ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಸ್ಥಳೀಯವಾಗಿ ಲಭ್ಯವಾಗುವ ಬಿಡಿಭಾಗಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಯೋಜನೆಯ ಪರಿಣಾಮ ಬೈಕ್ ಉತ್ಪಾದನಾ ವೆಚ್ಚದಲ್ಲಿ ಸಾಕಷ್ಟು ಇಳಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಆತ್ಮ ನಿರ್ಭರ ಭಾರತ ಯೋಜನೆ ಅಡಿ ಹಲವು ವಾಹನ ಉತ್ಪಾದನಾ ಕಂಪನಿಗಳು ಸ್ಥಳೀಯವಾಗಿ ಲಭ್ಯವಾಗುವ ಆಟೋ ಬಿಡಿಭಾಗಗಳಿಗೆ ಆದ್ಯತೆ ನೀಡುತ್ತಿರುವ ಪರಿಣಾಮ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತಿದ್ದು, ಬೆನೆಲ್ಲಿ ಇಂಡಿಯಾ ಕಂಪನಿಯು ಸಹ ತನ್ನ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯಲ್ಲಿ ರೂ.10 ಸಾವಿರ ಇಳಿಕೆ ಮಾಡುವ ಮೂಲಕ ಕೇಂದ್ರದ ಹೊಸ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಬೆನೆಲ್ಲಿ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.99 ಲಕ್ಷ ಬೆಲೆ ಹೊಂದಿದ್ದ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯನ್ನು ರೂ. 1.89 ಲಕ್ಷಕ್ಕೆ ಇಳಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣ ಪ್ರಮಾಣ ಉತ್ಪಾದನೆಯಾದ ವಿವಿಧ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂಪೀರಿಯಲ್ 400 ನಂತರ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ಬಿಎಸ್-6 ಎಮಿಷನ್‌ ಪ್ರಕಾರ ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಉನ್ನತೀಕರಿಸಿರುವ ಬೆನೆಲ್ಲಿ ಕಂಪನಿಯು ಇಂಪೀರಿಯರ್ 400 ಬೈಕ್ ಮಾದರಿಯ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ರಾಯಲ್ ಎನ್‌ಫೀಲ್ಡ್ 350 ಬೈಕ್‌ಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಹೊಸ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದ್ದು, ಇದೀಗ ಬೆಲೆ ಇಳಿಕೆ ಮಾಡಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಬಿಎಸ್-6 ವೈಶಿಷ್ಟ್ಯತೆ ಹೊಂದಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮಾದರಿಯು 374-ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ, 29-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಕ್ಲಾಸಿಕ್ ಲುಕ್ ನೀಡುವುದಕ್ಕಾಗಿ ವಿಶೇಷ ವಿನ್ಯಾಸವುಳ್ಳ ಹೆಡ್‌ಲ್ಯಾಂಪ್, ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಎಬಿಎಸ್, ಡ್ಯುಯಲ್ ಚಾನೆಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

ಸ್ಥಳೀಯ ಬಿಡಿಭಾಗಗಳ ಬಳಕೆಗೆ ಆದ್ಯತೆ- ಬೆನೆಲ್ಲಿ ಇಂಪೀರಿಯಲ್ 400 ಬೆಲೆಯಲ್ಲಿ ಇಳಿಕೆ..!

ಈ ಮೂಲಕ ಇಂಪೀರಿಯೆಲ್ 400 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗಳಿಗೆ ನೇರ ಪೈಪೋಟಿಯನ್ನು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿವೆ.

Most Read Articles

Kannada
English summary
Localization Increased, Benelli Made Price Cut Imperiale 400. Read in kannada.
Story first published: Friday, February 5, 2021, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X