ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಈ ಮಹೀಂದ್ರಾ ಮೊಜೊ ಟೂರಿಂಗ್ ಬೈಕ್ ಆದರೂ ವಿಶಿಷ್ಟ ಶೈಲಿಯ ವಿನ್ಯಾಸವನ್ನು ಹೊಂದಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಆದರೂ ಇದು ಉತ್ತಮ ಟೂರಿಗ್ ಮಾದರಿಯ ಎಲ್ಲಾ ಮೂಲ ಗುಣಗಳನ್ನು ಹೊಂದಿದೆ. ಈ ಮಹೀಂದ್ರಾ ಮೊಜೊ ಬೈಕಿಗಾಗಿ ಆಟೊಲಾಗ್ ಡಿಸೈನ್, ಪುಣೆ ಮೂಲದ ಕಸ್ಟಮೈಸ್ ವರ್ಕ್ ಶಾಪ್ ಹೊಸ ಬಾಡಿ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಮಹೀಂದ್ರಾ ಮೊಜೊ ಎಕ್ಸ್‌ಪ್ಲೋರರ್ ಎಂದು ಕರೆಯಲ್ಪಡುವ ಈ ಬೈಕಿನ ಸ್ಟಾಕ್ ಬಾಡಿ ಪ್ಯಾನೆಲ್‌ಗಳ ಮೇಲೆ ಹೊಸ ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ ಧರಿಸಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಮೊಜೊ ಎಕ್ಸ್‌ಪ್ಲೋರರ್ ಮರುವಿನ್ಯಾಸಗೊಳಿಸಲಾದ ಫ್ಯೂಯಲ್ ಟ್ಯಾಂಕ್‌ನೊಂದಿಗೆ ಸರಿಯಾದ ಅಡ್ವೆಂಚರ್ ಬೈಕಿನಂತೆ. ಹ್ಯಾಂಡಲ್‌ಬಾರ್ ಸ್ವಲ್ಪ ಎತ್ತರವಾಗಿದ್ದರೆ, 17 ಇಂಚಿನ ಅಲಾಯ್ ವ್ಹೀಲ್ ಗಳ ಜೊತೆ ಡ್ಯುಯಲ್ ಪರ್ಪಸ್ ಟೈರ್‌ಗಳನ್ನು ನೀಡಿದೆ. ಇಂಧನ ಟ್ಯಾಂಕ್ ಕೆಳಗೆ ಮಹೀಂದ್ರಾ ಬ್ಯಾಡ್ಜ್ ಇನ್ನೂ ಹಾಗೇ ಇದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಟೂರಿಂಗ್ ಮಹೀಂದ್ರಾ ಮೊಜೊ ಬೈಕಿನಲ್ಲಿ ಗೋಲ್ಡನ್ ಬಣ್ಣದಲ್ಲಿರುವ ಫ್ರಂಟ್ ಫೋರ್ಕ್ಸ್, ಸಬ್‌ಫ್ರೇಮ್ ಮತ್ತು ಸ್ವಿಂಗಾರ್ಮ್‌ನಂತಹ ಹಾರ್ಡ್‌ವೇರ್ ಯುನಿಟ್ ಗಳನ್ನು ಉಲಿದ ಯುನಿಟ್ ಗಳಂತೆ ಕಪ್ಪಾಗಿಸಲಾಗಿದೆ. ಆದ್ದರಿಂದ ಅದರ ಕೆಳಗೆ ಸ್ಟಾಕ್ ಮಾದರಿಯಂತೆಯೇ ಕಾಣುತ್ತದೆ,

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಹೀಂದ್ರಾ ಮೊಜೊ ಬೈಕಿನಲ್ಲಿ 294.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 25.2 ಬಿಹೆಚ್‌ಪಿ ಪವರ್ ಮತ್ತು 25.96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಹಿಂದಿನ ಮಾದರಿಯು 26.3 ಬಿಹೆಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬಿಎಸ್ 6 ಮಾದರಿಯ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಮಹೀಂದ್ರಾ ಮೊಜೊ ಬೈಕಿನಲ್ಲಿ ಟ್ವಿನ್-ಪಾಡ್ ಹೆಡ್‌ಲ್ಯಾಂಪ್, ಸ್ಟೆಪ್-ಅಪ್ ಸಿಂಗಲ್ ಪೀಸ್ ಸೀಟ್, ಒಡೋಮೀಟರ್ ಮತ್ತು ಟ್ರಿಪ್-ಮೀಟರ್, ಸೈಡ್ ಮೌಂಟೆಡ್ ಎಕ್ಸಾಸ್ಟ್ ಸಿಸ್ಟಂ, ಸೆಮಿ ಡಿಜಿಟಲ್ ಕ್ಲಸ್ಟರ್ ಮತ್ತು ದೊಡ್ಡ ರೇಡಿಯೇಟರ್ ಕವರ್ ಅನ್ನು ಹೊಂದಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಿದೆ. ಇನ್ನು ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಂಸ್ಪೆಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ

ಮಹೀಂದ್ರಾ ಮೊಜೊ 300 ಬೈಕ್ ಗಾರ್ನೆಟ್ ಬ್ಲ್ಯಾಕ್, ರೂಬಿ ರೆಡ್, ರೆಡ್ ಅಗೇಟ್ ಮತ್ತು ಪರ್ಲ್ ಬ್ಲ್ಯಾಕ್ ಎಂಬ ನಾಲ್ಕು ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹೊಸ ಮಹೀಂದ್ರಾ ಮೊಜೊ 300 ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಡೊಮಿನಾರ್ 250 ಬೈಕಿಗೆ ಪೈಪೋಟಿ ನೀಡುತ್ತದೆ.

Image Courtesy: Autologue Design

Most Read Articles

Kannada
English summary
Mahindra Mojo Aero Tested, Bolt-On Adv Body Kit By Autologue Design. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X