Just In
- 1 hr ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 3 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಟಿಎಂನಿಂದ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೊಸ ಅಭಿಯಾನ ಆರಂಭ
ಗ್ರಾಹಕರು ಮತ್ತು ಕಂಪನಿಯ ನಡುವೆ ನಿರಂತರ ಸಂಪರ್ಕ ಸಾಧಿಸಲು ಹಲವಾರು ಅಭಿಯಾನಗಳನ್ನು ಕೈಗೊಳ್ಳುತ್ತಿರುವ ಕೆಟಿಎಂ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸದಾಗಿ ಅಡ್ವೆಂಚರ್ ಟ್ರಯರ್ ಆರಂಭಿಸಿದ್ದು, ದೇಶದ ಪ್ರಮುಖ ಹತ್ತು ನಗರಗಳಲ್ಲಿ ಹೊಸ ಅಭಿಯಾನ ನಡೆಯಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಹಲವಾರು ವಿದೇಶಿ ಬೈಕ್ ಮಾರಾಟ ಕಂಪನಿಗಳು ತಮ್ಮ ಜನಪ್ರಿಯ ಅಡ್ವೆಂಚರ್ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿವೆ. ಹಾಗೆಯೇ ಕೆಟಿಎಂ ಕೂಡಾ ವಿವಿಧ ಅಡ್ವೆಂಚರ್ ಬೈಕ್ ಮಾರಾಟದಲ್ಲಿ ಗ್ರಾಹಕರ ಗಮನಸೆಳೆಯುತ್ತಿದ್ದು, ಅಡ್ವೆಂಚರ್ ಬೈಕ್ ಪ್ರಿಯರನ್ನು ಸೆಳೆಯಲು ಹಲವಾರು ಹೊಸ ಅಭಿಯಾನಗಳನ್ನು ನಡೆಸುತ್ತಿದೆ.

ಭಾರತದಲ್ಲಿ ತನ್ನ ಸರಣಿ ಬೈಕ್ಗಳ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐದು ಹೊಸ ಬೈಕ್ಗಳನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಬಿಡುಗಡೆಯಾಗಿರುವ 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾದರಿಗಳು ಕಂಪನಿಯ ಜನಪ್ರಿಯತೆಯನ್ನು ಹೆಚ್ಚಿಸುತ್ತಿವೆ.

ಇದಕ್ಕೆ ಪೂರಕವಾಗಿ ಕೆಟಿಎಂ ಕಂಪನಿಯು ಅಡ್ವೆಂಚರ್ ಟ್ರಯರ್ ಆರಂಭಿಸಿದ್ದು, ಹೊಸ ಅಭಿಯಾನದ ಮೂಲಕ ಅಡ್ವೆಂಚರ್ ಮಾಲೀಕರಿಗೆ ಉತ್ತೇಜನ ನೀಡುತ್ತಿದೆ. ಅಡ್ವೆಂಚರ್ ಟ್ರಯರ್ ಮೂಲಕ ಕೆಟಿಎಂ ಕಂಪನಿಯು 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾಲೀಕರಿಗೆ ಬೈಕ್ ಚಾಲನಾ ಕೌಶಲ್ಯತೆ ಕುರಿತಾಗಿ ವಿವಿಧ ಹಂತದ ಹಲವು ತರಬೇತಿಗಳನ್ನು ನೀಡುತ್ತಿದೆ.

ಅಡ್ವೆಂಚರ್ ಟ್ರಯರ್ನಲ್ಲಿ ನುರಿತ ರೈಡರ್ಗಳಿಂದ ವಿವಿಧ ಹಂತದ ರೈಡಿಂಗ್ ಕೌಶಲ್ಯ ಪ್ರದರ್ಶನಗಳನ್ನು ಕೈಗೊಳ್ಳಲಿರುವ ಕೆಟಿಎಂ ಕಂಪನಿಯು ಫೆಬ್ರವರಿ 6 ರಿಂದ ಬೆಂಗಳೂರಿನಲ್ಲಿ ಚಾಲನೆ ನೀಡುವ ಮೂಲಕ ಕೋಲ್ಕತ್ತಾದಲ್ಲಿ ಮಾರ್ಚ್ 20ಕ್ಕೆ ಕೊನೆಗೊಳಿಸಲಿದೆ. ಅಡ್ವೆಂಚರ್ ರೈಡಿಂಗ್ ವೇಳೆ ಬೈಕ್ ಸವಾರರಿಗೆ ಹಲವಾರು ತರಬೇತಿಗಳನ್ನು ನೀಡಲಿರುವ ಕಂಪನಿಯು ಸುರಕ್ಷಿತ ರೈಡಿಂಗ್ನೊಂದಿಗೆ ಕೌಶಲ್ಯ ಪ್ರದರ್ಶನದ ಉದ್ದೇಶ ತಿಳಿಸಲಿದೆ.

ಅಡ್ವೆಂಚರ್ ಟ್ರಯಲ್ ಕಾರ್ಯಾಗಾರದಲ್ಲಿ ಆಫ್ ರೋಡ್ ರೈಡಿಂಗ್ ವೇಳೆ ಬೈಕ್ ಸೆಟಪ್ ಮಾಡುವುದು ಹೇಗೆ? ನಿಯಂತ್ರಣದ ಹಂತಗಳು ಯಾವವು? ಬೈಕ್ ಲಿಫ್ಟಿಂಗ್, ಧೀರ್ಘ ಕಾಲದ ಟೂರ್ ಆಯೋಜಿಸುವುದು ಹೇಗೆ ಎಂಬ ಹಲವಾರು ಪ್ರಶ್ನೆಗಳಿಗೆ ಅನುಭವಿ ರೈಡರ್ಗಳಿಂದ ಮಾಹಿತಿ ನೀಡುವುದರೊಂದಿಗೆ ರೈಡಿಂಗ್ ಮುಂದುವರಿಸಲಾಗುತ್ತದೆ.

ಬೈಕ್ ರೈಡಿಂಗ್ ಅಂದರೆ ಕೇವಲ ವೇಗದ ಸವಾರಿ ಮಾತ್ರವಲ್ಲ ಕಠಿಣ ಸಂದರ್ಭಗಳಲ್ಲೂ ಸುರಕ್ಷಿತವಾಗಿ ಪ್ರಯಾಣ ಕೈಗೊಳ್ಳುವುದು ಹೇಗೆ ಎಂಬ ಸವಾರಿ ಕೌಶಲ್ಯಗಳನ್ನು ಹೇಳಿಕೊಡಲಿದ್ದು, ಅಡ್ವೆಂಚರ್ ಟ್ರಯಲ್ನಲ್ಲಿನ ಮತ್ತಷ್ಟು ಹೊಸ ಅನುಭವಗಳು ಬೈಕ್ ರೈಡಿಂಗ್ ಮತ್ತಷ್ಟು ಬಲಗೊಳಿಸುತ್ತದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಅಡ್ವೆಂಚರ್ ಟ್ರಯಲ್ ಆಯೋಜನೆ ಮುಖ್ಯ ಉದ್ದೇಶ ಏನೆಂದರೆ ಆಫ್ ರೋಡ್ ಸವಾರಿಯನ್ನು ಸುರಕ್ಷಿತ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಸಂಬಂಧ ಹೊಸ ಮಾದರಿಯ ರೈಡಿಂಗ್ಗಳನ್ನು ಆಯೋಜಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ನಗರಗಳಲ್ಲಿ ಅಡ್ವೆಂಚರ್ ಟ್ರಯಲ್ಗಳನ್ನು ಆಯೋಜಿಸಲು ಕೆಟಿಎಂ ಕಂಪನಿಯು ಸಿದ್ದವಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್ಸಿ 125 ಆರ್ಸಿ 200, ಆರ್ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಮತ್ತು 890 ಡ್ಯೂಕ್ ಆರ್ ಸೂಪರ್ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.