ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಆಯ್ಕೆಗಳು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಿಡುಗಡೆಯಾಗಲಿದೆ. ಆದರೆ ಇದರ ನಡುವೆ ದೆಹಲಿ ಮೂಲದ ಇವಿ ಸ್ಟಾರ್ಟ್ ಅಪ್ ಕೊಮಾಕಿ ಕಂಪನಿಯು ಅಂಗವಿಕಲರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಂದು ಕರೆಯಲ್ಪಡುವ ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ವಿಆರ್‌ಎಲ್‌ಎ ಜೆಲ್ ಬ್ಯಾಟರಿ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಇದರ ಬೆಲೆಗಳ ಬಗ್ಗೆ ಹೇಳುವುದಾದರೆ, ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ವಿಆರ್‌ಎಲ್‌ಎ ಜೆಲ್ ಬ್ಯಾಟರಿ ರೂಪಾಂತರದ ಬೆಲೆಯು ರೂ.72,500ಗಳಾದರೆ, ಲಿಥಿಯಂ-ಐಯಾನ್ ಬ್ಯಾಟರಿ ರೂಪಾಂತರದ ಬೆಲೆಯು ರೂ.90,500 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ಒಟ್ಟು ಮೂರು ಚಕ್ರಗಳನ್ನು ಒಳಗೊಂಡಿದೆ. ಈ ಸ್ಕೂಟರ್ ಮುಂಭಾಗದಲ್ಲಿ ಒಂದು ಮತ್ತು ಹಿಂಭಾಗದಲ್ಲಿ ಎರಡು ಚಕ್ರಗಳನ್ನು ಹೊಂದಿದೆ. ಇದರಿಂದ ವೃದ್ಧರು ಮತ್ತು ಅಂಗವಿಕಲಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸುಲಭವಾಗಿ ಚಲಾಯಿಸಬಹುದು.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಈ ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಲಿಸ್ಕೋಪಿಕ್ ಫೋರ್ಕ್‌ ಹೊಂದಿದ್ದರೆ, ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಒಳಗೊಂಡಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಈ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಲಿಥಿಯಂ-ಐಯಾನ್ ಅಥವಾ ವಿಆರ್‌ಎಲ್‌ಎ ಜೆಲ್ ಬ್ಯಾಟರಿಗೆ ಜೋಡಿಸಲಾದ 60ವಿ/72 ವಿ ಎಲೆಕ್ಟ್ರಿಕ್ ಮೋಟಾರ್‌ ಅನ್ನು ಜೋಡಿಸಲಾಗಿದೆ. ಇದು 20 ರಿಂದ 30 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಲಿಥಿಯಂ-ಐಯಾನ್ ರೂಪಾಂತರವು ಚಾರ್ಜ್ ಮಾಡಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಆದರೆ ಜೆಲ್ ಬ್ಯಾಟರಿಯ ಮಾದರಿಯು 6-8 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಸ್ಕೂಟರ್ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಹೆಚ್ಚುವರಿಯಾಗಿ ಈ ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವರ್ಸ್ ಪಾರ್ಕ್ ಫಂಕ್ಷನ್, ಮೆಕ್ಯಾನಿಕಲ್ ಪಾರ್ಕಿಂಗ್ ಬ್ರೇಕ್, ರಿಜೆನೆರೇಟಿವ್ ಬ್ರೇಕಿಂಗ್ ಮತ್ತು ರಿಪೇರಿ ಸ್ವಿಚ್ ಅನ್ನು ಪಡೆಯುತ್ತದೆ, ಇತರ ಗಮನಾರ್ಹ ವೈಶಿಷ್ಟ್ಯಗಳಲ್ಲಿ ರಿಮೋಟ್ ಕೀ ಆಂಟಿ-ಥೆಫ್ಟ್ ಲಾಕ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್ ಸೇರಿವೆ. ಇದರ ಫೀಚರ್ಸ್ ಗಳು ಬಹು ಪ್ರಯೋಜನಕಾರಿಯಾಗಿದೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಎರಡು ಎಲೆಕ್ಟ್ರಿಕ್ ಸ್ಕೂಟರ್ ರೂಪಾಂತರಗಳು 80-90 ಕಿಲೋಮೀಟರ್ ವ್ಯಾಪ್ತಿಯ ಹಕ್ಕುಗಳನ್ನು ನೀಡುತ್ತವೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳು ಮುಕ್ತವಾಗಿವೆ ಮತ್ತು ತಯಾರಕರು ಈಗಾಗಲೇ ಇ-ಸ್ಕೂಟರ್‌ನ 1,000 ಯೂನಿಟ್‌ಗಳನ್ನು ವೃದ್ಧರು ಮತ್ತು ಅಂಗವಿಕಲರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಕೊಮಾಕಿ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರಗಳು ಕೂಡ 80 ರಿಂದ 90 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಖರೀದುಸಲು ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ವೃದ್ಧರು, ಅಂಗವಿಕಲರಿಗಾಗಿ ಭಾರತದಲ್ಲಿ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಕೊಮಾಕಿ

ಕೊಮಾಕಿ ಕಂಪನಿಯು ವಿಶೇಷ ಎಕ್ಸ್‌ಜಿಟಿ-ಎಕ್ಸ್5 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 1,000 ಯೂನಿಟ್‌ಗಳನ್ನು ವೃದ್ಧರು ಮತ್ತು ಅಂಗವಿಕಲರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ ಈ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್. ಇದರಿಂದ ವೃದ್ಧರು ಮತ್ತು ಅಂಗವಿಕಲರು ಈ ಎಲೆಕ್ಟ್ರಿಕ್ ಸ್ಕೂಟರ್ ಸುಲಭವಾಗಿ ಬಳಸಬಹುದು.

Most Read Articles

Kannada
Read more on ಕೊಮಾಕಿ komaki
English summary
Komaki launched electric scooter for the elderly and differently abled in india details
Story first published: Thursday, August 5, 2021, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X