2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಐಷಾರಾಮಿ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕವಾಸಕಿ ತನ್ನ ಹೊಸ ನಿಂಜಾ 300 ಬೈಕ್ ಮಾದರಿಯ 2021ರ ಆವೃತ್ತಿಯನ್ನು ಕಳೆದ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಇದೀಗ ಹೊಸ ಬೈಕ್ ವಿತರಣೆ ಚಾಲನೆ ನೀಡಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಭಾರತದಲ್ಲಿ ಬಿಎಸ್-6 ಎಮಿಷನ್ ಜಾರಿಗೂ ಮುನ್ನ ನಿಂಜಾ 300 ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದ ಕವಾಸಕಿ ಕಂಪನಿಯು ಇದೀಗ ಹೊಸ ತಂತ್ರಜ್ಞಾನ ಪ್ರೇರಿತ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ನವೀಕೃತ ಮಾಲಿನ್ಯ ನಿಯಮಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್ ಶೋರೂಂ ಪ್ರಕಾರ ರೂ.3.18 ಲಕ್ಷ ಬೆಲೆ ಹೊಂದಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಬಿಎಸ್-4 ಮಾದರಿಗೆ ಹೋಲಿಕೆ ಮಾಡಿದರೆ ಬಿಎಸ್-6 ಮಾದರಿಯ ಬೆಲೆಯು ರೂ.20 ಸಾವಿರ ಹೆಚ್ಚಳವಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಕವಾಸಕಿ ಡೀಲರ್ಸ್‌ಗಳಲ್ಲಿ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ನಿಂಜಾ 300 ಬೈಕ್ ವಿತರಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ನಿಂಜಾ 300 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿನ ಕವಾಸಕಿ ನಿರ್ಮಾಣದ ಅತ್ಯುತ್ತಮ ಬೈಕ್ ಮಾದರಿಯಾಗಿದ್ದು, ಬಿಎಸ್-4 ಮಾದರಿಯಲ್ಲಿದ್ದ ಎಂಜಿನ್ ಮಾದರಿಯನ್ನು ಬಿಎಸ್-6 ಮಾದರಿಯಲ್ಲಿ ಉನ್ನತೀಕರಿಸಲಾಗಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಬಿಎಸ್-6 ಮಾದರಿಯಲ್ಲಿ ಹೊಸ ಎಂಜಿನ್ ಆಯ್ಕೆಯ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ತುಸು ನಿರಾಶೆಯಾದರೂ ಈ ಹಿಂದಿನ ಎಂಜಿನ್ ಮಾದರಿಯೇ ಹೊಸ ಎಮಿಷನ್ ನಿಯಮಗಳೊಂದಿಗೆ ಉನ್ನತೀಕರಣಗೊಂಡಿದ್ದು, ಹೊಸ 296ಸಿಸಿ ಪ್ಯಾರೆಲೆಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಮಾದರಿಯು 38.4 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಟಾರ್ಕ್ ಅಭಿವೃದ್ಧಿಪಡಿಸುತ್ತದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಹೊಸ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಹೊಸ ಬೈಕಿನಲ್ಲಿ ಕಂಪನಿಯು ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಹೊಸ ಕವಾಸಕಿ ನಿಂಜಾ 300 ಬೈಕ್‌ನಲ್ಲಿ ಸಸ್ಷೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬೈಕಿನಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ ಮುಂಭಾಗದಲ್ಲಿ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಆದರೆ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದ್ದು, ನಿಂಜಾ 300 ಮಾದರಿಯ ಮುಂಭಾಗದಲ್ಲಿ 290 ಎಂಎಂ ಪೆಡಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 220 ಎಂಎಂ ಪೆಡಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

ಇದರೊಂದಿಗೆ ಹೊಸ ಬೈಕ್‌ನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡಾ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಈ ಹಿಂದಿನಂತೆ ಮುಂದುವರಿಸಲಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2021ರ ನಿಂಜಾ 300 ಬೈಕ್ ವಿತರಣೆಯನ್ನು ಆರಂಭಿಸಿದ ಕವಾಸಕಿ ಇಂಡಿಯಾ

2021ರ ಕವಾಸಕಿ ನಿಂಜಾ 300 ಬೈಕ್ ಮಾದರಿಯು ಸ್ಟ್ಯಾಂಡರ್ಡ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಎಂಬ ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್​ಆರ್310 ಮತ್ತು ಕೆಟಿಎಂ ಆರ್‍‍ಸಿ 390 ಬೈಕ್ ಗಳಿಗೆ ಉತ್ತಮ ಪೈಪೋಟಿ ನೀಡುತ್ತದೆ.

Most Read Articles

Kannada
English summary
Kawasaki Ninja 300 BS6 Deliveries Start In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X