ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಿತು. ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಮಾದರಿಯು ನೇಕೆಡ್ ರೋಡ್ಸ್ಟರ್‌ನ ಪ್ರೀಮಿಯಂ ರೂಪಾಂತರವಾಗಿದೆ.

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಮಾದರಿಯ ಕೇವಲ 500 ಯೂನಿಟ್‌ಗಳನ್ನು ಮಾತ್ರ ಪರಿಚಯಿಸಿತು. ಈ ಎಲ್ಲಾ 500 ಯೂನಿಟ್‌ಗಳು ಕೇವಲ 48 ನಿಮಿಷಗಳಲ್ಲಿ ಮಾರಾಟವಾಗಿದೆ. ಇದರ ಮೂಲಕ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್ ಬೈಕ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದಿದೆ. ಈ ಬೈಕಿನ ಅಗ್ರೇಸಿವ್ ಲುಕ್ ನಿಂದ ತಿಳಿಯುತ್ತದೆ. ಇದರ ಹೆಸರಿಗೆ ತಕ್ಕಂತೆ ಸೂಪರ್ ಇದು ಪಾರ್ಫೆಮೆನ್ಸ್ ಮಾದರಿ ಎಂಬುದು.

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕಿನಲ್ಲಿ 1,301 ಸಿಸಿ, ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 177.5 ಬಿಹೆಚ್‌ಪಿ ಪವರ್ ಮತ್ತು 140 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಕೆಟಿಎಂ ಈ ಬೈಕಿನ ತೂಕವನ್ನು ಇಳಿಸಲು ಸಾಕಷ್ಟು ಪರಿಶ್ರಮಿಸಿದ್ದಾರೆ ಎಂದು ಇದರ ವಿನ್ಯಾಸ ನೋಡಿದಾಗ ತಿಳಿಯುತ್ತದೆ. ಈ ಸೂಪರ್ ಡ್ಯೂಕ್ ಆರ್‌ಆರ್‌ ಬೈಕ್ ಒಟ್ಟು 180 ಕೆಜಿ ತೂಕವನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ 1290 ಸೂಪರ್ ಡ್ಯೂಕ್ ಆರ್ ಮಾದರಿಗಿಂತ ಒಂಬತ್ತು ಕೆಜಿ ಹಗುರವಾಗಿದೆ.

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕಿನಲ್ಲಿ ಕಾರ್ಬನ್-ಫೈಬರ್ ಬಾಡಿವರ್ಕ್, ಹಗುರವಾದ ಲಿಥಿಯಂ-ಐಯಾನ್ ಬ್ಯಾಟರಿ, ಫೋರ್ಗ್ಡ್ ವ್ಹೀಲ್ ಗಳು ಮತ್ತು ಮರುವಿನ್ಯಾಸಗೊಳಿಸಲಾದ ಸಿಂಗಲ್ ಸೀಟ್ ನೊಂದಿಗೆ ಕರ್ಬನ್-ಫೈಬರ್ ಸಬ್-ಫ್ರೇಮ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಇನ್ನು ವ್ಹೀಲ್ ಗಳನ್ನು ಮೈಕೆಲಿನ್ ಪವರ್ ಕಪ್ 2 ಟೈರ್‌ಗಳಲ್ಲಿ ಸುತ್ತಿಡಲಾಗಿದೆ. ಇತರ ಬದಲಾವಣೆಗಳು ಅಂದರೆ, ಹೊಸ ಎಲ್ಇಡಿ ಟರ್ನ್ ಸಿಗ್ನಲ್‌ಗಳಲ್ಲಿ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಕೆಟಿಎಂನ ಅಡಾಪ್ಟಿವ್ ಬ್ರೇಕ್ ಲೈಟ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕ್ ಸಹ ಸ್ಟ್ಯಾಂಡರ್ಡ್ 1290 ಸೂಪರ್ ಡ್ಯೂಕ್ಆರ್‌ಆರ್‌ ನಲ್ಲಿ ಇರುವಂತೆ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಡಬ್ಲ್ಯೂಪಿ ಅಪೆಕ್ಸ್ ಪ್ರೊ 7548 ಕ್ಲೋಸ್ ಕಾರ್ಟ್ರಿಡ್ಜ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಅಪೆಕ್ಸ್ ಪ್ರೊ 7746 ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕಿನಲ್ಲಿ ಅಕ್ರಪೋವಿಕ್ 'ಸ್ಲಿಪ್-ಆನ್ ಲೈನ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಅಕ್ರಪೋವಿಕ್ ಕಿಟ್ 'ಎವಲ್ಯೂಷನ್ ಲೈನ್ ಸಿಸ್ಟಂ ಅನ್ನು ಈ ಬೈಕಿನಲ್ಲಿ ಹೆಚ್ಚುವರಿ ಆಗಿ ನೀಡಲಾಗಿದೆ.

ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌

ನೇಕೆಡ್ ರೋಡ್ಸ್ಟರ್‌ ಕೆಟಿಎಂ 1290 ಸೂಪರ್ ಡ್ಯೂಕ್ ಆರ್‌ಆರ್‌ ಬೈಕಿನಲ್ಲಿ ಹಲವಾರು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ನೀಡಲಾಗಿದೆ. ಇದರಲ್ಲಿ ರೇರ್-ವ್ಹೀಲ್ ಸ್ಲಿಪ್, ಥ್ರೊಟಲ್ ರೆಸ್ಪಾನ್ಸ್, ಲಾಂಚ್ ಕಂಟ್ರೋಲ್ ಮತ್ತು ಮೋಟಾರ್ ಸ್ಲಿಪ್ ಕಂಟ್ರೋಲ್ ಸೇರಿವೆ. ಒಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಮತ್ತು ಉತ್ತಮ ಕಾರ್ಯಕ್ಷಮತೆಯ ಬೈಕ್ ಇದಾಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM 1290 Super Duke RR Sold Out In 48 Minutes. Read In Kananda.
Story first published: Wednesday, April 14, 2021, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X