ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಕವಾಸಕಿ ತನ್ನ ಆಯ್ದಾ ಮಾದರಿಗಳ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಕವಾಸಕಿ ತನ್ನ ವರ್ಸಿಸ್ 650, ವಲ್ಕನ್ ಎಸ್, ನಿಂಜಾ 1000 ಎಸ್‌ಎಕ್ಸ್, ಡಬ್ಲ್ಯ 800, ಕೆಎಲ್‌ಎಕ್ಸ್110, ಕೆಎಲ್‌ಎಕ್ಸ್140 ಮತ್ತು ಕೆಎಕ್ಸ್100 ಬೈಕುಗಳ ರಿಯಾಯಿತಿಯನ್ನು ನೀಡಲಾಗಿದೆ. ಕಂಪನಿಯು ಈ ಎಲ್ಲಾ ಮಾದರಿಗಳ ಮೇಲೆ ರಿಯಾಯಿತಿ ವೂಚರ್ ಅನ್ನು ನೀಡುತ್ತಿದೆ. ಇದು ಬೈಕಿನ ಖರೀದಿ ವೆಚ್ಚವನ್ನು ಕಡಿಮೆ ಮಾಡಲು ಬಳಸಬಹುದು. ಈ ತಿಂಗಳ ಅಂತ್ಯದವರೆಗೂ ಈ ಆಫರ್ ಲಭ್ಯವಿರುತ್ತದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಕವಾಸಕಿ ವಲ್ಕನ್ ಎಸ್ ಬೈಕಿನ ಮೇಲೆ ರೂ.20,000 ಮೌಲ್ಯದ ವೂಚರ್ ಅನ್ನು ನೀಡಲಾಗುತ್ತದೆ. ಇದು ಕವಾಸಕಿ ವಲ್ಕನ್ ಎಸ್ ಬೈಕನ್ನು ಖರೀದಿಸುವಾಗ ವೆಚ್ಚವನ್ನು ಕಡಿಮೆ ಮಾಡಲು ಬಳಸಬಹುದು. ಈ ಬೈಕನ್ನು ಖರೀದಿಸಲು ಬಯಸುವರಿಗೆ ಉತ್ತಮ ಅವಕಾಶವಾಗಿದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಕವಾಸಕಿ ವರ್ಸಿಸ್ 650, ನಿಂಜಾ 1000 ಎಸ್‌ಎಕ್ಸ್ ಮತ್ತು ಡಬ್ಲ್ಯು 800 ಬೈಕ್‌ಗಳ ಮೇಲೆ ರೂ.30,000 ಮೌಲ್ಯದ ರಿಯಾಯಿತಿ ವೂಚರ್ ಅನ್ನು ನೀಡಲಾಗುತ್ತದೆ. ಇದು ಕೂಡ ಈ ಬೈಕ್‌ಗಳಲ್ಲಿ ಯಾವುದಾದರೂ ಒಂದು ಮಾದರಿಯನ್ನು ಖರೀದಿಸುವಾಗ ವೆಚ್ಚವನ್ನು ಕಡಿಮೆ ಮಾಡಲು ಬಳಸಬಹುದು.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್‌110 ಬೈಕಿನ ಮೇಲೆ ರೂ.30,000 ರಿಯಾಯಿತಿ ವೂಚರ್ ಅನ್ನು ನೀಡಿದರೆ, ಕೆಎಲ್‌ಎಕ್ಸ್‌140 ಬೈಕಿನ ಮೇಲೆ ರೂ.40,000 ಮತ್ತು ಕೆಎಕ್ಸ್100 ಬೈಕಿನ ಮೇಲೆ ರೂ.50,000 ಗಳವರೆಗೆ ರಿಯಾಯಿತಿ ವೂಚರ್ ಅನ್ನು ನೀಡಲಾಗುತ್ತಿದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಈ ರಿಯಾಯಿತಿಗಳು ದೇಶದಾದ್ಯಂತವಿರುವ ಎಲ್ಲಾ ಕವಾಸಕಿ ಡೀಲರುಗಳ ಬಳಿ ಲಭ್ಯವಿರುತ್ತದೆ. ಆದರೆ ಕವಾಸಕಿ ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಮಾದರಿಗಳನ್ನು ಸರ್ವಾಜನಿಕ ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ. ಇದು ಕೇವಲ ಟ್ರ್ಯಾಕ್ ನಲ್ಲಿ ಮತ್ತು ಆಫ್-ರೋಡ್ ಪ್ರದೇಶಗಳಲ್ಲಿ ಓಡಿಸುವ ಬೈಕುಗಳಾಗಿವೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇದರಲ್ಲಿ ಕೆಎಲ್‌ಎಕ್ಸ್‌110 ಬೈಕಿನಲ್ಲಿ 112 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.0 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇದು ಅತ್ಯಂತ ಕಡಿಮೆ ತೂಕದ ತೂಕವನ್ನು ಹೊಂದಿದೆ. ಈ ಕೆಎಲ್‌ಎಕ್ಸ್‌110 ಬೈಕ್ ಕೇವಲ 76 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ನಿಭಾಯಿಸಲು ಹೆಚ್ಚು ಸುಲಭಗೊಳಿಸುತ್ತದೆ.

ಹೊಸ ಕವಾಸಕಿ ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಕೆಎಲ್‌ಎಕ್ಸ್‌140 ಬೈಕಿನಲ್ಲಿ 144 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Most Read Articles

Kannada
English summary
Kawasaki Bikes Offers For June 2021. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X