ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೋಮಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವಲ್ಲಿ ನಿರತವಾಗಿದೆ.

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕೋಮಕಿ ಡಿಎನ್ 95, ಕೋಮಕಿ ಎಸ್ಇ ಹಾಗೂ ಕೋಮಕಿ ಎಂ 5 ಸೇರಿದಂತೆ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿದೆ. ಈಗ ಕಂಪನಿಯು ಎಕ್ಸ್‌ಜಿಟಿ ಕ್ಯಾಟ್ 2.0 ಎಂಬ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ.

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಈ ವಾಹನವು ಕಮರ್ಷಿಯಲ್ ಸೆಗ್'ಮೆಂಟಿಗೆ ಸೇರಿದ್ದು, ಹೆಚ್ಚು ತೂಕವನ್ನು ಹೊರಬಲ್ಲದು. ಈ ವಾಹನವು 300ರಿಂದ 350 ಕೆ.ಜಿ ತೂಕದ ಸರಕುಗಳನ್ನು ಸಾಗಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಈ ವಾಹನವನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೆಲ್ 72 ವಿ 42 ಎಹೆಚ್ ಹಾಗೂ ಲಿ-ಐಯಾನ್ 72 ವಿ 30 ಎಹೆಚ್‌ನ ಬ್ಯಾಟರಿ ಸಾಮರ್ಥ್ಯಗಳ ಮೇಲೆ ಈ ಮಾದರಿಗಳು ಮಾರಾಟವಾಗಲಿವೆ.

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಕೋಮಕಿ ಎಕ್ಸ್‌ಜಿಟಿ 2.0 ಜೆಲ್ ಬ್ಯಾಟರಿ ಮಾದರಿಯ ಬೆಲೆ ರೂ.75 ಸಾವಿರಗಳಾದರೆ, ಲಿ-ಐಯಾನ್ ಮಾದರಿಯ ಬೆಲೆ ರೂ.85,000ಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ ಎಷ್ಟು ದೂರ ಚಲಿಸುತ್ತದೆ?

ಕೋಮಕಿ ಕಂಪನಿಯ ಹೊಸ ವಾಹನವು ಹಲವು ಸಾಮರ್ಥ್ಯಗಳನ್ನು ಹೊಂದಿದೆ. ಈ ಹೊಸ ವಾಹನವು ಹೆಚ್ಚಿನ ತೂಕವನ್ನು ಕೊಂಡೊಯ್ಯುವುದರ ಜೊತೆಗೆ ಹೆಚ್ಚಿನ ಶ್ರೇಣಿಯನ್ನು ಸಹ ನೀಡುತ್ತದೆ. ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 125 ಕಿ.ಮೀಗಳವರೆಗೆ ಚಲಿಸುತ್ತದೆ.

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಈ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಿಂದ 30 ಕಿ.ಮೀಗಳಾಗಿದೆ. ಈ ವಾಹನದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ, 6 ಸ್ಪ್ರಿಂಗ್ ಅಸಿಸ್ಟೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ವರ್, 12 ಇಂಚಿನ ಟ್ಯೂಬ್ ಲೆಸ್ ಟಯರ್, ಸೈಡ್ ಸ್ಟ್ಯಾಂಡ್ ಮೌಂಟೆಡ್ ಫೂಟ್ ರೆಸ್ಟ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳನ್ನು ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ

ಇಷ್ಟೊಂದು ಫೀಚರ್'ಗಳನ್ನು ಹೊಂದಿರುವ ವಾಹನವನ್ನು ಕೋಮಕಿ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಕೋಮಕಿ ಕಂಪನಿಯ ಈ ಹೊಸ ವಾಹನವು ಟಿವಿಎಸ್ ಕಂಪನಿಯ ಎಕ್ಸ್‌ಎಲ್‌ ವಾಹನಕ್ಕೆ ಪೈಪೋಟಿ ನೀಡಲಿದೆ.

ಗಮನಿಸಿ: ಎರಡನೇ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Komaki launches new electric two wheeler which helps in transportation of goods. Read in Kannada.
Story first published: Monday, February 22, 2021, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X