ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಕೆಟಿಎಂ ಇಂಡಿಯಾ ಕಂಪನಿಯು ತನ್ನ 2021ರ ಆರ್‍‍ಸಿ 390 ಸಂಪೂರ್ಣ ಫೇರ್ಡ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಭಾರತದಲ್ಲಿ ಈಗಗಾಲೇ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದ್ದಾರೆ.

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ವಿನ್ಯಾಸದಲ್ಲಿ ಕೆಲವು ಬದಲಾವಣೆಗಳೊಂದಿಗೆ 2021ರ ಕೆಟಿಎಂ ಆರ್‍‍ಸಿ 390 ಬೈಕ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಆದರೆ ಕೆಟಿಎಂ ಈ ಹೊಸ ಆರ್‍‍ಸಿ 390 ಬೈಕನ್ನು ಬಿಡುಗಡೆಗೊಳಿಸುವ ಮುನ್ನ ತಾತ್ಕಾಲಿಕವಾಗಿ ಆರ್‌ಸಿ 390 ಮಾದರಿಯನ್ನು ಹೆಸರನ್ನು ಬ್‌ಸೈಟ್‌ನಿಂದ ತೆಗೆದುಹಾಕಿದೆ. ಭಾರತದಲ್ಲಿ ಕೆಟಿಎಂ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಕಾಲೇಜ್ ಹುಡುಗರಿಂದ ಐಟಿ-ಬಿಟಿ ಕ್ಷೇತ್ರದಲ್ಲಿಯು ಕೆಟಿಎಂ ಅಭಿಮಾನಿಗಳು ಇದ್ದಾರೆ. ಕೆಟಿಎಂ ಬೈಕ್‌ಗಳ ಪವರ್ ಮತ್ತು ಪರ್ಫಾಮೆನ್ಸ್ ನೋಡಿ ಹೆಚ್ಚಿನವರು ಫಿದಾ ಆಗಿದ್ದಾರೆ.

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಇನ್ನು ಜನಪ್ರಿಯ ಕೆಟಿಎಂ ಆರ್‍‍ಸಿ 390 ಬೈಕ್ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರದಲ್ಲಿ ಈ ಹೊಸ ಕೆಟಿಎಂ ಬೈಕಿನ ವಿನ್ಯಾಸದ ಬಗ್ಗೆ ಹಲವು ಮಾಹಿತಿಗಳು ಬಹಿರಂಗವಾಗಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಹೊಸ ಕೆಟಿಎಂ ಆರ್‍‍ಸಿ 390 ಹೊಸ ಹೆಡ್‌ಲ್ಯಾಂಪ್ ಹೊಂದಿರುವ ಎಲ್ಲ ಹೊಸ ಫ್ರಂಟ್-ಎಂಡ್ ಅನ್ನು ಒಳಗೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬೈಕಿನಲ್ಲಿರುವ ಟ್ವಿನ್-ಪಾಡ್ ಪ್ರೊಜೆಕ್ಟರ್ ಅನ್ನು ಬದಲಾಯಿಸಿದೆ.

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಇನ್ನು ಈ ಹೊಸ ಬೈಕಿನ ವಿಂಡ್‌ಸ್ಕ್ರೀನ್ ದೊಡ್ಡದಾಗಿದೆ ಮತ್ತು ಹೆಚ್ಚಿನ ವೇಗದಲ್ಲಿಯು ಗಾಳಿಯ ರಕ್ಷಣೆಯನ್ನು ನೀಡುತ್ತದೆ. ಇನ್ನು ಈ ಬೈಕಿನಲ್ಲಿ ನವೀಕರಿಸಿದ ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದೆ. ಇತರ ಬದಲಾವಣೆಗಳಲ್ಲಿ ಹೊಸ ಫ್ಲೋಟಿಂಗ್-ಟೈಪ್ ಫ್ರಂಟ್ ಡಿಸ್ಕ್ ಬ್ರೇಕ್ ಸೆಟಪ್ ಜೊತೆಗೆ ಹೊಸ ಸಣ್ಣ ಸೈಡ್-ಮೌಂಟೆಡ್ ಎಕ್ಸಾಸ್ಟ್ ಎಂಡ್ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಹೆಚ್ಚುವರಿಯಾಗಿ, ಹೊಸ ಬೈಕ್ ಫೇರಿಂಗ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬೈಕಿನ ವಿನ್ಯಾಸಕ್ಕೆ ಹೋಲಿಸಿದರೆ ಹೊಸದು ಹೆಚ್ಚು ಆಕರ್ಷಕವಾಗಿದೆ, ಇನ್ನು ಹಿಂದಿನ ಮಾದರಿಯಂತೆ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಮೇಲೆ ತಿಳಿಸಿದ ಎಲ್ಲಾ ಬದಲಾವಣೆಗಳ ಹೊರತಾಗಿ, ಕಂಪನಿಯು ಹೊಸ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ನೀಡಿದೆ. 2020ರ ಮಾದರಿಯಲ್ಲಿ ಪರಿಚಯಿಸಲಾದ ಎಲ್‌ಸಿಡಿ ಯುನಿಟ್ ಅನ್ನು ಇದರಲ್ಲಿಯು ಕೂಡ ಕಾಣಬಹುದು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಹೊಸ ಕೆಟಿಎಂ ಆರ್‍‍ಸಿ 390 ಬೈಕಿನ ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವಂದು ನಿರೀಕ್ಷಿಸುತ್ತೇವೆ. ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಕೆಟಿಎಂ ವೆಬ್‌ಸೈಟ್‌ನಿಂದ ಮರೆಯಾಯ್ತು ಆರ್‌ಸಿ 390 ಬೈಕಿನ ಹೆಸರು

ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು 320 ಎಂಎಂ ದೊಡ್ಡ ಫ್ರಂಟ್ ಬ್ರೇಕ್ ಡಿಸ್ಕ್ ಅನ್ನು ಹೊಂದಿದೆ.ಹೊಸ ಕೆಟಿಎಂ ಆರ್‍‍ಸಿ 390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬಯಾಸ್ಡ್ ಬೈಕ್ ಆಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM RC 390 Removed From India Website. Read In Kannada.
Story first published: Saturday, April 10, 2021, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X