ಭಾರತದಲ್ಲಿ ಹೊಸ ಕವಾಸಕಿ ನಿಂಜಾ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಐಷಾರಾಮಿ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕವಾಸಕಿ ತನ್ನ ಹೊಸ ನಿಂಜಾ ಹೆಚ್2ಆರ್ ಬೈಕ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಈ ಹೊಸ ಕವಾಸಕಿ ನಿಂಜಾ ಹೆಚ್2ಆರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.79.90 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಹೊಸ ಕವಾಸಕಿ ನಿಂಜಾ ಹೆಚ್2ಆರ್ ಮಾದರಿಯು ಟ್ರ್ಯಾಕ್-ಓನ್ಲಿ ಬೈಕ್ ಆಗಿದೆ. ಈ ಬೈಕ್ ಕಳೆದ ವರ್ಷದ ಮಾದರಿಯಂತೆಯೇ ಬಾಹ್ಯ ಸ್ಟೈಲಿಂಗ್ ಅನ್ನು ಮುಂದಕ್ಕೆ ಸಾಗಿಸಿದೆ. ಇದು ಏರೋಡೈನಾಮಿಕ್ ವಿಂಗ್ಲೆಟ್‌ಗಳು, ರೈಡರ್-ಓನ್ಲಿ ಸೆಡ್ಲ್ ಮತ್ತು ಸಿಂಗಲ್ ಸೈಡ್ ಸ್ವಿಂಗಾರ್ಮ್‌ನಂತಹ ವೈಶಿಷ್ಟ್ಯಗಳನ್ನು ಮುಂದುವರಿಸಿದೆ. ಈ ಹೊಸ ಕವಾಸಕಿ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಹೊಸ ಕವಾಸಕಿ ಹೆಚ್2ಆರ್ ಬೈಕ್ ಮಿರರ್ ಕೋಟೆಡ್ ಮ್ಯಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ 998 ಸಿಸಿ, ಇನ್ಲೈನ್ ನಾಲ್ಕು-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಈ ಎಂಜಿನ್ 14,000 ಆರ್‌ಪಿಎಂನಲ್ಲಿ 305.7 ಬಿಹೆಚ್‍ಪಿ ಪವರ್ ಮತ್ತು 12,500 ಆರ್‌ಪಿಎಂನಲ್ಲಿ 165 ಎನ್ಎಂ ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಬೈಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗುತ್ತಿದೆ.

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಈ ಕವಾಸಕಿ ಹೆಚ್2ಆರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಗ್ಯಾಸ್-ಚಾರ್ಜ್ಡ್ ರಿಯರ್ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಇನ್ನು ಪ್ರಮುಖವಾಗಿ ಸುರಕ್ಷಾತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ರೋಟರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಇನ್ನು ಅದರ ಕಾರ್ಯಕ್ಷಮತೆಯ ಕಿಟ್‌ನ ಭಾಗವಾಗಿ ಓಹ್ಲಿನ್ಸ್ ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್ ಅನ್ನು ಸಹ ಪಡೆಯುತ್ತದೆ. ಈ ಹೊಸ ಕವಾಸಕಿ ಹೆಚ್2ಆರ್ ಬೈಕ್ 216 ಕೆಜಿ ತೂಕವನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಇದರೊಂದಿಗೆ ಕವಾಸಕಿ ತನ್ನ ಝಡ್‌ಎಕ್ಸ್ -4ಆರ್ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಕವಾಸಕಿ ಝಡ್‌ಎಕ್ಸ್-25ಆರ್ ಬೈಕನ್ನು ಆಧರಿಸಿ ಹೊಸ ಝಡ್‌ಎಕ್ಸ್ -4ಆರ್ ಬೈಕನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಈ ಹೊಸ ಕವಾಸಕಿ ಝಡ್‌ಎಕ್ಸ್ -4ಆರ್ ಬೈಕ್ ಬಿಡುಗಡೆಯಾದರೆ ಇನ್ನೊಂದು ಗೇಮ್ ಚೇಂಜರ್ ಮಾದರಿಯಾಗಿ ಹೊರಹೊಮ್ಮಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಹೊಸ ಕವಾಸಕಿ ಹೆಚ್2ಆರ್ ಬೈಕ್ ಬಿಡುಗಡೆ: ಬೆಲೆ ರೂ.79.90 ಲಕ್ಷ

ಹೊಸ ಕವಾಸಕಿ ಹೆಚ್2ಆರ್ ಬೈಕ್ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್‌ನೊಂದಿಗೆ ಬಾಷ್ ಐಎಂಯು ಯುನಿಟ್ ಸೇರಿದಂತೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ತಂತ್ರಜ್ಙಾನಗಳನ್ನು ಹೊಂದಿವೆ. ಇನ್ನು ಈ ಕವಾಸಕಿ ಹೆಚ್2ಆರ್ ಬೈಕಿಗೆ ಭಾರತೀಯ ಮಾರುಕಟ್ಟೆಲ್ಲಿ ನೇರ ಪೈಪೋಟಿ ನೀಡುವ ಮಾದರಿಗಳಿಲ್ಲ.

Most Read Articles

Kannada
English summary
2021 Kawasaki Ninja H2R Launched. Read In Kannada.
Story first published: Saturday, June 5, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X