Just In
Don't Miss!
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸೂಪರ್ ಅಡ್ವೆಂಚರ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಕೆಟಿಎಂ
ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ ಸೂಪರ್ ಅಡ್ವೆಂಚರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಇದೀಗ ಕೆಟಿಎಂ ತನ್ನ ಹೊಸ ಸೂಪರ್ ಅಡ್ವೆಂಚರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟ್ರಯಂಫ್ ಕಂಪನಿಯು 2021ರ ಜನವರಿ 26 ರಂದು ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕನ್ನು ಅನಾವರಣಗೊಳಿಸಲಿದೆ. ಕೆಟಿಎಂ ತನ್ನ ಹೊಸ ಸೂಪರ್ ಅಡ್ವೆಂಚರ್ ಬೈಕನ್ನು ಅದೇ ದಿನದಲ್ಲಿ ಅನಾವರಣಗೊಳಿಸಲಿದೆ. ಕೆಟಿಎಂ ಬಿಡುಗಡೆಗೊಳಿಸಿದ ಟೀಸರ್ ಹೊಸ 1290 ಸೂಪರ್ ಅಡ್ವೆಂಚರ್ ಬೈಕಿನದಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಕೆಟಿಎಂ ಸೂಪರ್ ಅಡ್ವೆಂಚರ್ ಬೈಕ್ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಮಾದರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದು.

ಇತ್ತೀಚೆಗೆ ಬಹಿರಂಗವಾಗಿರುವ ಮಾಹಿತಿ ಪ್ರಕಾರ, 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕ್ ಸೂಪರ್ ಅಡ್ವೆಂಚರ್ ಆರ್ ಮತ್ತು ಸೂಪರ್ ಅಡ್ವೆಂಚರ್ ಎಸ್ ಎಂಬ ಎರಡು ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕೆಟಿಎಂ ಸೂಪರ್ ಅಡ್ವೆಂಚರ್ ಆರ್ ಮತ್ತು ಸೂಪರ್ ಅಡ್ವೆಂಚರ್ ಎಸ್ ರಾಡಾರ್ ಆಧಾರಿತ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆದುಕೊಳ್ಳಲಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಾದ ಡುಕಾಟಿ ಮತ್ತು ಬಿಎಂಡಬ್ಲ್ಯು ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದ ಇದು ದೊಡ್ಡ ಆಶ್ಚರ್ಯವಲ್ಲ. ಡುಕಾಟಿಯು ತನ್ನ ಹೊಸ ಮಲ್ಟಿಸ್ಟ್ರಾಡಾ ವಿ4 ಬೈಕಿನಲ್ಲಿ ಈಗಾಗಲೇ ಈ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗಿದೆ

ಇನ್ನು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕಿನ ಎರಡು ವೆರಿಯೆಂಟ್ ಗಳು ಲೋವರ್ ಸೀಟ್ ಅನ್ನು ಹೊಂದಿದೆ. ಇದರಿಂದ ಸ್ವಲ್ಪ ಕುಳ್ಳಗೆ ಇರುವ ಸಾವಾರರಿಗೂ ಕೂಡ ರೈಡ್ ಮಾಡಲು ಸುಲಭವಾಗಿರುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕಿನಲ್ಲಿ ನವೀಕರಿಸಿದ ಎಕ್ಸಾಸ್ಟ್ ಸಿಸ್ಟಂ ಮತ್ತು ಟ್ವಿನ್ ರೇಡಿಯೇಟರ್ ಒಳಗೊಂಡಿರುತ್ತದೆ. ಈ ರೀತಿ 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕ್ ಕೆಲವು ಹೊಸ ಅಪ್ಡೇಟ್ ಗಳನ್ನು ಪಡೆದುಕೊಳ್ಳಬಹುದು.

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕಿನಲ್ಲಿ ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 158 ಬಿಹೆಚ್‌ಪಿ ಪವರ್ ಮತ್ತು 138 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕಿನ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಬಗ್ಗೆ ಹೇಳುವುದಾದರೆ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್, ಲೀನ್ ಸೆನೆಸ್ಟಿವ್ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಆಯ್ದ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿರುತ್ತದೆ.

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕಿನಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಈ ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ತನ್ನ ಆರ್‌ಸಿ ಸರಣಿಯಲ್ಲಿರುವ ಮಾದರಿಗಳನ್ನು ಅಪ್ದೇಟ್ ಮಾಡಲಾಗುತ್ತಿದೆ. ಶೀಘ್ರದಲ್ಲೇ ಭಾರತದಲ್ಲಿ ಕೆಟಿಎಂ ಕಂಪನಿಯು ತನ್ನ ಹೊಸ ಆರ್‌ಸಿ 200 ಬೈಕನ್ನು ಬಿಡುಗಡೆಗೊಳಿಸಲಿದೆ.