ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೇಡ್ ಇನ್ ಇಂಡಿಯಾ ಸಿಬಿ350 ಬೈಕನ್ನು ತಾಯ್ನಾಡಿನ ಮಾರುಕಟ್ಟೆಯಲ್ಲಿ ಜಿಬಿ350 ಎಂಬ ಹೆಸರಿನಲ್ಲಿ ಈಗಾಗಲೇ ಪರಿಚಯಿಸಿದೆ. ಜಪಾನ್ ಮಾರುಕಟ್ಟೆಯಲ್ಲಿ ಈ ಹೊಸ ಹೋಂಡಾ ಜಿಬಿ350 ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಹೊಸ ಹೋಂಡಾ ಜಿಬಿ350 ಬೈಕ್ ಹೈ-ಸ್ಪೆಕ್ ಎಸ್ ಮತ್ತು ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹೋಂಡಾ ಹೈನೆಸ್ ಸಿಬಿ350 ಮಾದರಿಯು ಜಿಬಿ350 ಆದರೆ ಸಿಬಿ350 ಆರ್‌ಎಸ್ ಮಾದರಿಯು ಜಿಬಿ350 ಎಸ್ ಎಂಬ ಹೆಸರಿನಲ್ಲಿ ಜಪಾನ್‌ನಲ್ಲಿ ಮಾರಾಟವಾಗಲಿದೆ. ಜಪಾನ್‌ನಲ್ಲಿರುವ ಹೋಂಡಾ ಡೀಲರ್‌ಶಿಪ್‌‍ಗಳ ಬಳಿ ಮುಂದಿನ ತಿಂಗಳು ಜಿಬಿ350 ರೆಟ್ರೋ ಕ್ರೂಸರ್ ಬೈಕ್ ತಲುಪಲಿದೆ. ಮುಂದಿನ ತಿಂಗಳಿನಲ್ಲಿಯೇ ವಿತರಣೆಯನ್ನು ಪ್ರಾರಂಭಿಸಬಹುದು. ಇನ್ನು ಈ ಬೈಕ್ ಹೊಸ ಬಣ್ಣ ಆಯ್ಕೆಗಳನ್ನು ಪಡೆಯುತ್ತದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಹೊಸ ಹೋಂಡಾ ಜಿಬಿ350 ಬೈಕಿನಲ್ಲಿ ಅದೇ 348.6ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಸಿಂಗಲ್ ಸಿಲಿಂಡರ್ ಎಂಜಿನ್ 5,500 ಆರ್‌ಪಿಎಂನಲ್ಲಿ 20.78 ಬಿಹೆಚ್‌ಪಿ ಪವರ್ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ, ಇದು ಕ್ಲಚ್ ಲಿವರ್ ಕಾರ್ಯಾಚರಣೆಯ ಹೊರೆ ಕಡಿಮೆಮಾಡಿ ಗೇರ್ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಇನ್ನು ಹೊಸ ಹೋಂಡಾ ಜಿಬಿ350 ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್--ಹೈಡ್ರಾಲಿಕ್ ಅನ್ನು ಪಡೆಯುತ್ತದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಹೊಸ ಹೋಂಡಾ ಜಿಬಿ350 ಆರ್‌‌ಎಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದರೆ, ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಈ ಹೊಸ ಹೋಂಡಾ ಜಿಬಿ350 ಬೈಕ್ ಜಪಾನ್‌ನಲ್ಲಿ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಅನಲಾಗ್ ಕೌಂಟರ್ ಮತ್ತು ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಅಳವಡಿಸಲಾಗುತ್ತದೆ

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಈ ಡಿಸ್ ಪ್ಲೇಯು ಎಬಿಎಸ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಇಕೋ ಇಂಡಿಕೇಟರ್, ರಿಯಲ್-ಟೈಮ್ ಮೈಲೇಜ್, ಸರಾಸರಿ ಮೈಲೇಜ್ ಮತ್ತು ಗೇರ್ ಪೋಷಿಸನ್ ವಿವರಗಳನ್ನು ನೀಡುತ್ತದೆ. ಇದು ಎಚ್‌ಎಸ್‌ವಿಸಿಎಸ್ (ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಜಪಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಮೇಡ್ ಇನ್ ಇಂಡಿಯಾ ಹೋಂಡಾ ಜಿಬಿ350 ಬೈಕ್ ವಿತರಣೆ

ಹೊಸ ಹೋಂಡಾ ಜಿಬಿ350 ಮತ್ತು ಹೋಂಡಾ ಜಿಬಿ 350ಎಸ್ ಎಂಬ ಎರಡು ರೂಪಾಂತರಗಳನ್ನು ಜಪಾನ್‌ನ ಹೋಂಡಾ ಡ್ರೀಮ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಬಹುಶಃ ಭಾರತದಿಂದ ಭಾರತ 350 ಸಿಸಿ ಹೋಂಡಾವನ್ನು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಬಹುದು.

Most Read Articles

Kannada
English summary
Made In India Honda GB350 Japan Delivery Details Revealed. Read In Kannada.
Story first published: Wednesday, June 23, 2021, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X