ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಭಾರತದಲ್ಲಿ ಹಲವಾರು ಕಂಪನಿಗಳು ತಮ್ಮ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಬೈಕ್, ಸ್ಪೋರ್ಟ್ಸ್ ಬೈಕ್ ಸೇರಿದಂತೆ ಹಲವು ರೀತಿಯ ಬೈಕುಗಳನ್ನು ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಎಷ್ಟೇ ದ್ವಿಚಕ್ರ ವಾಹನಗಳು ಮಾರಾಟವಾಗುತ್ತಿದ್ದರೂ ಕೆಲವು ಕಂಪನಿಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿವೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಅಂತಹ ಕೆಲವು ಕಂಪನಿಗಳಲ್ಲಿ ಆಸ್ಟ್ರೀಯಾ ಮೂಲಕ ಕೆಟಿಎಂ (KTM) ಕಂಪನಿಯು ಸಹ ಸೇರಿದೆ. ಕೆಟಿಎಂ ಕಂಪನಿಯ ಬೈಕುಗಳು ಭಾರತದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಇತ್ತೀಚೆಗೆ ನವೀಕರಿಸಿದ RC 125 ಹಾಗೂ RC 200 ಬೈಕ್‌ಗಳನ್ನು ಕೆಟಿಎಂ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಕಂಪನಿಯು ಹೊಸ ತಲೆಮಾರಿನ RC 390 ಬೈಕ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕಂಪನಿಯು ಹೊಸ ತಲೆಮಾರಿನ ಡ್ಯೂಕ್ ಸರಣಿಯ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಭಾರತದಲ್ಲಿ ಕೆಟಿಎಂ ಬೈಕ್‌ಗಳ ಮಾರಾಟ ಪ್ರಮಾಣವು ನಿಧಾನವಾಗಿ ಹೆಚ್ಚಾಗುತ್ತಿದೆ. ಕೆಟಿಎಂ ಕಂಪನಿಯು ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶಗಳಿಂದ ಈ ಸಂಗತಿ ದೃಢಪಟ್ಟಿದೆ. ಕಳೆದ ತಿಂಗಳು ಭಾರತದಲ್ಲಿ ಒಟ್ಟು 7,126 ಕೆಟಿಎಂ ಬೈಕುಗಳು ಮಾರಾಟವಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿಗಿಂತ 5.46% ನಷ್ಟು ಹೆಚ್ಚು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 6,757 ಯುನಿಟ್ ಕೆಟಿಎಂ ಬೈಕುಗಳು ಮಾರಾಟವಾಗಿದ್ದವು. ಕಳೆದ ತಿಂಗಳ ಮಾರಾಟ ಪ್ರಮಾಣವು ಸೆಪ್ಟೆಂಬರ್ ತಿಂಗಳ ಮಾರಾಟಕ್ಕಿಂತ ಸುಮಾರು 60% ನಷ್ಟು ಹೆಚ್ಚಾಗಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೇವಲ 4,454 ಯುನಿಟ್ ಕೆಟಿಎಂ ಬೈಕ್‌ಗಳು ಮಾರಾಟವಾಗಿದ್ದವು.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಈ ಎಲ್ಲಾ ಅಂಕಿ ಅಂಶಗಳು ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಬೈಕುಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ತೋರಿಸುತ್ತವೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ 2,326 ಹಾಗೂ ಅಕ್ಟೋಬರ್ ತಿಂಗಳಿನಲ್ಲಿ 2,695 ಯುನಿಟ್‌ ಕೆಟಿಎಂ 200 ಸಿಸಿ ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಕಂಪನಿಯ ಬೈಕ್‌ಗಳ ಮಾರಾಟವು ಅಕ್ಟೋಬರ್‌ನಲ್ಲಿ ತೀವ್ರ ಏರಿಕೆ ಕಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕಂಪನಿಯು ಕಳೆದ ತಿಂಗಳು 4,696 ಯುನಿಟ್ 200 ಸಿಸಿ ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿಗಿಂತ ಎರಡು ಪಟ್ಟು ಹೆಚ್ಚು. ಕೆಟಿಎಂ ಕಂಪನಿಯು ಡ್ಯೂಕ್ 200 ಹಾಗೂ ಆರ್‌ಸಿ 200 ಬೈಕ್‌ಗಳನ್ನು 200 ಸಿಸಿ ಸೆಗ್ ಮೆಂಟಿನಲ್ಲಿ ಮಾರಾಟ ಮಾಡುತ್ತದೆ. ಹೊಸ ತಲೆಮಾರಿನ ಆರ್‌ಸಿ 200 ಬೈಕ್ ಅನ್ನು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಈ ಹೊಸ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.09 ಲಕ್ಷಗಳಾಗಿದೆ. ಹಳೆ ತಲೆಮಾರಿನ ಮಾದರಿಯೂ ಸಹ ಬಹುತೇಕ ಇದೇ ಬೆಲೆಯನ್ನು ಹೊಂದಿತ್ತು. ಕೆಟಿಎಂ ಬೈಕ್‌ಗಳು ಕಳೆದ ತಿಂಗಳು ಭಾರತದಲ್ಲಿ 390 ಸಿಸಿ ಹಾಗೂ 250 ಸಿಸಿ ನಂತರ 200 ಸಿಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕಳೆದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 1,171 ಯುನಿಟ್ 390 ಸಿಸಿ ಹಾಗೂ 1,162 ಯುನಿಟ್ 250 ಸಿಸಿ ಕೆಟಿಎಂ ಬೈಕ್‌ಗಳು ಮಾರಾಟವಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ 390ಸಿಸಿ ಕೆಟಿಎಂ ಬೈಕ್‌ಗಳ ಮಾರಾಟ ಸಾವಿರ ಯುನಿಟ್ ಗಡಿ ದಾಟಿದೆ. ಆದರೆ 250 ಸಿಸಿಯ ಕೇವಲ ಯುನಿಟ್ ಬೈಕ್‌ಗಳು ಮಾತ್ರ ಮಾರಾಟವಾಗಿದ್ದು, ಪ್ರಸ್ತುತ ಮಾರಾಟ ಪ್ರಮಾಣಕ್ಕಿಂತ ಸುಮಾರು 63.29% ನಷ್ಟು ಕಡಿಮೆಯಾಗಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು ಭಾರತದಲ್ಲಿ ಅತಿ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕಂಪನಿಯು ಸೆಪ್ಟೆಂಬರ್ ತಿಂಗಳಿನಲ್ಲಿ 1,173 ಯುನಿಟ್ ಬೈಕುಗಳನ್ನು ಮಾರಾಟ ಮಾಡಿತ್ತು. ಈ ಪ್ರಮಾಣವು ಕಳೆದ ತಿಂಗಳಿಗಿಂತ 11% ನಷ್ಟು ಹೆಚ್ಚು ಎಂಬುದು ಗಮನಾರ್ಹ. ಕಳೆದ ಸೆಪ್ಟೆಂಬರ್‌ನಲ್ಲಿ 390 ಸಿಸಿಯ 373 ಯುನಿಟ್‌ ಬೈಕುಗಳು ಮಾತ್ರ ಮಾರಾಟವಾಗಿವೆ. 390 ಸಿಸಿ ಕೆಟಿಎಂ ಬೈಕ್‌ಗಳ ಮಾರಾಟವು ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 213.94% ನಷ್ಟು ಹೆಚ್ಚಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಇನ್ನು ಕೆಟಿಎಂ ಕಂಪನಿಯ 125 ಸಿಸಿ ಬೈಕ್‌ಗಳ ಮಾರಾಟವೂ ಹೆಚ್ಚುತ್ತಿದೆ. ಕಳೆದ ತಿಂಗಳು 125 ಸಿಸಿಯ ಕೇವಲ 97 ಯುನಿಟ್ ಗಳು ಮಾತ್ರ ಮಾರಾಟವಾಗಿವೆ. ಆದರೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು ತನ್ನ 125 ಸಿಸಿಯ 2,312 ಯುನಿಟ್ ಬೈಕುಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು 125 ಸಿಸಿಯ ಒಟ್ಟು 582 ಯುನಿಟ್ ಗಳನ್ನು ಮಾರಾಟ ಮಾಡಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕೆಟಿಎಂ ಕಂಪನಿಯು ಭಾರತದಲ್ಲಿ ಬಜಾಜ್ ಆಟೋ ಕಂಪನಿಯ ಚಕಾನ್ ಉತ್ಪಾದನಾ ಘಟಕವನ್ನು ತನ್ನ ಬೈಕುಗಳ ಉತ್ಪಾದನಾ ಕಾರ್ಯಾಚರಣೆಗಳಿಗಾಗಿ ಬಳಸುತ್ತಿದೆ ಎಂಬ ವದಂತಿಗಳಿವೆ. ಇಲ್ಲಿ ಉತ್ಪಾದನೆಯಾಗುವ ಬೈಕುಗಳನ್ನು ದೇಶಿಯವಾಗಿ ಮಾರಾಟ ಮಾಡುವುದು ಮಾತ್ರವಲ್ಲದೆ ಸಾಗರೋತ್ತರ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಕಳೆದ ತಿಂಗಳು 1,154 ಯುನಿಟ್ 390 ಸಿಸಿ ಕೆಟಿಎಂ ಬೈಕ್‌ಗಳನ್ನು ರಫ್ತು ಮಾಡಲಾಗಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ 200 ಸಿಸಿ ಬೈಕ್‌ಗಳಿಗಿಂತ 390 ಸಿಸಿ ಬೈಕುಗಳನ್ನು ಹೆಚ್ಚು ರಫ್ತು ಮಾಡಲಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ KTM ಬೈಕುಗಳ ಮಾರಾಟ

ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 200 ಸಿಸಿ ಬೈಕ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಕಳೆದ ತಿಂಗಳು ಸಹ ಹೆಚ್ಚಿನ ಸಂಖ್ಯೆಯ 250 ಸಿಸಿ ಕೆಟಿಎಂ ಬೈಕ್‌ಗಳನ್ನು ರಫ್ತು ಮಾಡಲಾಗಿದ್ದರೆ, 125 ಸಿಸಿ ಕೆಟಿಎಂ ಬೈಕ್‌ಗಳ ರಫ್ತು ಸಂಖ್ಯೆ ಶೂನ್ಯ ಎಂಬುದು ಗಮನಾರ್ಹ.

Most Read Articles

Kannada
Read more on ಕೆಟಿಎಂ ktm
English summary
Ktm bike sales increases in domestic market during october 2021 details
Story first published: Monday, November 22, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X