಯು ಈ ನಿಂಜಾ 1000ಎಸ್‌ಎಕ್ಸ್ ಬೈಕ್ ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಸ್ಪೋರ್ಟ್-ಟೂರರ್ ಬೈಕ್ ಪ್ರಿಯರನ್ನು ಸೆಳಯಬಹುದು.

Most Read Articles

Kannada
English summary
Kawasaki launched 2022 ninja 1000sx bike in india price details
Story first published: Friday, November 26, 2021, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X