400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ತನ್ನ ಝಡ್‌ಎಕ್ಸ್ -4ಆರ್ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಕವಾಸಕಿ ಝಡ್‌ಎಕ್ಸ್-25ಆರ್ ಬೈಕನ್ನು ಆಧರಿಸಿ ಹೊಸ ಝಡ್‌ಎಕ್ಸ್ -4ಆರ್ ಬೈಕನ್ನು ಅಭಿವೃದ್ದಿ ಪಡಿಸಲಾಗುತ್ತಿದೆ.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

80ರ ದಶಕದಲ್ಲಿ ಜಪಾನ್ ಮೂಲದ ಯಮಹಾ, ಸುಜುಕಿ, ಹೋಂಡಾ, ಮತ್ತು ಕವಾಸಕಿ ಕಂಪನಿಗಳು 250ಸಿಸಿ ವಿಭಾಗದಲ್ಲಿ ಪಾರುಪತ್ಯವನ್ನು ಸಾಧಿಸುತ್ತಿದ್ದರು. ಈ ನಾಲ್ಕು ದ್ವಿಚಕ್ರ ವಾಹನ ತಯಾರಕರು ಅದ್ಭುತವಾದ 250 ಸಿಸಿ ಬೈಕ್ ಗಳನ್ನು ಹೊಂದಿದ್ದರು, ಅದು ಮಾರ್ಕ್ ಲೀಟರ್-ಕ್ಲಾಸ್ ಬೈಕ್ ಗಳಾಗಿತ್ತು. ಹೆಚ್ಚಿನ ರೆವ್‌ಗಳ ಪರಿಣಾಮವಾಗಿ 250 ಸಿಸಿ ಬೈಕ್ ಗಳು ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತಿತ್ತು.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಇಂದಿನ 250 ಸಿಸಿ ಸಿಂಗಲ್-ಸಿಲಿಂಡರ್ ಮತ್ತು ಟ್ವಿನ್-ಸಿಲಿಂಡರ್ ಬೈಕ್ ಗಳನ್ನು ಈ ಹಿಂದಿನ ಐಕಾನಿಕ್ ಬೈಕ್‌ಗಳಿಗೆ ಹೋಲಿಸಿದರೆ ಪವರ್ ಉತ್ಪಾದನೆಯ ದೃಷ್ಟಿಯಿಂದ ಹಿಂದುಳಿದಿವೆ.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಕಾಲ ಕಳೆದಂತೆ ಕಠಿಣವಾದ ಮಾಲಿನ್ಯ ಮಾನದಂಡಗಳು ಕಾರ್ಯರೂಪಕ್ಕೆ ಬಂದವು ಮತ್ತು ತಯಾರಕರು ಸಿಂಗಲ್-ಸಿಲಿಂಡರ್ ಎಂಜಿನ್ ಮತ್ತು ಪ್ಯಾರಲಲ್-ಟ್ವಿನ್ ಎಂಜಿನ್‌ಗಳಿಗಾಗಿ ಹಲವಾರು ನಿಯಮಗಳು ಜಾರಿಗೆ ಬಂತು.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

2020ರಲ್ಲಿ ಹೋಂಡಾ ಮತ್ತು ಯಮಹಾ 250 ಸಿಸಿ ಇನ್-ಲೈನ್-ನಾಲ್ಕು ಎಂಜಿನ್ ಹೊಂದಿರುವ ಬೈಕ್ ಗಳನ್ನು ತಯಾರಿಸಲಿವೆ ಎಂದು ವರದಿಗಳಾಗಿತ್ತು. ಕವಾಸಕಿ ಒಂದು ಹೆಜ್ಜೆ ಮುಂದೆ ಹೋಗಿ ನಿಂಜಾ ಝಡ್‌ಎಕ್ಸ್-25ಆರ್ ಬೈಕನ್ನು ಬಿಡುಗಡೆಗೊಳಿಸಿದರು.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ನಿಂಜಾ ಝಡ್‌ಎಕ್ಸ್-25ಆರ್ ಗೇಮ್ ಚೇಂಜರ್ ಮಾದರಿಯಾಗಿ ಬದಲಾಯಿತ್ತು. ಗ್ರಾಹಕರನ್ನು ಆಕರ್ಷಿಸುವಲ್ಲಿ ಈ ಬೈಕ್ ಯಶಸ್ವಿಯಾಯ್ತು. ಇದು ಉನ್ನತ-ಶೆಲ್ಫ್ ಯುನಿಟ್ ಗಳು ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಅನ್ನು ಒಳಗೊಂಡಿದೆ.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಈ ಬೈಕಿನಲ್ಲಿ 249.8ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 15,500 ಆರ್‌ಪಿಎಂನಲ್ಲಿ 51 ಬಿಹೆಚ್ಪಿ ಮತ್ತು 14,500 ಆರ್‌ಪಿಎಂನಲ್ಲಿ 22.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಕವಾಸಕಿ ನಿಂಜಾ ಝಡ್‌ಎಕ್ಸ್-25ಆರ್ ಬೈಕ್ ಉತ್ತಮ ಯಶಸ್ವಿಯನ್ನು ಕಂಡ ಬಳಿಕ ಇದೀಗ ಕವಾಸಕಿ ಮತ್ತೊಂದು ಇದೇ ಮಾದರಿಯ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಇದನ್ನು ಝಡ್‌ಎಕ್ಸ್ -4ಆರ್ ಎಂದು ಕರೆಯಲಾಗುತ್ತದೆ.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

ಇದು ಹೊಸದಲ್ಲ 1989 ಮತ್ತು 2003ರ ನಡುವೆ ನಡುವೆ ಝಡ್‌ಎಕ್ಸ್ -4ಆರ್ ಹೆಸರಿನ ಉನ್ನತ-ಕಾರ್ಯಕ್ಷಮತೆಯ ಬೈಕ್ ಗಳನ್ನು ಕವಾಸಕಿ ಪರಿಚಯಿಸಿದೆ. ಹೊಸ ಕವಾಸಕಿ ಝಡ್‌ಎಕ್ಸ್-25ಆರ್ ಬೈಕ್ 80 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಿಂದೆ ಮಾರಾಟದಲ್ಲಿದ್ದ ವಾಸಕಿ ಝಡ್‌ಎಕ್ಸ್-25ಆರ್ ಬೈಕ್ 64.1 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುಲಾಗುತ್ತಿತ್ತು.

400ಸಿಸಿ, 4-ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಸೂಪರ್‌ಸ್ಪೋರ್ಟ್ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ ಕವಾಸಕಿ!

400 ಸಿಸಿ ಇನ್‌ಲೈನ್-ನಾಲ್ಕು ಎಂಜಿನ್‌ ಹೊಂದಿರುವ ಬೈಕ್ ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗುತ್ತಿದಂತೆ ಕವಾಸಕಿ ಸೂಪರ್‌ಸ್ಪೋರ್ಟ್ ಬೈಕ್ ಗಳ ಅಭಿಮಾನಿಗಳ ಕುತೂಹಲದಿಂದ ಕಾಯ್ತುತ್ತಿದ್ದಾರೆ. ಈ ಹೊಸ ಕವಾಸಕಿ ಝಡ್‌ಎಕ್ಸ್ -4ಆರ್ ಬೈಕ್ ಬಿಡುಗಡೆಯಾದರೆ ಇನ್ನೊಂದು ಗೇಮ್ ಚೇಂಜರ್ ಮಾದರಿಯಾಗಿ ಹೊರಹೊಮ್ಮಬಹುದು ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Kawasaki ZX-4R Being Developed Reports. Read In Kannada.
Story first published: Saturday, May 22, 2021, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X